ಸಿಜೆಪಿಯಿಂದ ತಿರಂಗಾ ಯಾತ್ರೆ: ದೆಹಲಿಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಮಾರ್ಗಸೂಚಿ
ನವದೆಹಲಿ: ಅ.16ರಂದು ಸಿಜೆಪಿಯು (CJP) ಕನ್ನಾಟ್ ಪ್ಲೇಸ್ನ (Connaught Place) ಸೆಂಟ್ರಲ್ ಪಾರ್ಕ್ನಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆ ದೆಹಲಿ ಪೊಲೀಸರು ಟಾಫ್ರಿಕ್ ತಪ್ಪಿಸಲು ಸಂಚಾರಿ ಸಲಹೆ (Traffic Advisory) ಬಿಡುಗಡೆ ಮಾಡಿದ್ದಾರೆ. `ಲೆಹ್ರಾ ದೋ ತಿರಂಗಾ’ ಘೋಷಣೆಯಡಿ ಸೆಂಟ್ರಲ್ ಪಾರ್ಕ್ನಲ್ಲಿ (Central Park) ಸಭೆ ನಡೆಸುವುದರೊಂದಿಗೆ ರಾಷ್ಟ

ನವದೆಹಲಿ: ಅ.16ರಂದು ಸಿಜೆಪಿಯು (CJP) ಕನ್ನಾಟ್ ಪ್ಲೇಸ್ನ (Connaught Place) ಸೆಂಟ್ರಲ್ ಪಾರ್ಕ್ನಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆ ದೆಹಲಿ ಪೊಲೀಸರು ಟಾಫ್ರಿಕ್ ತಪ್ಪಿಸಲು ಸಂಚಾರಿ ಸಲಹೆ (Traffic Advisory) ಬಿಡುಗಡೆ ಮಾಡಿದ್ದಾರೆ. `ಲೆಹ್ರಾ ದೋ ತಿರಂಗಾ’ ಘೋಷಣೆಯಡಿ ಸೆಂಟ್ರಲ್ ಪಾರ್ಕ್ನಲ್ಲಿ (Central Park) ಸಭೆ ನಡೆಸುವುದರೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕಾರ್ಯಕರ್ತರು ಮತ್ತು ಇತರ ಸಂಘಟನೆಗಳು ಕರೆ ನೀಡಿವೆ. ಹೀಗಾಗಿ ಇಂದು (ಅ.16) ಮಧ್ಯಾಹ್ನ 3 ಗಂಟೆಯಿಂದ ಒಟ್ಟು 21 ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಬಹುದು. ಹೀಗಾಗಿ ಪರಿಸ್ಥಿತಿಗೆ ತಕ್ಕಂತೆ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗುತ್ತದೆ ಎಂದು ದೆಹಲಿ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: CJP Protest| ಬೀದಿ ಬದಿ ವ್ಯಾಪಾರಿಗಳಿಗೆ ಭಾರೀ ಹೊಡೆತ – ಪ್ರತಿಭಟನೆಗೆ ತಡೆ ನೀಡದ ದೆಹಲಿ ಹೈಕೋರ್ಟ್ ಈ ಕೆಳಗಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಾಧ್ಯತೆ: ಸಂಸದ್ ಮಾರ್ಗ್, ಬಾಬಾ ಖರಕ್ ಸಿಂಗ್ ಮಾರ್ಗ್, ಶಹೀದ್ ಭಗತ್ ಸಿಂಗ್ ಮಾರ್ಗ್, ಪಂಚಕುಯಿಯಾನ್ ರಸ್ತೆ, ಬಸಂತ್ ಲೇನ್, ಚೆಲ್ಮ್ಸ್ಫೋರ್ಡ್ ರಸ್ತೆ, ಮಿಂಟೋ ರಸ್ತೆ, ಬಾರಾಖಂಬಾ ರಸ್ತೆ ಮತ್ತು ಕಸ್ತೂರಿಬಾ ಗಾಂಧಿ ಮಾರ್ಗ್. ಜನಪಥ್, ರೈಲ್ ಭವನ, ರಫಿ ಮಾರ್ಗ್, ಸಿ-ಹೆಕ್ಸಾಗನ್, ಮಂಡಿ ಹೌಸ್, ಪಟೇಲ್ ಚೌಕ್, ವಿಂಡ್ಸರ್ ಪ್ಲೇಸ್, ಗೋಲ್ ದಾಕ್ ಖಾನಾ, ಅಶೋಕ್ ರಸ್ತೆ, ಟಾಲ್ಸ್ಟಾಯ್ ಮಾರ್ಗ್ ಮತ್ತು ಸಿಕಂದರಾ ರಸ್ತೆ. ಈ ರಸ್ತೆಗಳಲ್ಲಿ ಸಂಚರಿಸುವುದನ್ನು ತಪ್ಪಿಸಲು ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ. TRAFFIC ADVISORY In view of a proposed gathering at Central Park, Connaught Place, New Delhi, on 16.10.2026, traffic movement on certain roads in and around Connaught Place is likely to be affected from 03:00 PM onwards. Commuters are advised to plan their journeys accordingly, allow sufficient travel time, use public transport wherever possible and follow the directions of traffic personnel. Traffic diversions may be implemented depending on the prevailing situation. Stay updated and follow Delhi Traffic Police handles for real-eroute updates. FACEBOOK: https://t.co/XMFa7Ld8gD PLATFORM X: https://t.co/hro9F9Bmge INSTAGRAM: https://t.co/aL9StmHNJn WHATSAPP: 8750871493 HELPLINE NOS.: 1095 / 011-25844444 Delhi Traffic Police Your Safety, Our Priority. #DelhiTrafficPolice #DTPUpdates #DPTrafficAdvisory @PMOIndia @HMOIndia @LtGovDelhi @CPDelhi @CMODelhi @DelhiPolice @OfficialDMRC @dtchq_delhi @tweetndmc @FBDPolice @gurgaonpolice @SonipatPolice @jhajjarpolice @ghaziabadpolice @CP_Noida @timesofindia @the_hindu @IndianExpress @AmarUjalaNews @NavbharatTimes @Live_Hindustan @TimesNow @IndiaToday @republic — Delhi Traffic Police (@dtptraffic) October 15, 2026 ಸಂಚಾರಿ ಪೊಲೀಸರು ಕೆಲ ಪ್ರಮುಖ ಸಲಹೆಗಳನ್ನು ಬಿಡುಗಡೆ ಮಾಡಿದ್ದಾರೆ. ಹೊರಡುವ ಮುನ್ನ ರಸ್ತೆ ಸ್ಥಿತಿಗತಿಗಳನ್ನು ಪರಿಶೀಲಿಸಿ. ದೆಹಲಿ ಟ್ರಾಫಿಕ್ ಪೊಲೀಸ್ ಅಧಿಕೃತ ವೆಬ್ಸೈಟ್ ಅಥವಾ ಅವರ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಪಡೆಯಬಹುದು. ತುರ್ತು ಸಹಾಯಕ್ಕಾಗಿ ದೆಹಲಿ ಟ್ರಾಫಿಕ್ ಪೊಲೀಸ್ ಸಹಾಯವಾಣಿ ಸಂಖ್ಯೆ 1095 ಅಥವಾ 011-25844444ಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಆವರಣದಲ್ಲಿ ಪ್ರತಿಭಟನೆ ನಡೆಸಿ ನ್ಯಾಯಾಂಗವನ್ನು ಬೆದರಿಸಲು ಸಾಧ್ಯವಿಲ್ಲ: ಸುಪ್ರೀಂ ಎಚ್ಚರಿಕೆ