ಧಾರವಾಡ: 20 ವರ್ಷ ಜೈಲು, ₹ 55 ಸಾವಿರ ದಂಡ
ಧಾರವಾಡ: ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಪ್ರಶಾಂತಗೌಡ ನೀಲಪ್ಪಗೌಡ್ರ (37) ಎಂಬಾತಗೆ 20 ವರ್ಷ ಕಠಿಣ ಕಾರಾಗೃಹ ವಾಸ, ₹ 55 ಸಾವಿರ ದಂಡವನ್ನು ಎರಡನೇ ಹೆಚ್ಚುವರಿ ಜಿಲ್ಲಾ ಸ್ಪೆಷಲ್ ಪೋಕ್ಸೊ ಕೋರ್ಟ್ ವಿಧಿಸಿದೆ.ನ್ಯಾಯಾಧೀಶ ರಾಜಕುಮಾರ ಸಿ ಅವರು ಈ ಆದೇಶ ನೀಡಿದ್ದಾರೆ. ಸಂತ್ರಸ್ತ ಬಾಲಕಿಗೆ ಸಂತ್ರಸ್ತ ನಿಧಿಯಿಂದ ₹ 6 ಲಕ್ಷ ಪರಿಹಾರ ನೀಡುವಂತೆ ಆದೇಶದಲ

ಧಾರವಾಡ: ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಪ್ರಶಾಂತಗೌಡ ನೀಲಪ್ಪಗೌಡ್ರ (37) ಎಂಬಾತಗೆ 20 ವರ್ಷ ಕಠಿಣ ಕಾರಾಗೃಹ ವಾಸ, ₹ 55 ಸಾವಿರ ದಂಡವನ್ನು ಎರಡನೇ ಹೆಚ್ಚುವರಿ ಜಿಲ್ಲಾ ಸ್ಪೆಷಲ್ ಪೋಕ್ಸೊ ಕೋರ್ಟ್ ವಿಧಿಸಿದೆ.ನ್ಯಾಯಾಧೀಶ ರಾಜಕುಮಾರ ಸಿ ಅವರು ಈ ಆದೇಶ ನೀಡಿದ್ದಾರೆ. ಸಂತ್ರಸ್ತ ಬಾಲಕಿಗೆ ಸಂತ್ರಸ್ತ ನಿಧಿಯಿಂದ ₹ 6 ಲಕ್ಷ ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ಧಾರೆ.ಏನಿದು ಪ್ರಕರಣ: ವಿವಾಹಿತ ಪ್ರಶಾಂತಗೌಡ ಎಂಬಾತ ಬಾಲಕಿಯನ್ನು ಪುಸಲಾಯಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ.ವಿಷಯವನ್ನು ಯಾರಿಗೂ ಹೇಳದಂತೆ ಬಾಲಕಿಗೆ ಪ್ರಶಾಂತ್ ಬೆದರಿಕೆ ಹಾಕಿದ್ದ. ಬಾಲಕಿ ಗರ್ಭಿಣಿಯಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 2024 ಜೂನ್ 26ರಂದು ಮಗುವಿಗೆ ಜನ್ಮ ನೀಡಿದ್ದರು.ಬಾಲಕಿಯ ತಂದೆ ಕಲಘಟಗಿ ಠಾಣೆಯಲ್ಲಿ ಪ್ರಶಾಂತಗೌಡ ವಿರುದ್ಧ ದೂರು ದಾಖಲಿಸಿದ್ದರು. ಇನ್ಸ್ಪೆಕ್ಟರ್ ಶ್ರೀಶೈಲ್ ಕೌಜಲಗಿ ಅವರು ಪ್ರಕರಣದ ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಶೈಲಾ ಯು ಅಂಗಡಿ ವಾದ ಮಂಡಿಸಿದ್ದರು.
Read the complete story at Prajavani