MBBS ಪರೀಕ್ಷೆಯಲ್ಲಿ ಫೇಲಾದವರಿಗೂ ಮತ್ತೊಂದು ಚಾನ್ಸ್: ಎನ್ಎಂಸಿ ಮಹತ್ವದ ನಿರ್ಧಾರ
ಮೊದಲ ವರ್ಷದ ಎಂಬಿಬಿಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ 2019-20ನೇ ಸಾಲಿನ ನಂತರದ ವಿದ್ಯಾರ್ಥಿಗಳಿಗೆ ಐದನೇ ಬಾರಿ ಪರೀಕ್ಷೆ ಬರೆಯಲು ಎನ್ಎಂಸಿ ವಿಶೇಷ ಅವಕಾಶ ನೀಡಿದೆ.ಈ ಸಂಬಂಧ ರಾಷ್ಟ್ರೀಯ ವೈದ್ಯಕೀಯ ಆಯೋಗವು ಅಕ್ಟೋಬರ್ 15ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ‘ಸೆಪ್ಟೆಂಬರ್ 23ರಂದು ನಡೆದ ಆಯೋಗದ 18ನೇ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ. ಕೋ

ಮೊದಲ ವರ್ಷದ ಎಂಬಿಬಿಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ 2019-20ನೇ ಸಾಲಿನ ನಂತರದ ವಿದ್ಯಾರ್ಥಿಗಳಿಗೆ ಐದನೇ ಬಾರಿ ಪರೀಕ್ಷೆ ಬರೆಯಲು ಎನ್ಎಂಸಿ ವಿಶೇಷ ಅವಕಾಶ ನೀಡಿದೆ.ಈ ಸಂಬಂಧ ರಾಷ್ಟ್ರೀಯ ವೈದ್ಯಕೀಯ ಆಯೋಗವು ಅಕ್ಟೋಬರ್ 15ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ‘ಸೆಪ್ಟೆಂಬರ್ 23ರಂದು ನಡೆದ ಆಯೋಗದ 18ನೇ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾದ ಅಡಚಣೆ, ಆರೋಗ್ಯ ಸಮಸ್ಯೆ ಹಾಗೂ ವೈಯಕ್ತಿಕ ಕಾರಣಗಳಿಂದ ಪರೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಗಳು ಮತ್ತು ಇತರರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಎನ್ಎಂಸಿ ತಿಳಿಸಿದೆ.ಐದನೇ ಪ್ರಯತ್ನಕ್ಕೂ ಅವಕಾಶಇದುವರೆಗೆ ಮೊದಲ ವರ್ಷದ ವೃತ್ತಿಪರ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳಿಗೆ ಗರಿಷ್ಠ ನಾಲ್ಕು ಪ್ರಯತ್ನಗಳಿಗೆ ಅವಕಾಶ ನೀಡಲಾಗಿತ್ತು. ಹೊಸ ನಿರ್ಧಾರದ ಪ್ರಕಾರ, ಅರ್ಹ ವಿದ್ಯಾರ್ಥಿಗಳು ಐದನೇ ಪ್ರಯತ್ನವನ್ನೂ ಬಳಸಬಹುದು.ಮೊದಲ ವರ್ಷದ ವೃತ್ತಿಪರ ಕೋರ್ಸ್ ಅನ್ನು ಪೂರ್ಣಗೊಳಿಸಲು ನಿಗದಿಪಡಿಸಿದ್ದ ನಾಲ್ಕು ವರ್ಷಗಳ ಅವಧಿ ಮೀರಿದ ವಿದ್ಯಾರ್ಥಿಗಳಿಗೂ ಈ ಅವಕಾಶ ಸಿಗಲಿದೆ. ಆದರೆ, ಸಂಬಂಧಪಟ್ಟ ವಿಶ್ವವಿದ್ಯಾಲಯ ಅಥವಾ ಕಾಲೇಜು ವಿದ್ಯಾರ್ಥಿಯ ಪ್ರವೇಶವನ್ನು ರದ್ದುಗೊಳಿಸಿರಬಾರದು.Grant of One Additional Attempt (Mercy Attempt) to eligible MBBS students admitted from Academic Years 2019–20 and onwards for passing the First Professional MBBS Examination – one-time transitional relaxation in pending cases.#nmc #mbbs #attemptLink: https://t.co/5zTCbzKhrg— National Medical Commission (@NMC_BHARAT) October 15, 2026 ಯಾರಿಗೆ ಅನ್ವಯ?2019–20ನೇ ಶೈಕ್ಷಣಿಕ ವರ್ಷದಲ್ಲಿ ಅಥವಾ ಅದರ ನಂತರ ಎಂಬಿಬಿಎಸ್ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಈ ವಿನಾಯಿತಿಯ ಪ್ರಯೋಜನ ಪಡೆಯಬಹುದು. ಆದರೆ, ಎನ್ಎಂಸಿಯ ಈ ಹಿಂದಿನ ನಿರ್ಧಾರ ಅಥವಾ ನ್ಯಾಯಾಲಯದ ಆದೇಶದ ಮೂಲಕ ಈಗಾಗಲೇ ಐದನೇ ಪ್ರಯತ್ನದ ಅವಕಾಶ ಪಡೆದಿರುವ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಈ ಸೌಲಭ್ಯ ಸಿಗುವುದಿಲ್ಲ.ಎಂಬಿಬಿಎಸ್ ಕೋರ್ಸ್ ಮತ್ತು ಕಡ್ಡಾಯ ವೈದ್ಯಕೀಯ ಇಂಟರ್ನ್ಶಿಪ್ ಸೇರಿದಂತೆ ಸಂಪೂರ್ಣ ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆದ ದಿನದಿಂದ ಗರಿಷ್ಠ 10 ವರ್ಷಗಳ ಒಳಗೆ ಪೂರ್ಣಗೊಳಿಸಿರಬೇಕು ಎಂಬ ಷರತ್ತನ್ನೂ ಆಯೋಗ ವಿಧಿಸಿದೆ.ಹಿಂದಿನ ನಿಯಮಗಳ ಪ್ರಕಾರ, ಮೊದಲ ವರ್ಷದ ವೃತ್ತಿಪರ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಗರಿಷ್ಠ ನಾಲ್ಕು ಪ್ರಯತ್ನಗಳಿಗೆ ಅವಕಾಶವಿತ್ತು. ಈ ಕೋರ್ಸ್ ಅನ್ನು ಪೂರ್ಣಗೊಳಿಸಲು ನಾಲ್ಕು ವರ್ಷಗಳ ಕಾಲಮಿತಿಯನ್ನೂ ನಿಗದಿಪಡಿಸಲಾಗಿತ್ತು.ಕೋವಿಡ್ ಸಾಂಕ್ರಾಮಿಕದಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡಚಣೆ ಉಂಟಾಗಿರುವುದನ್ನು ಪರಿಗಣಿಸಿ ಎನ್ಎಂಸಿ ಈ ಹಿಂದೆಯೂ ಕೆಲವು ವಿನಾಯಿತಿಗಳನ್ನು ನೀಡಿತ್ತು. 2023ರ ಮೇನಲ್ಲಿ 2019–20ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಐದನೇ ಪ್ರಯತ್ನಕ್ಕೆ ಅವಕಾಶ ಕಲ್ಪಿಸಿತ್ತು. ಅದೇ ವರ್ಷ ಡಿಸೆಂಬರ್ನಲ್ಲಿ 2020–21ನೇ ಸಾಲಿನ ವಿದ್ಯಾರ್ಥಿಗಳಿಗೂ ಇದೇ ರೀತಿಯ ಒಂದು ಬಾರಿಯ ವಿನಾಯಿತಿ ನೀಡಿತ್ತು.ಈಗ ಪ್ರಕಟಿಸಿರುವ ನಿರ್ಧಾರವು ಅರ್ಹ ವಿದ್ಯಾರ್ಥಿಗಳ ಬಾಕಿ ಉಳಿದಿರುವ ಪ್ರಕರಣಗಳಿಗೆ ಮಾತ್ರ ಅನ್ವಯಿಸುವ ತಾತ್ಕಾಲಿಕ ಕ್ರಮವಾಗಿದೆ. ಮುಂದಿನ ದಿನಗಳಲ್ಲಿ ಇದೇ ವಿನಾಯಿತಿ ಇರಲಿದೆ ಎಂದು ವಿದ್ಯಾರ್ಥಿಗಳು ಪರಿಗಣಿಸಬಾರದು ಎಂದು ಎನ್ಎಂಸಿ ಸ್ಪಷ್ಟಪಡಿಸಿದೆ.