ಬೆಂಗಳೂರು | ಬಾಡಿಗೆ ಮನೆಯಲ್ಲಿ ಟೆಕ್ಕಿ ಅನುಮಾನಾಸ್ಪದ ಸಾವು; 6 ತಿಂಗಳ ಬಳಿಕ ತನಿಖೆಯಲ್ಲಿ ಸತ್ಯ ರಿವೀಲ್
ಬೆಂಗಳೂರು: ಬೆಂಗಳೂರಿನಲ್ಲಿ (Bengaluru Crime) ಒಂಟಿಯಾಗಿ ವಾಸಿಸುತ್ತಿದ್ದ ಟೆಕ್ಕಿಯೊಬ್ಬರು ತಮ್ಮ ಮನೆಯಲ್ಲೇ ಬೆತ್ತಲೆಯಾಗಿ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಆರು ತಿಂಗಳ ಬಳಿಕ ಮಹತ್ವದ ತಿರುವು ಸಿಕ್ಕಿದೆ. ಜಾರ್ಖಂಡ್ ಮೂಲದ 34 ವರ್ಷದ ಪೂಜಾ ದತ್ತಾ ಸಾವಿನ ಸುತ್ತ ಕೇಳಿಬಂದಿದ್ದ ಕೊಲೆ ಶಂಕೆಗೆ ಇದೀಗ ತನಿಖಾ ವರದಿಯಲ್ಲಿ ಉತ್ತರ ಸಿಕ್ಕಿದೆ. ಬೆಂಗಳೂರಿನ ಆಡುಗೋಡಿ

ಬೆಂಗಳೂರು: ಬೆಂಗಳೂರಿನಲ್ಲಿ (Bengaluru Crime) ಒಂಟಿಯಾಗಿ ವಾಸಿಸುತ್ತಿದ್ದ ಟೆಕ್ಕಿಯೊಬ್ಬರು ತಮ್ಮ ಮನೆಯಲ್ಲೇ ಬೆತ್ತಲೆಯಾಗಿ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಆರು ತಿಂಗಳ ಬಳಿಕ ಮಹತ್ವದ ತಿರುವು ಸಿಕ್ಕಿದೆ. ಜಾರ್ಖಂಡ್ ಮೂಲದ 34 ವರ್ಷದ ಪೂಜಾ ದತ್ತಾ ಸಾವಿನ ಸುತ್ತ ಕೇಳಿಬಂದಿದ್ದ ಕೊಲೆ ಶಂಕೆಗೆ ಇದೀಗ ತನಿಖಾ ವರದಿಯಲ್ಲಿ ಉತ್ತರ ಸಿಕ್ಕಿದೆ. ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಏಪ್ರಿಲ್ 27, 2026ರಂದು ಪೂಜಾ ದತ್ತಾ ಮೃತದೇಹ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿಯ ಆಧಾರದಲ್ಲಿ ಅಂತಿಮ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ವರದಿಯ ಪ್ರಕಾರ, ಪೂಜಾ ದತ್ತಾ ಸಾವಿಗೆ ಶ್ವಾಸಕೋಶದ ವೈಫಲ್ಯ ಕಾರಣ ಎಂದು ಉಲ್ಲೇಖಿಸಲಾಗಿದೆ. ಪೂಜಾ ದತ್ತಾ ವಾಸವಿದ್ದ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆರೆದು ಪರಿಶೀಲಿಸಿದಾಗ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹ ನಗ್ನವಾಗಿದ್ದ ರೀತಿಯೂ ಸೇರಿದಂತೆ ಮನೆಯೊಳಗಿನ ಪರಿಸ್ಥಿತಿಗಳು ಹಲವು ಅನುಮಾನಗಳಿಗೆ ಕಾರಣವಾಗಿದ್ದವು.ಇದನ್ನೂ ಓದಿ: CNG ಟ್ರಕ್ಗೆ ಕಾರು ಡಿಕ್ಕಿ – ಬಾಲಕ ಸ್ಥಳದಲ್ಲೇ ಸಾವು, ಮೂವರು ಅಪ್ರಾಪ್ತರಿಗೆ ಗಂಭೀರ ಗಾಯ ಮನೆಯ ಗೋಡೆಗಳು ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಕಾಗದಗಳ ಮೇಲೆ ಬರೆದಿದ್ದ ಬರಹಗಳನ್ನು ಅಂಟಿಸಲಾಗಿತ್ತು. ಅಲ್ಲದೆ, ಮನೆಗೆ ಯುವಕನೊಬ್ಬ ಬಂದು ಹೋಗುತ್ತಿದ್ದ ಎಂಬ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿತ್ತು. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಲಾಗಿತ್ತು. ಇದನ್ನೂ ಓದಿ: ಕೂಡ್ಲಿಗಿ ಹೈವೇಯಲ್ಲಿ ವಾಹನ ಡಿಕ್ಕಿ: ಸ್ಥಳದಲ್ಲೇ ಚಿರತೆ ಸಾವು, ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ! ಎಫ್ಎಸ್ಎಲ್ ವರದಿಗೆ ಸಂಬಂಧಿಸಿದ ಮಾಹಿತಿಯಲ್ಲಿ ದೇಹದ ನರಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದ ಅಂಶವೂ ಉಲ್ಲೇಖವಾಗಿದೆ. ಪೂಜಾ ದತ್ತಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿಯೂ ತನಿಖೆಯ ವೇಳೆ ಹೊರಬಂದಿದೆ. ಅಂತಿಮವಾಗಿ, ಅನಾರೋಗ್ಯದಿಂದ ಸಾವು ಸಂಭವಿಸಿದೆ ಎಂಬ ಅಭಿಪ್ರಾಯದೊಂದಿಗೆ ಆಡುಗೋಡಿ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ.