ಮೈಸೂರು ದಸರಾ: ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ವಿಶೇಷ ರೈಲು ವ್ಯವಸ್ಥೆ
ಮೈಸೂರು: ದಸರಾ ಸಂದರ್ಭದಲ್ಲಿ ಪ್ರಯಾಣಿಕರ ಸುಗಮ ಸಂಚಾರ ಮತ್ತು ಜನಸಂದಣಿ ನಿಯಂತ್ರಣಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದರು.‘ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಕ್ಷಿತ, ಸುಗಮ ಹಾಗೂ ಆರಾಮದಾಯಕ

ಮೈಸೂರು: ದಸರಾ ಸಂದರ್ಭದಲ್ಲಿ ಪ್ರಯಾಣಿಕರ ಸುಗಮ ಸಂಚಾರ ಮತ್ತು ಜನಸಂದಣಿ ನಿಯಂತ್ರಣಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದರು.‘ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಕ್ಷಿತ, ಸುಗಮ ಹಾಗೂ ಆರಾಮದಾಯಕ ಪ್ರಯಾಣದ ಅನುಭವ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.‘ದಸರೆಯ ಮೊದಲ ಐದು ದಿನಗಳಲ್ಲಿ ಮೈಸೂರು ವಿಭಾಗದಲ್ಲಿ ಒಟ್ಟು 3.10 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಟಿಕೆಟ್ ಮಾರಾಟದಿಂದ ₹3.11 ಕೋಟಿ ಆದಾಯ ಬಂದಿದೆ’ ಎಂದು ಹೇಳಿದರು.ಹಿಂದಿನ ವರ್ಷದಲ್ಲಿ‘ಕಳೆದ ವರ್ಷ ದಸರಾ ವೇಳೆ ವಿಭಾಗದಲ್ಲಿ ಒಟ್ಟು 6.95 ಲಕ್ಷ ಪ್ರಯಾಣಿಕರು ಸಂಚರಿಸಿದ್ದರು. ಆ ಅವಧಿಯಲ್ಲಿ ಪ್ರತಿ ನಿತ್ಯ ಸರಾಸರಿ 69,523 ಪ್ರಯಾಣಿಕರು ಸಂಚರಿಸಿದ್ದರು. ಟಿಕೆಟ್ ಮಾರಾಟದಿಂದ ₹5.43 ಕೋಟಿ ಆದಾಯ ಬಂದಿತ್ತು. 2024ರಲ್ಲಿ 7.41 ಲಕ್ಷ ಪ್ರಯಾಣಿಕರು ಸಂಚರಿಸಿದ್ದರು (ನಿತ್ಯ ಸರಾಸರಿ 67,423 ಮಂದಿ)’ ಎಂದರು.‘ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು 70 ರೈಲ್ವೆ ಸಿಬ್ಬಂದಿ, ರೈಲ್ವೆ ರಕ್ಷಣಾ ಪಡೆ ಮತ್ತು ಸರ್ಕಾರಿ ರೈಲ್ವೆ ಪೊಲೀಸ್ ವಿಭಾಗಗಳ 150ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಯಾಣಿಕರ ಚಲನವಲನದ ಮೇಲ್ವಿಚಾರಣೆ ಮತ್ತು ಭದ್ರತೆಗಾಗಿ 39 ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಪ್ರಯಾಣಿಕರಿಗೆ ನೆರವು ನೀಡಲು ಮೂರು ‘ಮೇ ಐ ಹೆಲ್ಪ್ ಯು’ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 2 ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ಪ್ರದೇಶದಲ್ಲಿ ಹಾಗೂ ಮತ್ತೊಂದು 6ನೇ ಪ್ಲಾಟ್ಫಾರ್ಮ್ನಲ್ಲಿ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು.ಸಹಕಾರ‘ಟಿಕೆಟ್ ಕೌಂಟರ್ಗಳ ನಿರ್ವಹಣೆ ಮತ್ತು ಟಿಕೆಟ್ ತಪಾಸಣೆಗೆ ನೆರವಾಗಲು ಬೆಂಗಳೂರು ಹಾಗೂ ಹುಬ್ಬಳ್ಳಿ ವಿಭಾಗಗಳಿಂದ ಹೆಚ್ಚುವರಿಯಾಗಿ 15 ಸಿಬ್ಬಂದಿ ಒದಗಿಸುವಂತೆ ಕೋರಲಾಗಿದೆ. ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲು ಹಾಗೂ ಜನಸಂದಣಿಯನ್ನು ನಿಯಂತ್ರಿಸಲು ಸ್ಕೌಟ್ಸ್ ಮತ್ತು ಗೈಡ್ಸ್ಗಳ ಸಹಕಾರವನ್ನೂ ಪಡೆಯಲಾಗುತ್ತದೆ’ ಎಂದರು.‘27 ಪ್ರಯಾಣ ಟಿಕೆಟ್ ಪರೀಕ್ಷಕರನ್ನು ಬಳಸಲಾಗುತ್ತಿದೆ. ಸಮನ್ವಯಕ್ಕಾಗಿ ಸಿಬ್ಬಂದಿಗೆ ವಾಕಿ-ಟಾಕಿಗಳನ್ನು ಒದಗಿಸಲಾಗಿದೆ. ಎಸ್ಕಲೇಟರ್ಗಳು ಸುಗಮ ಮತ್ತು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗುತ್ತಿದೆ’ ಎಂದರು.‘ಕೌಂಟರ್ಗಳಲ್ಲಿನ ಜನದಟ್ಟಣೆ ಕಡಿಮೆ ಮಾಡಿ, ಪ್ರಯಾಣಿಕರಿಗೆ ಸುಲಭವಾಗಿ ಟಿಕೆಟ್ ಪಡೆಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಬುಕಿಂಗ್ ಪ್ರದೇಶದಲ್ಲಿನ ದಟ್ಟಣೆ ಕಡಿಮೆ ಮಾಡಲು ಅಸ್ತಿತ್ವದಲ್ಲಿರುವ ರಿಫ್ರೆಶ್ಮೆಂಟ್ ಕೊಠಡಿ ಬಳಸಿಕೊಳ್ಳಲಾಗಿದೆ. ಮುಖ್ಯ ಪ್ರವೇಶ ಪ್ರದೇಶದಲ್ಲಿ 8 ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳು ಹಾಗೂ 4 ಮೊಬೈಲ್ ಕಾಯ್ದಿರಿಸದ ಟಿಕೆಟಿಂಗ್ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.