'ಲೆಹರಾ ದೋ ತಿರಂಗಾ' ಪ್ರತಿಭಟನೆಗೂ ಮುನ್ನ ದೀಪ್ಕೆ, ನೇಹಾ ಬೋರಾ ಪೊಲೀಸ್ ವಶಕ್ಕೆ
ನವದೆಹಲಿ: ಇಲ್ಲಿನ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಲೆಹರಾ ದೋ ತಿರಂಗಾ’ (ತ್ರಿವರ್ಣ ಧ್ವಜ ಹಾರಿಸಿ) ಪ್ರತಿಭಟನೆ ನಡೆಸುವುದಕ್ಕಿಂತ ಕೆಲವೇ ನಿಮಿಷಗಳ ಮುನ್ನ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ಶುಕ್ರವಾರ ಅವರ ಮನೆಯಿಂದ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಒಂದೇ ವಾರದಲ್ಲಿ 2ನೇ ಬಾರಿ ವಶಕ್

ನವದೆಹಲಿ: ಇಲ್ಲಿನ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಲೆಹರಾ ದೋ ತಿರಂಗಾ’ (ತ್ರಿವರ್ಣ ಧ್ವಜ ಹಾರಿಸಿ) ಪ್ರತಿಭಟನೆ ನಡೆಸುವುದಕ್ಕಿಂತ ಕೆಲವೇ ನಿಮಿಷಗಳ ಮುನ್ನ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ಶುಕ್ರವಾರ ಅವರ ಮನೆಯಿಂದ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಒಂದೇ ವಾರದಲ್ಲಿ 2ನೇ ಬಾರಿ ವಶಕ್ಕೆ :ಒಂದೇ ವಾರದಲ್ಲಿ ದೀಪ್ಕೆ ಅವರನ್ನು ವಶಕ್ಕೆ ಪಡೆದಿರುವುದು ಇದು 2ನೇ ಬಾರಿ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ವೇಳೆ ಅಕ್ರಮ ಎಸಗಲಾಗಿದೆ ಎಂಬ ಆರೋಪದ ಮೇಲೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಇತ್ತೀಚೆಗಷ್ಟೇ ಪ್ರತಿಭಟನೆ ನಡೆಸಲು ಮುಂಬೈನಿಂದ ದೆಹಲಿಗೆ ಬಂದಿಳಿದ ತಕ್ಷಣವೇ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಜಂತರ್ ಮಂತರ್ ಪ್ರತಿಭಟನಾ ಸ್ಥಳವಲ್ಲ ಎಂದು ದೆಹಲಿ ಪೊಲೀಸರು ಭಾನುವಾರ ಆದೇಶ ಹೊರಡಿಸಿದ್ದರು. ಇದನ್ನು ಖಂಡಿಸಿ ಸಿಜೆಪಿ ಕಾರ್ಯಕರ್ತರು ಜಂತರ್ ಮಂತರ್ಗೆ ನುಗ್ಗಿ ಪ್ರತಿಭಟನೆ ನಡೆಸಿದ್ದರು. ಜಂತರ್ ಮಂತರ್ಗೆ ‘ಅತಿಕ್ರಮ ಪ್ರವೇಶ’ ಮಾಡಿದ್ದಕ್ಕಾಗಿ ಸಿಜೆಪಿ ನಾಯಕರಾದ ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಕನ್ನಾಟ್ ಪ್ಲೇಸ್ನಲ್ಲಿರುವ ಸೆಂಟ್ರಲ್ ಪಾರ್ಕ್ ಹಾಗೂ ದೇಶದ ಇತರ ಕಡೆಗಳಲ್ಲಿ 'ಲೆಹರಾ ದೋ ತಿರಂಗಾ' (ತ್ರಿವರ್ಣ ಧ್ವಜ ಹಾರಿಸಿ) ಪ್ರತಿಭಟನೆ ನಡೆಸುವಂತೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಕರೆ ನೀಡಿದ್ದಾರೆ.'ನೀವು ನವದೆಹಲಿಗೆ ಹೋಗುವಂತಿಲ್ಲ. ನಾವು ನಿಮ್ಮನ್ನು ವಶಕ್ಕೆ ಪಡೆಯುತ್ತಿದ್ದೇವೆ' ಎಂದು ದೀಪ್ಕೆಗೆ ಪೊಲೀಸರು ತಿಳಿಸಿದ್ದಾರೆ.ಅದಕ್ಕೆ ಪ್ರತಿಕ್ರಿಯಿಸಿರುವ ಅವರು, 'ನವದೆಹಲಿಗೆ ಹೋಗಲು ಸಾಧ್ಯವಿಲ್ಲದಿರಬಹುದು, ಆದರೆ ಬೇರೆ ಎಲ್ಲಾದರೂ ಹೋಗಬಹುದಲ್ಲವೇ. ನಾನು ಯಾವ ಕಾನೂನನ್ನು ಉಲ್ಲಂಘಿಸಿದ್ದೇನೆ?' ಎಂದು ಪ್ರಶ್ನಿಸಿದ್ದಾರೆ. ವಶಕ್ಕೆ ಪಡೆಯುವ ಮುನ್ನ , ದೆಹಲಿ ಪೊಲೀಸರು ದೀಪ್ಕೆ ಅವರ ಮನೆಗೆ ತೆರಳಿ ಪ್ರತಿಭಟನಾ ರ್ಯಾಲಿ ನಡೆಸದಂತೆ ನೋಟಿಸ್ ನೀಡಿದ್ದರು.ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 163 ರ ಅಡಿಯಲ್ಲಿ ನೀಡಲಾದ ನೋಟಿಸ್ನಲ್ಲಿ, ನಗರದ ಹೃದಯಭಾಗದಲ್ಲಿರುವ ಪ್ರಮುಖ ವಾಣಿಜ್ಯ ಕೇಂದ್ರವಾದ ಕನಾಟ್ ಪ್ಲೇಸ್ ಪ್ರದೇಶದ ಸುತ್ತಲೂ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ತಿಳಿಸಲಾಗಿತ್ತು. ಉದ್ದೇಶಿತ 'ತಿರಂಗಾ ಯಾತ್ರೆ'ಗೆ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ಅನುಮತಿ ನೀಡಿಲ್ಲ ಮತ್ತು ಒಂದು ವೇಳೆ ಸಿಜಿಪಿ ರ್ಯಾಲಿ ಮುಂದುವರಿಸಲು ನಿರ್ಧರಿಸಿದರೆ ಅದನ್ನು ಕಾನೂನು ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಲಾಗಿತ್ತು. ATTENTION PLEASE! Delhi Police are accusing Abhijeet Dipke of talking about violence, while sidelining the ground reality and making baseless allegations against him. pic.twitter.com/WLTFtPO5Oa— Neha Bora Team (@NehaAisa) October 16, 2026 ತಿರಂಗಾ ಹಾರಿಸುವುದು ಕಾನೂನುಬಾಹಿರವಲ್ಲ, ಆದರೆ ಅನುಮತಿಯಿಲ್ಲದೆ ಪ್ರತಿಭಟನಾ ಮೆರವಣಿಗೆ ನಡೆಸುವುದು ಮತ್ತು ಜನರನ್ನು ಸೇರಿಸುವುದು ನಿಯಮಗಳ ಉಲ್ಲಂಘನೆಯಾಗುತ್ತದೆ. ಇದರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದೂ ತಿಳಿಸಲಾಗಿದೆ. ಅಲ್ಲದೇ. ಧ್ವಜ ಸಂಹಿತೆಗೆ ಅನುಗುಣವಾಗಿ ರಾಷ್ಟ್ರಧ್ವಜಕ್ಕೆ ಸೂಕ್ತ ಗೌರವ ನೀಡುವ ಬಗ್ಗೆ ಇರುವ ನಿರ್ಬಂಧಗಳ ಬಗ್ಗೆಯೂ ಅವರಿಗೆ ವಿವರಿಸಲಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊವೊಂದರಲ್ಲಿ, ರಾಷ್ಟ್ರಧ್ವಜವನ್ನು ಹೊದ್ದು ಸೋಫಾದಲ್ಲಿ ಕುಳಿತಿದ್ದ ದೀಪ್ಕೆ, ಎದುರಿಗಿದ್ದ ಅಧಿಕಾರಿಯನ್ನು ನನ್ನ ಮೇಲೆ ಯಾವ ರೀತಿಯ ಆರೋಪ ಹೊರಿಸಿದ್ದೀರಿ? ಎಂದು ಕೇಳುತ್ತಿರುವುದು ಕಂಡುಬಂದಿದೆ. ಅಲ್ಲದೇ ಟೇಬಲ್ ಮೇಲಿದ್ದ ಕಾಗದಪತ್ರಗಳಲ್ಲಿದ್ದ ವಿಷಯಗಳನ್ನು ಓದುತ್ತಾ ಅವರು ಪೊಲೀಸರನ್ನು ಪ್ರಶ್ನಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.ಇನ್ನು ಪ್ರತಿಭಟನಾಕಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಪೊಲೀಸರು, ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಅವರನ್ನು ಜಂತರ್ ಮಂತರ್ ಬಳಿ ವಶಕ್ಕೆ ಪಡೆದಿದ್ದಾರೆ. Despite restrictions the march has reached the barricades at Jantar Mantar!People's will cannot be stopped,Gyanesh Has To Go! pic.twitter.com/rdsd47nXGY— Neha Bora Team (@NehaAisa) October 16, 2026 ಶಾಂತಿಯುತ ಪ್ರತಿಭಟನೆಯಿಂದಲ್ಲ, ಸರ್ಕಾರದ ನಿರ್ಬಂಧಗಳಿಂದ ಉದ್ಯಮಕ್ಕೆ ನಷ್ಟ: ದೀಪ್ಕೆ