ಸಿದ್ದರಾಮಯ್ಯ– ಪ್ರಿಯಾಂಕ್ ಖರ್ಗೆ ಚರ್ಚೆ
ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ನಗರದಲ್ಲಿ ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.‘ಸ್ಟಿಂಗ್ ಕಾರ್ಯಾಚರಣೆ’ ವಿಚಾರದ ಕುರಿತ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ತೀವ್ರಗೊಂಡಿರುವ ಸಂದರ್ಭದಲ್ಲಿ ಈ ಭೇಟಿಗೆ ಮಹತ್ವ ಬಂದಿದೆ.‘ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಹಿರಿಯರು, ಅವರ ಆಶೀರ್ವಾದ ಪಡೆಯಲೆಂದು

ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ನಗರದಲ್ಲಿ ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.‘ಸ್ಟಿಂಗ್ ಕಾರ್ಯಾಚರಣೆ’ ವಿಚಾರದ ಕುರಿತ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ತೀವ್ರಗೊಂಡಿರುವ ಸಂದರ್ಭದಲ್ಲಿ ಈ ಭೇಟಿಗೆ ಮಹತ್ವ ಬಂದಿದೆ.‘ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಹಿರಿಯರು, ಅವರ ಆಶೀರ್ವಾದ ಪಡೆಯಲೆಂದು ಬಂದಿದ್ದೆ’ ಎಂದಷ್ಟೇ ಪ್ರಿಯಾಂಕ್ ಪ್ರತಿಕ್ರಿಯಿಸಿದರು. ಶಾಸಕ ಕೆ.ಹರೀಶ್ ಗೌಡ ಜೊತೆಗಿದ್ದರು.ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಿಯಾಂಕ್, ‘ನನ್ನ ವಿರುದ್ಧ ಮಾತನಾಡುತ್ತಿರುವುದು ಕುಮಾರಸ್ವಾಮಿ ಅವರ ಮನಃಸ್ಥಿತಿಯನ್ನು ತೋರಿಸುತ್ತಿದೆ. ಅದರಿಂದ ನನಗೇನೂ ಪರಿಣಾಮ ಆಗುವುದಿಲ್ಲ. ದಲಿತನೊಬ್ಬ ಐಟಿ ಸಚಿವ ಆಗಬಾರದಾ? ಗೃಹ ಸಚಿವ ಆಗಬಾರದಾ? ಸೂಟ್ ಹಾಕಿಕೊಳ್ಳಬಾರದಾ? ವಿದೇಶಕ್ಕೆ ಹೋಗಿ ರಾಜ್ಯಕ್ಕೆ ಹೂಡಿಕೆ ತರಬಾರದಾ?’ ಎಂದು ಕೇಳಿದರು.‘ನನ್ನ ಸಮುದಾಯ ಅಥವಾ ನನ್ನ ಬಗ್ಗೆ ಮಾತನಾಡಲು ಇವರು ಯಾರು’ ಎಂದು ಪ್ರಶ್ನಿಸಿದರು.
Read the complete story at Prajavani