ಪಿಜಿಸಿಇಟಿ ಫಲಿತಾಂಶ ಪ್ರಕಟ, ಶುಲ್ಕ ಕಟ್ಟಲು ಅ.19 ಕೊನೆ ದಿನ: ಕೆಇಎ
ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್ ಮತ್ತು ಎಂ.ಆರ್ಕ್ ಕೋರ್ಸ್ಗಳ ಪ್ರವೇಶಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಮಾಹಿತಿ ನೀಡಿದೆ. ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಸೀಟು ಪಡೆದ ಅಭ್ಯರ್ಥಿಗಳು ಅಕ್ಟೋಬರ್ 19ರೊಳಗೆ ಶುಲ್ಕ ಪಾವತಿಸಬೇಕು. ಅಕ್ಟೋಬರ್ 23ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ಪ್ರವೇಶ

ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್ ಮತ್ತು ಎಂ.ಆರ್ಕ್ ಕೋರ್ಸ್ಗಳ ಪ್ರವೇಶಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಮಾಹಿತಿ ನೀಡಿದೆ. ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಸೀಟು ಪಡೆದ ಅಭ್ಯರ್ಥಿಗಳು ಅಕ್ಟೋಬರ್ 19ರೊಳಗೆ ಶುಲ್ಕ ಪಾವತಿಸಬೇಕು. ಅಕ್ಟೋಬರ್ 23ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ. ಪಿಬಿ ಬಿಎಸ್ಸಿ ನರ್ಸಿಂಗ್ ಪ್ರವೇಶಕ್ಕೆ ಆಯ್ಕೆ ದಾಖಲಿಸಲು ಅವಕಾಶ ಪಿಬಿ ಬಿಎಸ್ಸಿ ನರ್ಸಿಂಗ್ ಮತ್ತು ಎಎಚ್ಎಸ್ ಲ್ಯಾಟರಲ್ ಕೋರ್ಸ್ಗಳ ಪ್ರವೇಶಕ್ಕೆ ಇಚ್ಛೆ ಅಥವಾ ಆಯ್ಕೆಗಳನ್ನು ದಾಖಲಿಸಲು ಅಕ್ಟೋಬರ್ 19ರ ಬೆಳಗ್ಗೆ 11 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಅಕ್ಟೋಬರ್ 19ರ ಸಂಜೆ 4 ಗಂಟೆಗೆ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಅಭ್ಯರ್ಥಿಗಳು ತಮ್ಮ ಆಯ್ಕೆಗಳನ್ನು ಬದಲಾಯಿಸಲು, ಹೊಸ ಆಯ್ಕೆಗಳನ್ನು ಸೇರಿಸಲು ಅಥವಾ ಈಗಾಗಲೇ ದಾಖಲಿಸಿರುವ ಆಯ್ಕೆಗಳನ್ನು ಅಳಿಸಲು ಅವಕಾಶ ನೀಡಲಾಗಿದೆ. ಈ ಪ್ರಕ್ರಿಯೆಗೆ ಅಕ್ಟೋಬರ್ 22ರ ಬೆಳಗ್ಗೆ 11 ಗಂಟೆಯವರೆಗೆ ಸಮಯವಿದೆ. ನಂತರ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಹೆಚ್. ಪ್ರಸನ್ನ ತಿಳಿಸಿದ್ದಾರೆ.