ಭಾರತ Vs ವೆಸ್ಟ್ ಇಂಡೀಸ್ ಟಿ20: ಸಂಚಾರ ಅವಧಿ ವಿಸ್ತರಿಸಿದ ನಮ್ಮ ಮೆಟ್ರೊ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅ.17ರಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಟಿ20 ಕ್ರಿಕೆಟ್ ಪಂದ್ಯ ನಡೆಯಲಿರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ರಾತ್ರಿ 1.15ರವರೆಗೆ ಮೆಟ್ರೊ ಸಂಚಾರ ಅವಧಿ ವಿಸ್ತರಿಸಲಾಗಿದೆ.ವೈಟ್ಫೀಲ್ಡ್, ಚಲ್ಲಘಟ್ಟ ಮತ್ತು ಬೊಮ್ಮಸಂದ್ರ ಟರ್ಮಿನಲ್ಗಳಿಂದ ರಾತ್ರಿ 12ಕ್ಕೆ ಕೊನೇ ಮೆಟ್ರೊ ರೈಲು ಹೊರಡಲಿದೆ. ಸಿಲ್ಕ್ ಇನ್ಸ್ಟ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅ.17ರಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಟಿ20 ಕ್ರಿಕೆಟ್ ಪಂದ್ಯ ನಡೆಯಲಿರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ರಾತ್ರಿ 1.15ರವರೆಗೆ ಮೆಟ್ರೊ ಸಂಚಾರ ಅವಧಿ ವಿಸ್ತರಿಸಲಾಗಿದೆ.ವೈಟ್ಫೀಲ್ಡ್, ಚಲ್ಲಘಟ್ಟ ಮತ್ತು ಬೊಮ್ಮಸಂದ್ರ ಟರ್ಮಿನಲ್ಗಳಿಂದ ರಾತ್ರಿ 12ಕ್ಕೆ ಕೊನೇ ಮೆಟ್ರೊ ರೈಲು ಹೊರಡಲಿದೆ. ಸಿಲ್ಕ್ ಇನ್ಸ್ಟಿಟ್ಯೂಟ್ ಮತ್ತು ಮಾದಾವರ ಟರ್ಮಿನಲ್ನಿಂದ ರಾತ್ರಿ 12.15ಕ್ಕೆ ಹೊರಡಲಿದೆ. ಆರ್.ವಿ. ರಸ್ತೆಯಿಂದ ರಾತ್ರಿ 1.30ಕ್ಕೆ ಕೊನೇ ರೈಲು ಹೊರಡಲಿದೆ. ಮೆಜೆಸ್ಟಿಕನ್ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಲ್ಲ ನಾಲ್ಕು ದಿಕ್ಕುಗಳಿಗೆ ಕೊನೇ ಮೆಟ್ರೊ ರೈಲು ರಾತ್ರಿ 1ಕ್ಕೆ ಸಂಚರಿಸಲಿದೆ.ನಮ್ಮ ಮೆಟ್ರೊ ಕ್ಯೂಆರ್ ಕೋಡ್ ಅನ್ನು ಡಿಜಿಟಲ್ ಟಿ20 ಪಂದ್ಯದ ಟಿಕೆಟ್ಗಳಲ್ಲಿ ಅಳವಡಿಸಲಾಗಿದೆ. ಕ್ರೀಡಾಂಗಣದಲ್ಲಿ ತಮ್ಮ ಪ್ರವೇಶ/ನಿರ್ಗಮನ ಗೇಟ್ಗಳ ಆಧಾರದ ಮೇಲೆ ನಿಗದಿತ ಮೆಟ್ರೊ ನಿಲ್ದಾಣಗಳನ್ನು ಬಳಸುವಂತೆ ಪ್ರೇಕ್ಷಕರಲ್ಲಿ ವಿನಂತಿಸಲಾಗಿದೆ. ಕಬ್ಬನ್ ರಸ್ತೆ ಮೂಲಕ ಇರುವ ಕ್ರೀಡಾಂಗಣ ಪ್ರವೇಶ ಗೇಟ್ಗಳಿಗಾಗಿ ಪ್ರೇಕ್ಷಕರು ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣವನ್ನು ಬಳಸಬೇಕು. ಲಿಂಕ್ ರಸ್ತೆ ಮೂಲಕ ಇರುವ ಪ್ರವೇಶ ಗೇಟ್ಗಳಿಗಾಗಿ ಪ್ರೇಕ್ಷಕರು ಸಮೀಪದಲ್ಲಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೊ ನಿಲ್ದಾಣವನ್ನು ಬಳಸುವಂತೆ ಸಲಹೆ ನೀಡಲಾಗಿದೆ.ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಪ್ರಯಾಣಿಕರ ಸುರಕ್ಷತೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ನಿಲ್ದಾಣದ ಪ್ರವೇಶಗಳನ್ನು ನಿಯಂತ್ರಿಸುವ ಅಥವಾ ತಾತ್ಕಾಲಿಕವಾಗಿ ಮುಚ್ಚುವ ಹಕ್ಕನ್ನು ಕಾಯ್ದಿರಿಸಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.