ಕ್ಷೇತ್ರ ಪುನರ್ವಿಂಗಡಣೆ ಕುರಿತು ಸರ್ವಪಕ್ಷ ಸಭೆ: ಮೋದಿಗೆ ಖರ್ಗೆಯಿಂದ 4ನೇ ಪತ್ರ
ನವದೆಹಲಿ: ಅನಿರ್ದಿಷ್ಠಾವಧಿಗೆ ಮುಂದೂಡಿರುವ ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಆಗುತ್ತಿರುವ ವಿಳಂಬದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಪತ್ರ ಬರೆದಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾವದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವಂತೆಯೂ ಅದರಲ್ಲಿ ಒತ್ತಾಯಿಸಿ

ನವದೆಹಲಿ: ಅನಿರ್ದಿಷ್ಠಾವಧಿಗೆ ಮುಂದೂಡಿರುವ ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಆಗುತ್ತಿರುವ ವಿಳಂಬದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಪತ್ರ ಬರೆದಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾವದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವಂತೆಯೂ ಅದರಲ್ಲಿ ಒತ್ತಾಯಿಸಿದ್ದಾರೆ.ಮುಂಗಾರು ಅಧಿವೇಶನದ ಉಭಯ ಸದನದ ಕಲಾಪಗಳನ್ನು ಆಗಸ್ಟ್ 13ರಂದು ಅನಿರ್ದಿಷ್ಠಾವಧಿಗೆ ಮುಂದೂಡಲಾಗಿದೆ. ಈಗಾಗಲೇ 64 ದಿನಗಳು ಕಳೆದಿದ್ದರೂ, ಅಧಿವೇಶನವನ್ನು ಇನ್ನೂ ಮುಕ್ತಾಯಗೊಳಿಸಿಲ್ಲ. ಹಿಂದೆಂದೂ ಈ ರೀತಿ ಆಗಿರಲಿಲ್ಲ ಎಂದು ಉಲ್ಲೇಖಿಸಿದ್ದಾರೆ.ಕ್ಷೇತ್ರ ಪುನರ್ವಿಂಗಡಣೆ ಕುರಿತ ಮಸೂದೆಗೆ ತಿದ್ದುಪಡಿ ತರುವ ಮುನ್ನ ಸರ್ವಪಕ್ಷ ಸಭೆ ಕರೆಯಿರಿ ಎಂದು ಸಲಹೆ ನೀಡಿರುವ ಕಾಂಗ್ರೆಸ್ ನಾಯಕ, ಇದೇ ವಿಚಾರವಾಗಿ ಏಪ್ರಿಲ್ 11ರಂದು ಮೊದಲ ಬಾರಿಗೆ ಪತ್ರ ಬರೆದಿದ್ದಾಗಿ ನೆನಪಿಸಿದ್ದಾರೆ.‘ಸರ್ವಪಕ್ಷ ಸಭೆ ಕರೆಯದೆ, ಏಪ್ರಿಲ್ 14ರಂದು ಮಸೂದೆಗಳನ್ನು ಸಾರ್ವಜನಿಕಗೊಳಿಸಿದ್ದಿರಿ. ನಂತರ, ಏಪ್ರಿಲ್ 16ರಂದು ವಿಶೇಷ ಅಧಿವೇಶನ ಕರೆದಿದ್ದಿರಿ. ಕ್ಷೇತ್ರ ಪುನರ್ವಿಂಗಡಣೆ ಕುರಿತ ಮಸೂದೆಗೆ ತಿದ್ದುಪಡಿ ತರಲು ಲೋಕಸಭೆಯಲ್ಲಿ ಅಗತ್ಯ ಬಹುಮತ ಸಿಕ್ಕಿರಲಿಲ್ಲ’ ಎಂದು ಉಲ್ಲೇಖಿಸಿದ್ದಾರೆ.‘ಅದಾದ ನಂತರ ಜುಲೈ 16 ಮತ್ತು ಆಗಸ್ಟ್ 27ರಂದು ಮತ್ತೆ ಇದೇ ವಿಚಾರವಾಗಿ ಪತ್ರ ಬರೆದು ಸರ್ವಪಕ್ಷ ಸಭೆಗೆ ಮನವಿ ಮಾಡಿದ್ದೆ. ಇದೀಗ ನಾಲ್ಕನೇ ಸಲ ಮನವಿ ಮಾಡುತ್ತಿದ್ದೇನೆ. ಸಂಸತ್ತಿನಲ್ಲಿ ಚರ್ಚೆಗೆ ತರುವ ಮುನ್ನ, ನಿಮ್ಮ ಹೊಸ ಪ್ರಸ್ತಾವನೆಗಳ ಬಗ್ಗೆ ಮುಕ್ತ ಮಾತುಕತೆ ನಡೆಸಲು ದಯವಿಟ್ಟು ಸರ್ವಪಕ್ಷ ಸಭೆ ಕರೆಯಿರಿ’ ಎಂದು ಮನವಿ ಮಾಡಿದ್ದಾರೆ.I have written to PM @narendramodi ji for the fourth time, demanding an All-Party meeting before any fresh Constitutional Amendment Bill on Delimitation is finalised.The previous Bill failed to secure the requisite two-thirds majority. Such far-reaching constitutional changes… pic.twitter.com/RXxC0fgSkI— Mallikarjun Kharge (@kharge) October 16, 2026