ಎಲ್ ನಿನೋ ಎಫೆಕ್ಟ್ನಿಂದ ತೊಗರಿ ಬೇಳೆ ಇಳುವರಿ ಕುಂಠಿತ – ಬೆಲೆ ಗಗನಕ್ಕೆ
ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ (Kalaburagi) ಎಲ್ ನಿನೋ ಎಫೆಕ್ಟ್ನಿಂದ ಮಳೆ ಕೊರತೆ ಉಂಟಾಗಿ ತೊಗರಿ ಬೇಳೆ (Togari Bele) ಇಳುವರಿ ಕುಸಿದಿದೆ. ಇದರ ಪರಿಣಾಮ ತೊಗರಿ ಬೆಳೆಯ ದರ ಗಗನೆಕ್ಕೇರಿದೆ. ಮುಂದಿನ ದಿನಗಳಲ್ಲಿ ಸಹ ಊಹಿಸಲಾರದಷ್ಟು ತೊಗರಿ ಬೇಳೆ ದರದಲ್ಲಿ ಏರಿಕೆಯಾಗುವ ಲಕ್ಷಣವಿದೆ. ದೇಶಾದ್ಯಂತ ಮುಂಗಾರು ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದೆ. ಇದರ ಪರಿಣಾಮ ತೊ

ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ (Kalaburagi) ಎಲ್ ನಿನೋ ಎಫೆಕ್ಟ್ನಿಂದ ಮಳೆ ಕೊರತೆ ಉಂಟಾಗಿ ತೊಗರಿ ಬೇಳೆ (Togari Bele) ಇಳುವರಿ ಕುಸಿದಿದೆ. ಇದರ ಪರಿಣಾಮ ತೊಗರಿ ಬೆಳೆಯ ದರ ಗಗನೆಕ್ಕೇರಿದೆ. ಮುಂದಿನ ದಿನಗಳಲ್ಲಿ ಸಹ ಊಹಿಸಲಾರದಷ್ಟು ತೊಗರಿ ಬೇಳೆ ದರದಲ್ಲಿ ಏರಿಕೆಯಾಗುವ ಲಕ್ಷಣವಿದೆ. ದೇಶಾದ್ಯಂತ ಮುಂಗಾರು ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದೆ. ಇದರ ಪರಿಣಾಮ ತೊಗರಿ ಕಣಜ ಕಲಬುರಗಿ ಜಿಲ್ಲೆಯ ಪ್ರಮುಖ ಬೇಳೆ ತೊಗರಿ ಮೇಲು ಸಹ ಇದರ ಎಫೆಕ್ಟ್ ಆಗಿದ್ದು, ಕಳೆದ 15 ದಿನಗಳ ಅಂತರದಲ್ಲಿಯೇ ಪ್ರತಿ ಕೆಜಿ ತೊಗರಿ ಬೇಳೆಯಲ್ಲಿ 30 ರೂ. ದರ ಏರಿಕೆಯಾಗಿದ್ದು, ಈ ಮೂಲಕ ಸಾಲು ಸಾಲು ಹಬ್ಬಗಳ ಸೀಸನ್ನಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಅಂದಹಾಗೆ ಅ.1ರಂದು ಸಾಮಾನ್ಯ ಗುಣಮಟ್ಟದ ಪ್ರತಿ ಕೆ.ಜಿ ತೊಗರಿ ಬೇಳೆ ದರವು 110 ರೂ. ಇತ್ತು, ಆದರೆ ಇದೀಗ ಕಳೆದ 15 ದಿನಗಳ ಅಂತರದಲ್ಲಿಯೇ ಪ್ರತಿ ಕೆಜಿಗೆ 30 ರೂಪಾಯಿ ಏರಿಕೆಯಾಗಿದೆ. ಇದೀಗ ಪ್ರತಿ ಕೆಜಿ ತೊಗರಿ ಬೇಳೆ ದರ 140 ರೂ. ಏರಿಕೆಯಾಗಿದೆ. ಪ್ರೀಮಿಯಂ ಗುಣಮಟ್ಟದ ತೊಗರಿ ಬೇಳೆ ದರವು ಅ.1 ರಂದು ಪ್ರತಿ ಕೆ.ಜಿಗೆ 146 ಇತ್ತು ಇದೀಗ 160 ರೂ.ಗೆ ಏರಿಕೆಯಾಗಿದೆ. ಈ ಮೂಲಕ ತೊಗರಿ ಬೇಳೆ ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿ ಜನರ ಜೇಬಿಗೆ ಕತ್ತರಿ ಹಾಕಿದೆ. ಇದನ್ನೂ ಓದಿ: ಟನ್ ಕಬ್ಬಿಗೆ 1 ಸಾವಿರ ರೂ. ಪ್ರೋತ್ಸಾಹಧನ ಘೋಷಿಸಿ – ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದ ರೈತರು ಒಂದೆಡೆ ಬರ ಮತ್ತೊಂದೆಡೆ ಹಬ್ಬದ ಸೀಸನ್ನಿಂದಾಗಿ ತೊಗರಿ ಬೇಳೆ ದರ ನಿತ್ಯ ಏರುತ್ತಿದೆ. ಅಂದ ಹಾಗೆ ಕಳೆದ ತಿಂಗಳು ಪ್ರತಿ ಕ್ವಿಂಟಲ್ ತೊಗರಿಗೆ ಕನಿಷ್ಠ 7,100ರಿಂದ ಗರಿಷ್ಠ 9,500 ದರವಿತ್ತು. ಆದೇ ಅ.1 ರಂದು ಕನಿಷ್ಠ 8,500 ಹಾಗೂ ಗರಿಷ್ಠ 10 ಸಾವಿರ ರೂ. ದರ ಏರಿಕೆ ಮೂಲಕ ಕಳೆದ 15 ದಿನಗಳಲ್ಲಿ ಪ್ರತಿ ಕ್ವಿಂಟಲ್ಗೆ 1,500ರಷ್ಟು ಏರಿಕೆಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ 6.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಕೊರತೆಯಿಂದ ಬರೀ 5.34 ಲಕ್ಷ ಹೆಕ್ಟೇರ್ನಲ್ಲಿ ತೊಗರಿ ಬಿತ್ತನೆಯಾಗಿದೆ. ಬರ ಆವರಿಸಿದ್ದರಿಂದ 5.34 ಲಕ್ಷ ಹೆಕ್ಟೇರ್ ಪೈಕಿ 4.04 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಿದ ತೊಗರಿ ಹಾಳಾಗಿದೆ. ಈ ಪ್ರಮಾಣದಲ್ಲಿ ತೊಗರಿ ಬೆಳೆ ಕೈ ಕೊಟ್ಟ ಹಿನ್ನೆಲೆ ತೊಗರಿ ಬೇಳೆ ದರದಲ್ಲಿ ಭಾರಿ ಏರಿಕೆಯಾಗಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ನೇರವಿಗೆ ಬರಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಬ್ಬು ಬೆಳೆಗಾರರ ಆಕ್ರೋಶ – ರಾಷ್ಟ್ರೀಯ ಹೆದ್ದಾರಿ ತಡೆದು ಅಹೋರಾತ್ರಿ ಧರಣಿ, ವಾಹನ ಸವಾರರ ಪರದಾಟ