ಶತಕೋಟಿ ಡಾಲರ್ಗಳ ಶಸ್ತ್ರಾಸ್ತ್ರಗಳಿದ್ದರೂ ಹೂಥಿಗಳು ಸೌದಿಗೆ ಸವಾಲು ಏಕೆ?
ಶತಕೋಟಿ ಡಾಲರ್ಗಳ ರಕ್ಷಣಾ ವೆಚ್ಚ, ಅತ್ಯಾಧುನಿಕ ಯುದ್ಧವಿಮಾನಗಳು ಮತ್ತು ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಗಳಿದ್ದರೂ, ಸೌದಿ ಅರೇಬಿಯಾಕ್ಕೆ ಹೂಥಿಗಳ ದಾಳಿಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲವೇಕೆ? ಸೌದಿ ಅರೇಬಿಯಾ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ದಶಕಗಳಿಂದ ನೂರಾರು ಶತಕೋಟಿ ಡಾಲರ್ಗಳನ್ನು ವೆಚ್ಚ ಮಾಡಿದೆ. ಅತ್ಯಾಧುನಿಕ ಯುದ್ಧವಿಮಾನಗಳು
ಶತಕೋಟಿ ಡಾಲರ್ಗಳ ರಕ್ಷಣಾ ವೆಚ್ಚ, ಅತ್ಯಾಧುನಿಕ ಯುದ್ಧವಿಮಾನಗಳು ಮತ್ತು ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಗಳಿದ್ದರೂ, ಸೌದಿ ಅರೇಬಿಯಾಕ್ಕೆ ಹೂಥಿಗಳ ದಾಳಿಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲವೇಕೆ? ಸೌದಿ ಅರೇಬಿಯಾ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ದಶಕಗಳಿಂದ ನೂರಾರು ಶತಕೋಟಿ ಡಾಲರ್ಗಳನ್ನು ವೆಚ್ಚ ಮಾಡಿದೆ. ಅತ್ಯಾಧುನಿಕ ಯುದ್ಧವಿಮಾನಗಳು, ಸುಧಾರಿತ ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಗಳು ಮತ್ತು ಜಗತ್ತಿನ ಪ್ರಮುಖ ಶಸ್ತ್ರಾಸ್ತ್ರ ಉತ್ಪಾದಕ ರಾಷ್ಟ್ರಗಳಿಂದ ಖರೀದಿಸಿದ ಮಿಲಿಟರಿ ಉಪಕರಣಗಳು ಸೌದಿ ಬಳಿ ಇದೆ. ಸೌದಿ ಅರೇಬಿಯಾದ ವಾರ್ಷಿಕ ರಕ್ಷಣಾ ವೆಚ್ಚ 82 ಶತಕೋಟಿ ಡಾಲರ್ಗಿಂತ ಹೆಚ್ಚು ಎಂದು ವರದಿಯೊಂದು ತಿಳಿಸಿದೆ.ಸೌದಿ ಅರೇಬಿಯಾಗೆ ಅ.24ರವರೆಗೆ ಇಂಡಿಗೊ ವಿಮಾನ ಹಾರಾಟ ರದ್ದುಆದರೆ, ಇಷ್ಟೊಂದು ಬೃಹತ್ ಪ್ರಮಾಣದ ಹಣವನ್ನು ಸೇನೆಯ ಮೇಲೆ ಹೂಡಿಕೆ ಮಾಡಿದರೂ, ದೇಶದ ಭದ್ರತೆಯನ್ನು ಸಂಪೂರ್ಣವಾಗಿ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ. ಯೆಮನ್ನ ಹೂಥಿ ಬಂಡುಕೋರರು ಬಳಸುತ್ತಿರುವ ಕಡಿಮೆ ವೆಚ್ಚದ ಡ್ರೋನ್ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಸೌದಿ ಅರೇಬಿಯಾದ ಪ್ರಮುಖ ಮೂಲಸೌಕರ್ಯಗಳಿಗೆ ಬೆದರಿಕೆಯೊಡ್ಡುತ್ತಿವೆ.ಇಂಧನ ಘಟಕಗಳು, ಮಿಲಿಟರಿ ನೆಲೆಗಳು ಮತ್ತು ಜನವಸತಿ ಪ್ರದೇಶಗಳ ಮೇಲೆ ನಡೆದ ದಾಳಿಗಳು ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ, ರಡಾರ್ ಕಣ್ಗಾವಲು, ವಿವಿಧ ಸೇನಾ ಘಟಕಗಳ ನಡುವಿನ ಸಮನ್ವಯ ಮತ್ತು ತ್ವರಿತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಅಪಾರ ಹಣಕಾಸು ಸಂಪನ್ಮೂಲಗಳು ಹೊಂದಿರುವ ಸೌದಿ ಅರೇಬಿಯಾಕ್ಕೆ ತನ್ನ ಮೇಲೆ ನಡೆಯುವ ದಾಳಿಯನ್ನೂ ತಡೆಯಲು ಸಾಧ್ಯವಾಗುತ್ತಿಲ್ಲ.ಇದಕ್ಕೆ ಕಾರಣ ಹಲವು. ದುಬಾರಿ ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಗಳ ಮಿತಿಗಳು, ರಡಾರ್ ಸಾಮರ್ಥ್ಯ ಕೊರತೆಗಳು, ಡ್ರೋನ್ ಯುದ್ಧದ ಬದಲಾಗುತ್ತಿರುವ ಸ್ವರೂಪ, ಭೌಗೋಳಿಕ ಸವಾಲುಗಳು ಮತ್ತು ಸೇನೆಯಲ್ಲಿನ ದೀರ್ಘಕಾಲದ ಸಾಂಸ್ಥಿಕ ಸಮಸ್ಯೆಗಳಿಂದ ಈ ಪರಿಸ್ಥಿತಿಗೆ ಕಾರಣವಾಗಿವೆ.ಸೌದಿ ಮೇಲೆ ಮತ್ತೆ ಹೂಥಿ ದಾಳಿ: ರಿಯಾದ್ ವಿಮಾನ ನಿಲ್ದಾಣ, ಅರಾಮ್ಕೊ ತೈಲ ಘಟಕ ಹಾನಿದುಬಾರಿ ಶಸ್ತ್ರಾಸ್ತ್ರಗಳುದಾಳಿಯನ್ನು ತಡೆಯಲು ಬಳಸುವ ಶಸ್ತ್ರಾಸ್ತ್ರಗಳ ವೆಚ್ಚ ಮತ್ತು ದಾಳಿಗಳನ್ನು ನಡೆಸಲು ಎದುರಾಳಿ ಬಳಸುವ ಶಸ್ತ್ರಾಸ್ತ್ರಗಳ ವೆಚ್ಚದ ನಡುವಿನ ಅಗಾಧ ವ್ಯತ್ಯಾಸ ಸೌದಿ ಅರೇಬಿಯಾದ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದು. ಸೌದಿ ಅರೇಬಿಯಾ ಅತ್ಯಾಧುನಿಕ ಯುದ್ಧವಿಮಾನಗಳು ಮತ್ತು ಸುಧಾರಿತ ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಇತರ ಸುಧಾರಿತ ಶಸ್ತ್ರಾಸ್ತ್ರಗಳ ದಾಳಿಯನ್ನು ಎದುರಿಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ.ಆದರೆ ಹೂಥಿ ಬಂಡುಕೋರರು ಡ್ರೋನ್ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಕೆಳಮಟ್ಟದಲ್ಲಿ ಹಾರಬಲ್ಲ ಇತರ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ. ಇವುಗಳ ಪತ್ತೆ ಮಾಡುವುದು ಮತ್ತು ಹೊಡೆದುರುಳಿಸುವುದು ತಾಂತ್ರಿಕವಾಗಿ ಸವಾಲಿನದ್ದು. ಲಕ್ಷಾಂತರ ಡಾಲರ್ ವೆಚ್ಚದ ಕ್ಷಿಪಣಿ ಪ್ರತಿಬಂಧಕವನ್ನು ಬಳಸಿಕೊಂಡು ಕೆಲವೇ ಸಾವಿರ ಡಾಲರ್ ಬೆಲೆಯ ಡ್ರೋನ್ ಅನ್ನು ಹೊಡೆದುರುಳಿಸಬೇಕಾದ ಪರಿಸ್ಥಿತಿ ಸೌದಿಯದ್ದು, ಇಂತಹ ದಾಳಿಗಳು ಪದೇಪದೇ ನಡೆದಾಗ, ಎದುರಾಳಿಯ ಅನೇಕ ಶಸ್ತ್ರಾಸ್ತ್ರಗಳನ್ನು ಯಶಸ್ವಿಯಾಗಿ ತಡೆದರೂ ರಕ್ಷಣಾ ವ್ಯವಸ್ಥೆಯ ಮೇಲೆ ಗಣನೀಯ ಹಣಕಾಸು ಮತ್ತು ಕಾರ್ಯಾಚರಣೆಯ ಒತ್ತಡ ಉಂಟಾಗುತ್ತದೆ. ರಡಾರ್ ವ್ಯಾಪ್ತಿ ಒಳಬರುವ ಕ್ಷಿಪಣಿಯನ್ನು ಹೊಡೆದುರುಳಿಸಲು, ಮೊದಲು ಅದನ್ನು ಪತ್ತೆಹಚ್ಚಬೇಕು. ನಂತರ ಅದರ ಸ್ವರೂಪವನ್ನು ಗುರುತಿಸಿ, ಸೂಕ್ತ ವ್ಯವಸ್ಥೆಯ ಮೂಲಕ ಹೊಡೆದುರುಳಿಸಬೇಕು. ಬ್ಯಾಲಿಸ್ಟಿಕ್ ಕ್ಷಿಪಣಿಗಳು ಸಾಮಾನ್ಯವಾಗಿ ನಿರ್ದಿಷ್ಟ ಪಥದಲ್ಲಿ ಹೆಚ್ಚಿನ ಎತ್ತರದಲ್ಲಿ ಚಲಿಸುತ್ತವೆ. ಹೀಗಾಗಿ ಅದನ್ನು ರಡಾರ್ಗಳು ಪತ್ತೆಹಚ್ಚುತ್ತವೆ. ಆದರೆ, ಕಡಿಮೆ ಎತ್ತರದಲ್ಲಿ ಹಾರುವ ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್ಗಳು ರಡಾರ್ ಕಣ್ಣನಿಂದ ತಪ್ಪಿಸಿಕೊಳ್ಳುತ್ತವೆ. ಡ್ರೋನ್ಗಳು ನೆಲಕ್ಕೆ ಸಮೀಪದಲ್ಲಿ ಹಾರಬಲ್ಲವು. ಹಾರುವ ದಿಕ್ಕನ್ನೂ ಬದಲಿಸಬಲ್ಲವು. ಇದರಿಂದ ಅವುಗಳನ್ನು ದೂರದಲ್ಲಿರುವಾಗಲೇ ಪತ್ತೆಹಚ್ಚುವುದು, ನಿರಂತರವಾಗಿ ಅವುಗಳ ಹಾದಿಯನ್ನು ಗುರುತಿಸುವುದು ಕಷ್ಟ. ನೆಲಮಟ್ಟದಲ್ಲಿ ಸ್ಥಾಪಿಸಿರುವ ರಡಾರ್ಗಳನ್ನು ಪತ್ತೆ ಹಚ್ಚಲು ಪರ್ವತಗಳು ಅಡ್ಡಿಯಾಗುತ್ತವೆ. ಭೂಮೇಲ್ಮೈ ಲಕ್ಷಣಗಳೂ ಕೂಡ ಕಡಿಮೆ ಎತ್ತರದಲ್ಲಿ ಹಾರುವ ವಸ್ತುಗಳನ್ನು ಪತ್ತೆಹಚ್ಚಲು ರಡಾರ್ಗೆ ಅನಾನುಕೂಲ ಮಾಡುತ್ತವೆ. ಸೌದಿ ಅರೇಬಿಯಾದ ಭೌಗೋಳಿಕತೆಸೌದಿ ಅರೇಬಿಯಾದ ಭೌಗೋಳಿಕ ವಿಸ್ತೀರ್ಣವೂ ರಕ್ಷಣಾ ವ್ಯವಸ್ಥೆಗೆ ಸವಾಲೊಡ್ಡುತ್ತದೆ. ಪರ್ಷಿಯನ್ ಕೊಲ್ಲಿಯುದ್ದಕ್ಕೂ ಉದ್ದವಾದ ಕರಾವಳಿ, ಕೆಂಪು ಸಮುದ್ರದ ಕರಾವಳಿ, ವಿಸ್ತಾರವಾದ ಭೂಗಡಿ ಮತ್ತು ವಿಶಾಲ ಪ್ರದೇಶಗಳಲ್ಲಿ ಹರಡಿರುವ ಪ್ರಮುಖ ಮೂಲಸೌಕರ್ಯಗಳನ್ನು ಸೌದಿ ಅರೇಬಿಯಾ ಹೊಂದಿದೆ.ದೇಶದ ತೈಲ ಘಟಕಗಳು, ಮಿಲಿಟರಿ ನೆಲೆಗಳು, ವಿಮಾನ ನಿಲ್ದಾಣಗಳು ಮತ್ತು ಜನವಸತಿ ಪ್ರದೇಶಗಳು ಒಂದೇ ಸ್ಥಳದಲ್ಲಿ ಇಲ್ಲ. ಸೌದಿ ಅರೇಬಿಯಾ ತನ್ನ ತೈಲ ಸಂಪತ್ತಿನ ಪ್ರಮುಖ ಕೇಂದ್ರವಾಗಿರುವ ಪೂರ್ವ ಪ್ರಾಂತ್ಯದಲ್ಲಿ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸ್ಥಾಪಿಸಿದೆ .ಆದರೆ, ಹೂಥಿ ಬಂಡುಕೋರರು ಯೆಮನ್ನಲ್ಲಿ ನೆಲೆಗೊಂಡಿದ್ದು, ಅದು ಸೌದಿ ಅರೇಬಿಯಾದ ನೈಋತ್ಯ ದಿಕ್ಕಿನಲ್ಲಿದೆ.ಪೂರ್ವದಲ್ಲಿನ ತೈಲ ಘಟಕಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ, ದಕ್ಷಿಣ ಮತ್ತು ನೈಋತ್ಯದಿಂದ ಬರುವ ದಾಳಿಗಳನ್ನು ಎದುರಿಸುವಲ್ಲಿ ಸೌದಿ ಅರೇಬಿಯಾಕ್ಕೆ ಸವಾಲು ಎದುರಾಗಬಹುದು. ಪರ್ವತ ಪ್ರದೇಶಗಳ ಮೂಲಕ ಕಡಿಮೆ ಎತ್ತರದಲ್ಲಿ ಹಾರುವ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಪತ್ತೆಹಚ್ಚಲು ನೆಲಮಟ್ಟದ ರಡಾರ್ಗಳಿಗೂ ಅಸಾಧ್ಯ. ಹೀಗಾಗಿ, ಸಾಕಷ್ಟು ರಕ್ಷಣಾ ವ್ಯವಸ್ಥೆಗಳಿದ್ದರೂ, ಅವುಗಳ ನಿಯೋಜನೆ ಮತ್ತು ವ್ಯಾಪ್ತಿಯಲ್ಲಿನ ಮಿತಿಗಳು ದೇಶದ ಭದ್ರತೆಗೆ ಸವಾಲಾಗುತ್ತಿದೆ.ಸೌದಿ: ಜಾಗರೂಕರಾಗಿರಲು ಭಾರತದ ನಾಗರಿಕರಿಗೆ ಸಲಹೆ ಹೂಥಿಗಳ ಸೇನಾ ಸಾಮರ್ಥ್ಯಯೆಮನ್ನ ರಾಜಧಾನಿ ಸನಾವನ್ನು 2014ರಲ್ಲಿ ವಶಪಡಿಸಿಕೊಂಡ ಹೂಥಿಗಳು, 2015ರಲ್ಲಿ ಸೌದಿ ಅರೇಬಿಯಾ ನೇತೃತ್ವದ ಸೇನಾ ಕಾರ್ಯಾಚರಣೆ ಆರಂಭವಾದ ಬಳಿಕವೂ ತಮ್ಮ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ. ಇರಾನ್ ಶಸ್ತ್ರಾಸ್ತ್ರ, ತಾಂತ್ರಿಕ ನೆರವು ಮತ್ತು ತರಬೇತಿ ಒದಗಿಸಿದೆ ಎಂದು ಅಂತರರಾಷ್ಟ್ರೀಯ ವರದಿಗಳು ತಿಳಿಸಿವೆ.ಆದರೆ, ಹೂಥಿಗಳ ಸೇನಾ ಸಾಮರ್ಥ್ಯ ಕೇವಲ ಇರಾನ್ನಿಂದ ಬರುವ ಶಸ್ತ್ರಾಸ್ತ್ರಗಳನ್ನಷ್ಟೇ ಅವಲಂಬಿಸಿಲ್ಲ. ರಾಯಿಟರ್ಸ್ನ 2026ರ ಅಕ್ಟೋಬರ್ 15ರ ವರದಿಯ ಪ್ರಕಾರ, ಅವರು ಡ್ರೋನ್ ಮತ್ತು ಕ್ಷಿಪಣಿಗಳನ್ನು ಸ್ಥಳೀಯವಾಗಿ ಜೋಡಿಸುವ ಪರಿಣತಿ ಬೆಳೆಸಿಕೊಂಡಿದ್ದು, ವಾಣಿಜ್ಯ ಮಾರ್ಗಗಳ ಮೂಲಕ ಬಿಡಿಭಾಗಗಳನ್ನು ಪಡೆಯುತ್ತಿದ್ದಾರೆ.ಇದರಿಂದ ಅವರ ಪೂರೈಕೆ ಮಾರ್ಗಗಳನ್ನು ತಡೆದು, ಸಾಮರ್ಥ್ಯವನ್ನು ಕುಗ್ಗಿಸುವುದು ಹೆಚ್ಚು ಸಂಕೀರ್ಣವಾಗಿದೆ. ಸ್ಥಳೀಯವಾಗಿ ಶಸ್ತ್ರಾಸ್ತ್ರಗಳನ್ನು ಜೋಡಿಸುವ ಸಾಮರ್ಥ್ಯವು ಹೂಥಿಗಳಿಗೆ ವಿದೇಶಿ ಪೂರೈಕೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸೇನಾ ಕಾರ್ಯಾಚರಣೆಗಳನ್ನು ಮುಂದುವರಿಸಲು ನೆರವಾಗುತ್ತದೆ.ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಘರ್ಷವು, ಹೂಥಿಗಳಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ಸುಧಾರಣೆ ಹಾಗೂ ಎದುರಾಳಿಯ ರಕ್ಷಣಾ ವ್ಯವಸ್ಥೆಗಳಿಗೆ ಹೊಂದಿಕೊಳ್ಳಲು ಅವಕಾಶ ನೀಡಿದೆ. ಯುದ್ಧದ ಸ್ವರೂಪ ಬದಲಿಸುತ್ತಿರುವ ಅಗ್ಗದ ಶಸ್ತ್ರಾಸ್ತ್ರಗಳು ಸೌದಿ ಅರೇಬಿಯಾದಷ್ಟು ದೊಡ್ಡ ವಾಯುಪಡೆ ಅಥವಾ ಬೃಹತ್ ರಕ್ಷಣಾ ಬಜೆಟ್ ಹೂಥಿಗಳಿಗೆ ಇಲ್ಲ. ಆದರೆ, ಕಡಿಮೆ ವೆಚ್ಚದ ಡ್ರೋನ್ಗಳು ಮತ್ತು ಕ್ಷಿಪಣಿಗಳ ಮೂಲಕ ದುಬಾರಿ ಮೂಲಸೌಕರ್ಯಗಳಿಗೆ ಬೆದರಿಕೆಯೊಡ್ಡಿ, ಸೌದಿ ಅರೇಬಿಯಾ ತನ್ನ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳನ್ನು ನಿರಂತರವಾಗಿ ಬಳಸುವಂತೆ ಮಾಡಬಹುದು.ದುಬಾರಿ ಕ್ಷಿಪಣಿ ಪ್ರತಿಬಂಧಕಗಳನ್ನು ಬಳಸಿ ಅಗ್ಗದ ಡ್ರೋನ್ಗಳನ್ನು ಹೊಡೆದುರುಳಿಸಬೇಕಾದ ಪರಿಸ್ಥಿತಿ ಎದುರಾಳಿಯ ರಕ್ಷಣಾ ವೆಚ್ಚವನ್ನು ಹೆಚ್ಚಿಸುತ್ತದೆ. ಹೀಗಾಗಿ, ಶಸ್ತ್ರಾಸ್ತ್ರಗಳ ಬೆಲೆಗಿಂತ ಅವು ಎದುರಾಳಿಯ ರಕ್ಷಣಾ ವ್ಯವಸ್ಥೆಯ ಮೇಲೆ ಉಂಟುಮಾಡುವ ಒತ್ತಡವೂ ಯುದ್ಧದ ಫಲಿತಾಂಶದಲ್ಲಿ ಮಹತ್ವ ಪಡೆಯುತ್ತದೆ.ಸೇನೆಯ ರಚನೆಯೇ ಸವಾಲುಸೌದಿ ಅರೇಬಿಯಾದ ಸಮಸ್ಯೆ ಕೇವಲ ಶಸ್ತ್ರಾಸ್ತ್ರಗಳಿಗಷ್ಟೇ ಸೀಮಿತವಾಗಿಲ್ಲ. ಸೇನೆಯ ಸಂಘಟನಾ ರಚನೆಯೂ ಸವಾಲಾಗಿದೆ. ವರದಿಯ ಪ್ರಕಾರ, ದೇಶದ ನಿಯಮಿತ ಸೇನೆಯಲ್ಲಿ ಸುಮಾರು 2.5 ಲಕ್ಷ ಹಾಗೂ ನ್ಯಾಷನಲ್ ಗಾರ್ಡ್ನಲ್ಲಿ 1.25 ಲಕ್ಷ ಸಿಬ್ಬಂದಿ ಇದ್ದಾರೆ. ಎರಡೂ ಪಡೆಗಳು ವಿಭಿನ್ನ ಜವಾಬ್ದಾರಿಗಳನ್ನು ಹೊಂದಿವೆ.ನಿಯಮಿತ ಸೇನೆಯು ರಾಷ್ಟ್ರೀಯ ರಕ್ಷಣೆಯ ಜವಾಬ್ದಾರಿ ನಿರ್ವಹಿಸಿದರೆ, ನ್ಯಾಷನಲ್ ಗಾರ್ಡ್ ಆಂತರಿಕ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ರಾಜಮನೆತನದ ಅಧಿಕಾರವನ್ನು ರಕ್ಷಿಸುವ ಉದ್ದೇಶದಿಂದ ಸೇನಾ ಬಲವನ್ನು ಪ್ರತ್ಯೇಕ ಪಡೆಗಳಲ್ಲಿ ಹಂಚಿರುವುದು ಈ ವ್ಯವಸ್ಥೆಯ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.ಆದರೆ, ಈ ಪ್ರತ್ಯೇಕ ರಚನೆಯು ಆಧುನಿಕ ಯುದ್ಧದಲ್ಲಿ ಸಮನ್ವಯದ ಸವಾಲುಗಳನ್ನು ಸೃಷ್ಟಿಸಿದೆ. ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಎದುರಿಸಲು ರಡಾರ್, ಗುಪ್ತಚರ ವ್ಯವಸ್ಥೆಗಳು, ವಾಯು ರಕ್ಷಣಾ ಘಟಕಗಳು ಮತ್ತು ಯುದ್ಧವಿಮಾನಗಳು ತ್ವರಿತವಾಗಿ ಮಾಹಿತಿ ಹಂಚಿಕೊಂಡು ಕಾರ್ಯನಿರ್ವಹಿಸಬೇಕು.ಸೇನಾ ನಿರ್ಧಾರಗಳು ಹೆಚ್ಚು ಕೇಂದ್ರೀಕೃತವಾಗಿದ್ದರೆ ಅಥವಾ ವಿವಿಧ ಘಟಕಗಳ ನಡುವೆ ಸಮನ್ವಯದ ಕೊರತೆಯಿದ್ದರೆ, ತ್ವರಿತವಾಗಿ ಬದಲಾಗುವ ಬೆದರಿಕೆಗಳಿಗೆ ಪ್ರತಿಕ್ರಿಯಿಸುವುದು ಕಷ್ಟವಾಗುತ್ತದೆ. ಹೀಗಾಗಿ, ಸೇನೆಯ ಗಾತ್ರ ಮತ್ತು ಶಸ್ತ್ರಾಸ್ತ್ರಗಳ ಗುಣಮಟ್ಟದಷ್ಟೇ ಅದರ ಸಂಘಟನಾ ಸಾಮರ್ಥ್ಯವೂ ಮುಖ್ಯ.ಯೆಮನ್ ಸರ್ಕಾರದ ಪ್ರಧಾನ ಕಚೇರಿ ಮೇಲೆ ಹೂಥಿ ಕ್ಷಿಪಣಿ ದಾಳಿ: ಐವರ ಸಾವುರಿಯಾದ್ ವಿಮಾನ ನಿಲ್ದಾಣದ ಮೇಲಿನ ದಾಳಿ: ರಕ್ಷಣಾ ವ್ಯವಸ್ಥೆಗೆ ಸವಾಲು2026ರ ಅಕ್ಟೋಬರ್ 10ರಂದು ರಿಯಾದ್ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಹೂಥಿದಾಳಿಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಸೌದಿ ಅರೇಬಿಯಾದ ಮೇಲೆ ನಡೆದ ಅತ್ಯಂತ ಮಾರಕ ದಾಳಿಗಳಲ್ಲಿ ಅದೂ ಒಂದು.ರಾಜಧಾನಿಯ ಪ್ರಮುಖ ವಿಮಾನ ನಿಲ್ದಾಣದ ಮೇಲಿನ ದಾಳಿಯು ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ಮತ್ತು ನಾಗರಿಕ ಮೂಲಸೌಕರ್ಯಗಳ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ‘ಅಸೋಸಿಯೇಟೆಡ್ ಪ್ರೆಸ್’ ವರದಿಯ ಪ್ರಕಾರ, ಹೂಥಿಗಳು ಮೊದಲು ಹಲವು ಡ್ರೋನ್ಗಳನ್ನು ಉಡಾಯಿಸಿ, ಬಳಿಕ ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದರು. ದಾಳಿಯನ್ನು ತಡೆಯಲು ಯಾಕೆ ಸಾಧ್ಯವಾಗಿಲ್ಲ ಎನ್ನುವುದರ ಬಗ್ಗೆ ಸೌದಿ ಅರೇಬಿಯಾ ತನಿಖೆ ಆರಂಭಿಸಿತ್ತು. ಮುನ್ನೆಚ್ಚರಿಕೆ ನೀಡುವಲ್ಲಿ ರಕ್ಷಣಾ ವ್ಯವಸ್ಥೆ ಏಕೆ ವಿಫಲವಾಯಿತು ಎಂಬ ಬಗ್ಗೆಯೂ ಪರಿಶೀಲನೆ ನಡೆದಿತ್ತು. ಸೌದಿ ಅರೇಬಿಯಾದ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳಿದ್ದರೂ, ತನ್ನೆಲ್ಲ ಪ್ರಮುಖ ಸ್ಥಳಗಳನ್ನು ದಾಳಿಯಿಂದ ಸಂಪೂರ್ಣವಾಗಿ ರಕ್ಷಿಸಿಕೊಳ್ಳುವುದು ಇನ್ನೂ ಸವಾಲಾಗಿದೆ ಎಂಬುದನ್ನು ಮುನ್ನೆಲೆಗೆ ತಂದಿದೆ.ಆರ್ಥಿಕ ಪರಿಣಾಮಹೂಥಿಗಳ ದಾಳಿಗಳ ಪರಿಣಾಮ ಸೇನಾ ಭದ್ರತೆಗೆ ಮಾತ್ರ ಸೀಮಿತವಾಗಿಲ್ಲ. ತೈಲ ಆದಾಯದ ಮೇಲಿನ ಅವಲಂಬನೆ ಕಡಿಮೆ ಮಾಡಿ, ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಮತ್ತು ವಿದೇಶಿ ಹೂಡಿಕೆ ಆಕರ್ಷಿಸಲು ಪ್ರಯತ್ನಿಸುತ್ತಿರುವ ಸೌದಿ ಅರೇಬಿಯಾಕ್ಕೆ ಮೂಲಸೌಕರ್ಯಗಳ ಭದ್ರತೆ ನಿರ್ಣಾಯಕವಾಗಿದೆ.ವಿಮಾನ ನಿಲ್ದಾಣಗಳು ಮತ್ತು ಇಂಧನ ಘಟಕಗಳ ಮೇಲಿನ ದಾಳಿಗಳು ಹೂಡಿಕೆದಾರರು, ಉದ್ಯಮಗಳು ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರ ವಿಶ್ವಾಸವನ್ನು ಕುಂದಿಸಬಹುದು. ರಾಯಿಟರ್ಸ್ನ 2026ರ ಅಕ್ಟೋಬರ್ 15ರ ವರದಿಯೂ ರಿಯಾದ್ ವಿಮಾನ ನಿಲ್ದಾಣ ಮತ್ತು ಸೌದಿ ಅರಾಮ್ಕೊ ಘಟಕಗಳ ಮೇಲಿನ ದಾಳಿಗಳು ದೇಶದ ಆರ್ಥಿಕ ವೈವಿಧ್ಯೀಕರಣದ ಪ್ರಯತ್ನಗಳಿಗೆ ಭದ್ರತಾ ಆತಂಕಗಳನ್ನು ಸೃಷ್ಟಿಸಿರುವುದನ್ನು ಉಲ್ಲೇಖಿಸಿದೆ.ವಿಮಾನ ನಿಲ್ದಾಣಗಳು ಪ್ರವಾಸೋದ್ಯಮ ಮತ್ತು ಅಂತರರಾಷ್ಟ್ರೀಯ ಸಂಪರ್ಕಕ್ಕೆ, ಇಂಧನ ಘಟಕಗಳು ರಫ್ತು ಆದಾಯಕ್ಕೆ ಪ್ರಮುಖವಾಗಿವೆ. ಇವುಗಳಿಗೆ ಬೆದರಿಕೆ ಎದುರಾದರೆ ಕಾರ್ಯಾಚರಣೆಯ ಅನಿಶ್ಚಿತತೆ ಹೆಚ್ಚಬಹುದು ಮತ್ತು ವಾಣಿಜ್ಯ ಚಟುವಟಿಕೆಗಳ ಮೇಲೂ ಪರಿಣಾಮ ಬೀರಬಹುದು.ಹೀಗಾಗಿ, ಮೂಲಸೌಕರ್ಯಗಳ ಮೇಲಿನ ದಾಳಿಗಳು ಸೇನಾ ಭದ್ರತೆಯ ಸಮಸ್ಯೆಯಷ್ಟೇ ಅಲ್ಲ; ಸೌದಿ ಅರೇಬಿಯಾದ ಆರ್ಥಿಕ ಅಭಿವೃದ್ಧಿ ಮತ್ತು ವಿದೇಶಿ ಹೂಡಿಕೆ ಆಕರ್ಷಿಸುವ ಪ್ರಯತ್ನಗಳಿಗೂ ಸವಾಲಾಗಿವೆ.ವೈಮಾನಿಕ ದಾಳಿಗಳಿಂದ ಮಾತ್ರ ಹೂಥಿಗಳನ್ನು ಸೋಲಿಸಲು ಸಾಧ್ಯವೇ?2015ರಿಂದ ಸೌದಿ ಅರೇಬಿಯಾ ಹೂಥಿಗಳ ವಿರುದ್ಧ ವ್ಯಾಪಕ ಸೇನಾ ಕಾರ್ಯಾಚರಣೆ ನಡೆಸುತ್ತಿದ್ದರೂ, ಅವರನ್ನು ಸಂಪೂರ್ಣವಾಗಿ ಸೋಲಿಸಲು ಸಾಧ್ಯವಾಗಿಲ್ಲ. ಆರಂಭದಲ್ಲಿ ಹೂಥಿಗಳನ್ನು ಹಿಮ್ಮೆಟ್ಟಿಸಿ, ಯೆಮನ್ನಲ್ಲಿ ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸರ್ಕಾರವನ್ನು ಮರುಸ್ಥಾಪಿಸುವುದು ಸೌದಿ ನೇತೃತ್ವದ ಕಾರ್ಯಾಚರಣೆಯ ಉದ್ದೇಶವಾಗಿತ್ತು. ಆದರೆ, ಸಂಘರ್ಷ ದೀರ್ಘವಾಗಿ ಮುಂದುವರಿಯಿತು. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ 2022ರಲ್ಲಿ ಕದನ ವಿರಾಮ ಜಾರಿಗೆ ಬಂದರೂ, ಮೂಲ ರಾಜಕೀಯ ವಿವಾದಗಳು ಬಗೆಹರಿಯಲಿಲ್ಲ.ಹೂಥಿಗಳ ಶಸ್ತ್ರಾಸ್ತ್ರ ಘಟಕಗಳು ಮತ್ತು ಉಡಾವಣಾ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸುವುದರಿಂದ ಅವರ ಸೇನಾ ಸಾಮರ್ಥ್ಯವನ್ನು ಕುಗ್ಗಿಸಬಹುದು. ಆದರೆ, ಅವರ ರಾಜಕೀಯ ಸಂಘಟನೆ ಮತ್ತು ಭೂಪ್ರದೇಶದ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಕೊನೆಗೊಳಿಸುವುದು ಕಷ್ಟ. ಯೆಮನ್ನ ಪರ್ವತಮಯ ಭೂಪ್ರದೇಶದಲ್ಲಿ ಭೂಸೇನಾ ಕಾರ್ಯಾಚರಣೆ ನಡೆಸುವುದೂ ದೀರ್ಘಕಾಲದ ಹೋರಾಟ ಮತ್ತು ಹೆಚ್ಚಿನ ಜೀವಹಾನಿ ಉಂಟು ಮಾಡುವ ಸಾಧ್ಯತೆ ಇದೆ.ಇದರ ಜೊತೆಗೆ, ಸೌದಿ ಅರೇಬಿಯಾದ ಬೆಂಬಲ ಹೊಂದಿರುವ ಹೂಥಿ ವಿರೋಧಿ ಪಡೆಗಳಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಇದರಿಂದ ಹೂಥಿಗಳಿಗೆ ಪರ್ಯಾಯವಾದ ಏಕೀಕೃತ ರಾಜಕೀಯ ಮತ್ತು ಸೇನಾ ವ್ಯವಸ್ಥೆಯನ್ನು ರೂಪಿಸುವುದು ಕಷ್ಟವಾಗಿದೆ. ಪ್ರಾದೇಶಿಕ ಸಂಘರ್ಷದ ಮತ್ತೊಂದು ಆಯಾಮಹೂಥಿಗಳಿಂದ ಎದುರಾಗಿರುವ ಬೆದರಿಕೆಗೆ ಇರಾನ್ನೊಂದಿಗಿನ ಪ್ರಾದೇಶಿಕ ಸಂಘರ್ಷವೂ ಕಾರಣವಾಗಿದೆ. ಇರಾನ್ ಹೂಥಿಗಳಿಗೆ ಶಸ್ತ್ರಾಸ್ತ್ರ, ತರಬೇತಿ ಮತ್ತು ತಾಂತ್ರಿಕ ನೆರವು ನೀಡಿದೆ ಎಂದು ವಿವಿಧ ವರದಿಗಳು ತಿಳಿಸಿವೆ. ಆದರೆ, ಹೂಥಿಗಳು ಇರಾನ್ನ ನಿರ್ದೇಶನದಂತೆ ಮಾತ್ರ ಕಾರ್ಯನಿರ್ವಹಿಸುವ ಸಂಘಟನೆಯಲ್ಲ. ಅವರಿಗೆ ತಮ್ಮದೇ ರಾಜಕೀಯ ಗುರಿಗಳು ಮತ್ತು ಹಿತಾಸಕ್ತಿಗಳಿವೆ.ಹೀಗಾಗಿ, ಸೌದಿ ಅರೇಬಿಯಾ ಎರಡು ಸವಾಲುಗಳನ್ನು ಎದುರಿಸುತ್ತಿದೆ: ಹೂಥಿಗಳ ದಾಳಿಗಳನ್ನು ತಡೆಯುವುದು ಮತ್ತು ಇರಾನ್ನೊಂದಿಗಿನ ವಿಶಾಲ ಸಂಘರ್ಷವನ್ನು ನಿರ್ವಹಿಸುವುದು.2026ರ ಅಕ್ಟೋಬರ್ 15ರ ‘ರಾಯಿಟರ್ಸ್’ ವರದಿಯ ಪ್ರಕಾರ, ಇರಾನ್ ಒಳಗೊಂಡ ಯುದ್ಧವು ಅಮೆರಿಕ ಮತ್ತು ಅದರ ಪಾಲುದಾರರ ಕ್ಷಿಪಣಿ ಪ್ರತಿಬಂಧಕಗಳ ಪೂರೈಕೆಯ ಮೇಲೆ ಒತ್ತಡ ಹೆಚ್ಚಿಸಿದೆ. ಇದೇ ವೇಳೆ, ಹೂಥಿಗಳು ತಮ್ಮ ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ವಿಸ್ತರಿಸಿಕೊಂಡು ಪೂರೈಕೆ ಜಾಲಗಳನ್ನು ವೈವಿಧ್ಯಗೊಳಿಸಿರುವುದು ಸೌದಿ ಅರೇಬಿಯಾದ ಸವಾಲನ್ನು ಮತ್ತಷ್ಟು ಹೆಚ್ಚಿಸಿದೆ.ಇರಾನ್ನ ಪ್ರಾದೇಶಿಕ ಪ್ರಭಾವವು ಸೌದಿ ಅರೇಬಿಯಾದ ಮೇಲಿನ ಒತ್ತಡವನ್ನು ಹೆಚ್ಚಿಸಬಹುದು. ಹೂಥಿಗಳ ದಾಳಿಗಳು ಸೌದಿಯ ರಕ್ಷಣಾ ವೆಚ್ಚವನ್ನೂ ಹೆಚ್ಚಿಸಿ, ಅದರ ಸೇನಾ ಸಂಪನ್ಮೂಲಗಳ ಮೇಲೆ ಹೆಚ್ಚುವರಿ ಹೊರೆ ಉಂಟುಮಾಡಬಹುದು. ಹೀಗಾಗಿ, ಹೂಥಿಗಳ ದಾಳಿಗಳನ್ನು ನಿಯಂತ್ರಿಸುವುದಷ್ಟೇ ಸೌದಿ ಅರೇಬಿಯಾದ ಮುಂದಿರುವ ಸವಾಲಲ್ಲ. ಸಂಘರ್ಷವನ್ನು ಮತ್ತಷ್ಟು ವಿಸ್ತರಿಸದೆ, ಇರಾನ್ನೊಂದಿಗಿನ ಉದ್ವಿಗ್ನತೆಯನ್ನು ನಿರ್ವಹಿಸುತ್ತಾ ತನ್ನ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ. ಬಾಬ್ ಅಲ್ ಮಂದೇಬ್ ಜಲಸಂಧಿಯೆಮನ್ ಮತ್ತು ಆಫ್ರಿಕಾದ ಹಾರ್ನ್ ಪ್ರದೇಶದ ನಡುವೆ ಇರುವ ಬಾಬ್ ಅಲ್ ಮಂದೇಬ್ ಜಲಸಂಧಿಯು ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಗೆ ಸಂಪರ್ಕಿಸುತ್ತದೆ. ತೈಲ ಸೇರಿದಂತೆ ಹಲವು ಸರಕುಗಳನ್ನು ಸಾಗಿಸುವ ಹಡಗುಗಳು ಈ ಮಾರ್ಗವನ್ನು ಅವಲಂಬಿಸಿವೆ. ಈ ಮಾರ್ಗದಲ್ಲಿ ಹೂಥಿಗಳಿಂದ ಬೆದರಿಕೆ ಎದುರಾದರೆ, ಹಡಗುಗಳ ವಿಮಾ ವೆಚ್ಚ ಮತ್ತು ಸರಕು ಸಾಗಣೆ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ಸೌದಿ ಅರೇಬಿಯಾ ಮಾತ್ರವಲ್ಲದೆ, ಅಂತರರಾಷ್ಟ್ರೀಯ ವ್ಯಾಪಾರವನ್ನೂ ಅವಲಂಬಿಸಿರುವ ಹಲವು ದೇಶಗಳ ಮೇಲೆ ಪರಿಣಾಮ ಬೀರುತ್ತದೆ.ಹೀಗಾಗಿ, ಹೂಥಿಗಳ ದಾಳಿಗಳನ್ನು ತನ್ನ ನಗರಗಳನ್ನು ರಕ್ಷಿಸುವುದರ ಜೊತೆಗೆ, ತೈಲ ರಫ್ತು ಮತ್ತು ಅಂತರರಾಷ್ಟ್ರೀಯ ಸಮುದ್ರ ಮಾರ್ಗಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದೂ ಸೌದಿಗೆ ಅಷ್ಟೇ ಮುಖ್ಯವಾಗಿದೆ.ಸೌದಿಯಲ್ಲಿ ಹೂಥಿ ದಾಳಿಗೆ 12 ಜನ ಸಾವು, 300ಕ್ಕೂ ಹೆಚ್ಚು ಮಂದಿಗೆ ಗಾಯಮಿತ್ರರಾಷ್ಟ್ರಗಳ ನೆರವುಸೌದಿ ಅರೇಬಿಯಾದ ರಕ್ಷಣಾ ವ್ಯವಸ್ಥೆಯಲ್ಲಿ ಅಮೆರಿಕ ಬಹುಕಾಲದಿಂದ ಪ್ರಮುಖ ಪಾಲುದಾರ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ತರಬೇತಿ, ಗುಪ್ತಚರ ಮಾಹಿತಿ ಮತ್ತು ತಾಂತ್ರಿಕ ನೆರವನ್ನು ವಾಷಿಂಗ್ಟನ್ ಒದಗಿಸುತ್ತಿದೆ. ಆದರೆ, ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳು ಮತ್ತು ವಿದೇಶಿ ನೆರವಿನ ಮೇಲಿನ ಅವಲಂಬನೆಯೂ ಸೌದಿಗೆ ಸವಾಲಾಗಿದೆ.2026ರ ಅಕ್ಟೋಬರ್ 12ರ ‘ಅಸೋಸಿಯೇಟೆಡ್ ಪ್ರೆಸ್’ ವರದಿಯ ಪ್ರಕಾರ, ಹೂಥಿಗಳ ದಾಳಿಗಳನ್ನು ಎದುರಿಸಲು ಅಮೆರಿಕ ನೇರವಾಗಿ ಪಾಲ್ಗೊಳ್ಳಬೇಕೆಂದು ಸೌದಿ ಅರೇಬಿಯಾ ಬಯಸಿತ್ತು. ಆದರೆ, ಆ ಹಂತದಲ್ಲಿ ಅಮೆರಿಕ ಗುಪ್ತಚರ ಮಾಹಿತಿ ಮತ್ತು ಕಾರ್ಯತಂತ್ರದ ಯೋಜನೆಯಲ್ಲಿ ನೆರವು ನೀಡುತ್ತಿದ್ದರೂ, ಹೊಸ ಸೇನಾ ಕಾರ್ಯಾಚರಣೆ ಆರಂಭಿಸುವ ಭರವಸೆ ನೀಡಿರಲಿಲ್ಲ.ಅಮೆರಿಕದ ಸೇನಾ ಸಂಪನ್ಮೂಲಗಳು ಹಲವು ಪ್ರದೇಶಗಳಲ್ಲಿ ನಿಯೋಜನೆಯಾಗಿರುವುದು ಮತ್ತು ಕ್ಷಿಪಣಿ ಪ್ರತಿಬಂಧಕಗಳ ಬೇಡಿಕೆ ಹೆಚ್ಚಿರುವುದು ಈ ಪರಿಸ್ಥಿತಿಗೆ ಕಾರಣವಾಗಿವೆ. ಆಪ್ತ ಮಿತ್ರರಾಷ್ಟ್ರವಾಗಿದ್ದರೂ, ಅಗತ್ಯವಿದ್ದಾಗ ನಿರೀಕ್ಷಿಸಿದ ರೀತಿಯಲ್ಲಿ ನೆರವು ಸಿಗುತ್ತದೆ ಎಂಬ ಖಾತರಿ ಇರುವುದಿಲ್ಲ.ಸೌದಿ ಅರೇಬಿಯಾ ಪ್ರಾದೇಶಿಕ ಸಹಕಾರವನ್ನೂ ಬಲಪಡಿಸಲು ಪ್ರಯತ್ನಿಸುತ್ತಿದೆ. 2026ರ ಆಗಸ್ಟ್ 7ರಂದು ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿಯೆ ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದವು. ಒಂದು ಸದಸ್ಯ ರಾಷ್ಟ್ರದ ಮೇಲಿನ ಸಶಸ್ತ್ರ ದಾಳಿಯನ್ನು ಮೂರೂ ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸುವುದು ಈ ಒಪ್ಪಂದದ ಪ್ರಮುಖ ಅಂಶವಾಗಿದೆ. ಆದರೆ, ದಾಳಿ ನಡೆದ ಸಂದರ್ಭದಲ್ಲಿ ಯಾವ ರಾಷ್ಟ್ರ ಯಾವ ರೀತಿಯ ಸೇನಾ ನೆರವು ನೀಡಬೇಕು ಎಂಬುದನ್ನು ಒಪ್ಪಂದವು ಸ್ಪಷ್ಟವಾಗಿ ನಿರ್ಧರಿಸಿಲ್ಲ ಎಂದು ವರದಿಯಾಗಿದೆ. ಹೀಗಾಗಿ, ಈ ಒಪ್ಪಂದದ ನೈಜ ಪರಿಣಾಮ ಅದರ ಅನುಷ್ಠಾನ ಮತ್ತು ಮೂರೂ ರಾಷ್ಟ್ರಗಳ ನಡುವಿನ ಸಮನ್ವಯವನ್ನು ಅವಲಂಬಿಸಿರುತ್ತದೆ.ಗುಪ್ತಚರ ಮಾಹಿತಿ ಹಂಚಿಕೆ, ತರಬೇತಿ, ರಕ್ಷಣಾ ತಂತ್ರಜ್ಞಾನ ಮತ್ತು ಜಂಟಿ ಕಾರ್ಯಾಚರಣೆಗಳ ಸಮನ್ವಯದ ಮೂಲಕ ಈ ಸಹಕಾರವು ಸೌದಿಯ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಆದರೆ, ಒಪ್ಪಂದಕ್ಕೆ ಸಹಿ ಹಾಕಿರುವುದರಿಂದಲೇ ಪ್ರತಿಯೊಂದು ದಾಳಿಯ ಸಂದರ್ಭದಲ್ಲೂ ಮಿತ್ರರಾಷ್ಟ್ರಗಳು ಸೇನಾ ನೆರವು ನೀಡುತ್ತವೆ ಎಂದು ಹೇಳಲಾಗದು.ಸುದ್ದಿಹಾಳೆ ಬಿಕ್ಕಟ್ಟು: ಆತಂಕದಲ್ಲಿ ಪತ್ರಿಕೋದ್ಯಮದ ಭವಿಷ್ಯ, ಪರಿಹಾರವೇನು?ಸೌದಿ ಅರೇಬಿಯಾ ಏನು ಬದಲಿಸಬೇಕು?ಹೂಥಿಗಳ ದಾಳಿಗಳನ್ನು ಎದುರಿಸಲು ಸೌದಿ ಅರೇಬಿಯಾ ಶಸ್ತ್ರಾಸ್ತ್ರಗಳ ಖರೀದಿಯಷ್ಟೇ ಅಲ್ಲದೆ, ತನ್ನ ರಕ್ಷಣಾ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನೂ ಸುಧಾರಿಸಬೇಕಿದೆ. ಪ್ರಮುಖವಾಗಿ ಆರು ಕ್ಷೇತ್ರಗಳಲ್ಲಿ ಬದಲಾವಣೆ ಅಗತ್ಯ.ಮುಂಚಿತವಾಗಿ ಪತ್ತೆ ವ್ಯವಸ್ಥೆ: ಕಡಿಮೆ ಎತ್ತರದಲ್ಲಿ ಹಾರುವ ಡ್ರೋನ್ಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು ವಿವಿಧ ದಿಕ್ಕುಗಳಿಂದ ಪತ್ತೆಹಚ್ಚಲು ರಡಾರ್ ಸೇರಿದಂತೆ ಕಣ್ಗಾವಲು ವ್ಯವಸ್ಥೆಗಳನ್ನು ಬಲಪಡಿಸಬೇಕು.ರಕ್ಷಣಾ ವ್ಯವಸ್ಥೆಗಳ ಸಮನ್ವಯ: ರಡಾರ್ಗಳು, ಕಮಾಂಡ್ ಕೇಂದ್ರಗಳು, ಯುದ್ಧವಿಮಾನಗಳು ಮತ್ತು ಕ್ಷಿಪಣಿ ಪ್ರತಿಬಂಧಕ ಘಟಕಗಳು ತ್ವರಿತವಾಗಿ ಮಾಹಿತಿ ಹಂಚಿಕೊಳ್ಳುವಂತೆ ಮಾಡಬೇಕು.ಕಡಿಮೆ ವೆಚ್ಚದ ಪ್ರತಿರೋಧಕಗಳು: ಅಗ್ಗದ ಡ್ರೋನ್ಗಳನ್ನು ತಡೆಯಲು ದುಬಾರಿ ಕ್ಷಿಪಣಿ ಪ್ರತಿಬಂಧಕಗಳನ್ನೇ ಬಳಸುವುದು ವೆಚ್ಚ ಮತ್ತು ಪೂರೈಕೆಯ ಮೇಲೆ ಒತ್ತಡ ಹೇರುತ್ತದೆ. ಹೀಗಾಗಿ, ವಿಭಿನ್ನ ಬೆದರಿಕೆಗಳಿಗೆ ತಕ್ಕ ರಕ್ಷಣಾ ಆಯ್ಕೆಗಳು ಅಗತ್ಯ.ಸೇನಾ ಸಮನ್ವಯ: ನಿಯಮಿತ ಸೇನೆ ಮತ್ತು ನ್ಯಾಷನಲ್ ಗಾರ್ಡ್ ಸೇರಿದಂತೆ ವಿವಿಧ ಘಟಕಗಳ ನಡುವೆ ಸ್ಪಷ್ಟ ಜವಾಬ್ದಾರಿ, ಉತ್ತಮ ಸಂವಹನ ಮತ್ತು ತ್ವರಿತ ನಿರ್ಧಾರ ಕೈಗೊಳ್ಳುವ ವ್ಯವಸ್ಥೆ ಇರಬೇಕು.ವಿದೇಶಿ ಪೂರೈಕೆಯ ಮೇಲಿನ ಅವಲಂಬನೆ ಕಡಿಮೆ ಮಾಡುವುದು: ಸಾಕಷ್ಟು ಶಸ್ತ್ರಾಸ್ತ್ರ ಸಂಗ್ರಹ, ನಿರ್ವಹಣಾ ಸಾಮರ್ಥ್ಯ, ತಾಂತ್ರಿಕ ಪರಿಣತಿ ಮತ್ತು ವಿಶ್ವಾಸಾರ್ಹ ಪೂರೈಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ರಾಜಕೀಯ ಪರಿಹಾರಕ್ಕೆ ಆದ್ಯತೆ: ವೈಮಾನಿಕ ದಾಳಿಗಳಿಂದ ಮಾತ್ರ ಹೂಥಿಗಳನ್ನು ಸಂಪೂರ್ಣವಾಗಿ ಸೋಲಿಸುವುದು ಕಷ್ಟ. ಹೀಗಾಗಿ, ಯೆಮನ್ನ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಇರಾನ್ನೊಂದಿಗಿನ ಪ್ರಾದೇಶಿಕ ಉದ್ವಿಗ್ನತೆಯನ್ನೂ ನಿರ್ವಹಿಸಬೇಕು. ಉತ್ತಮ ರಡಾರ್ ವ್ಯವಸ್ಥೆಯೊಂದೇ ಸಮನ್ವಯದ ಕೊರತೆಯನ್ನು ನಿವಾರಿಸಲಾರದು. ಹೆಚ್ಚುವರಿ ಕ್ಷಿಪಣಿ ಪ್ರತಿಬಂಧಕಗಳು ಪೂರೈಕೆಯ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲಾರವು. ಸೇನಾ ಸಾಮರ್ಥ್ಯದ ಜೊತೆಗೆ ರಾಜಕೀಯ ಕಾರ್ಯತಂತ್ರವೂ ಅಗತ್ಯ.ಇರಾನ್ ಮೇಲೆ 'ಮದರ್ ಆಫ್ ಆಲ್ ಬಾಂಬ್ಸ್' ಪ್ರಯೋಗಿಸಲು ಅಮೆರಿಕ ಚಿಂತನೆ: ವರದಿ