ವೀಕೆಂಡ್, ಹಬ್ಬದ ಎಫೆಕ್ಟ್; ಊರುಗಳತ್ತ ಜನರು – ರಸ್ತೆಗಳಲ್ಲಿ ಕಿಲೋಮೀಟರ್ಗಟ್ಟಲೇ ಟ್ರಾಫಿಕ್
ಬೆಂಗಳೂರು: ವೀಕೆಂಡ್ ಮತ್ತು ದಸರಾ ಹಬ್ಬದ ಎಫೆಕ್ಟ್ ಹಿನ್ನೆಲೆ ಜನರು ಊರುಗಳತ್ತ ಮುಖ ಮಾಡಿದ್ದಾರೆ. ರಸ್ತೆಗಳಲ್ಲಿ ವಾಹನಗಳ ದಟ್ಟನೆಯಿದ್ದು, ಕಿಲೋಮಿಟರ್ಗಟ್ಟಲೇ ಟ್ರಾಫಿಕ್ ಜಾಮ್ ಕಂಡುಬಂದಿದೆ. ಮೆಜೆಸ್ಟಿಕ್ನಿಂದ ತಮ್ಮ ಊರುಗಳತ್ತ ಜನರು ತೆರಳುತ್ತಿದ್ದಾರೆ. ಕೆಎಸ್ಆರ್ಟಿಸಿ ಬಸ್ ಜೊತೆ ಪ್ರಯಾಣಿಕರ ಅನೂಕೂಲಕ್ಕಾಗಿ ಬಿಎಂಟಿಸಿ ಬಸ್ಗಳ ಬಳಕೆ ಮಾಡಲಾಗಿದೆ. ದೂರದ ಊರು

ಬೆಂಗಳೂರು: ವೀಕೆಂಡ್ ಮತ್ತು ದಸರಾ ಹಬ್ಬದ ಎಫೆಕ್ಟ್ ಹಿನ್ನೆಲೆ ಜನರು ಊರುಗಳತ್ತ ಮುಖ ಮಾಡಿದ್ದಾರೆ. ರಸ್ತೆಗಳಲ್ಲಿ ವಾಹನಗಳ ದಟ್ಟನೆಯಿದ್ದು, ಕಿಲೋಮಿಟರ್ಗಟ್ಟಲೇ ಟ್ರಾಫಿಕ್ ಜಾಮ್ ಕಂಡುಬಂದಿದೆ. ಮೆಜೆಸ್ಟಿಕ್ನಿಂದ ತಮ್ಮ ಊರುಗಳತ್ತ ಜನರು ತೆರಳುತ್ತಿದ್ದಾರೆ. ಕೆಎಸ್ಆರ್ಟಿಸಿ ಬಸ್ ಜೊತೆ ಪ್ರಯಾಣಿಕರ ಅನೂಕೂಲಕ್ಕಾಗಿ ಬಿಎಂಟಿಸಿ ಬಸ್ಗಳ ಬಳಕೆ ಮಾಡಲಾಗಿದೆ. ದೂರದ ಊರುಗಳಿಗೂ ಬಿಎಂಟಿಸಿ ಬಸ್ಗಳ ಮೂಲಕ ಪ್ರಯಾಣಿಕರು ಸಂಚಾರ ಬೆಳೆಸಿದ್ದಾರೆ. ಅಧಿಕಾರಿಗಳು ಸ್ಥಳದಲ್ಲೇ ನಿಂತು ಬಸ್ಗಳ ವ್ಯವಸ್ಥೆ ಮಾಡುತ್ತಿದ್ದಾರೆ. ಅತ್ತ ಮಳೆ, ಇತ್ತ ಟ್ರಾಫಿಕ್ನಿಂದ ವಾಹನ ಸವಾರರ ಪರದಾಡುವಂತಾಗಿದೆ. ದಸರಾಗೆ ಊರಿಗೆ ಹೊರಟವರಿಗೆ ನಗರದ ಸುತ್ತಲೂ ಭಾರೀ ಟ್ರಾಫಿಕ್ ಬಿಸಿ ತಟ್ಟಿದೆ. ನಗರದ ಹೊರವಲಯ ಸಂಪರ್ಕಿಸುವ ರಸ್ತೆಗಳಲ್ಲಿ ಕಿಲೋಮೀಟರ್ಗಟ್ಟಲೇ ಟ್ರಾಫಿಕ್ ಸಮಸ್ಯೆ ಇದೆ. ಸಾಲಾಗಿ ವಾಹನಗಳು ನಿಂತಲ್ಲೇ ನಿಂತಿವೆ. ತುಮಕೂರು ರಸ್ತೆ, ಯಶವಂತಪುರ ಫ್ಲೈಓವರ್, ಗೊರಗುಂಟೆಪಾಳ್ಯ, ಇಸ್ಕಾನ್ ಬಳಿಯ ರಸ್ತೆ, ರಾಜಕುಮಾರ್ ರಸ್ತೆಗಳಲ್ಲಿ ಕಿ.ಮೀ ಟ್ರಾಫಿಕ್ ಜಾಮ್ ಕಂಡುಬಂದಿದೆ.
Read the complete story at Public TV Kannada