ಗಂಗಾರತಿ ಮಾದರಿ ಕಾವೇರಿ ಮಾತೆಗೆ ಆರತಿ; ಪೂಜೆ ನೆರವೇರಿಸಿದ ಸಿಎಂ ಡಿಕೆಶಿ
ಮಂಡ್ಯ: ವಾರಣಾಸಿಯ ಗಂಗಾರತಿಯ ಮಾದರಿಯಲ್ಲೇ ಕರ್ನಾಟಕದಲ್ಲೂ ಕಾವೇರಿ ನದಿಗೆ ಪೂಜೆ ಸಲ್ಲಿಸುವ ಮಹತ್ವಾಕಾಂಕ್ಷೆಯ ಕಾವೇರಿ ಆರತಿ ಕಾರ್ಯಕ್ರಮದ ಎರಡನೇ ವರ್ಷದ ಸಂಭ್ರಮಕ್ಕೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಕೆಆರ್ಎಸ್ಗೆ ಆಗಮಿಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರು ಆರತಿ ಮಾಡುವ ಮೂಲಕ ಕಾವೇರಿ ಆರತಿಗೆ ಚಾಲನೆ ನೀಡಿದರು. ಡಿಕೆಶಿ ಪತ್ನಿ ಉಷಾ ಅವರು ಕೂಡ ಕಾವೇರಿ ಆರತಿಯಲ್ಲಿ

ಮಂಡ್ಯ: ವಾರಣಾಸಿಯ ಗಂಗಾರತಿಯ ಮಾದರಿಯಲ್ಲೇ ಕರ್ನಾಟಕದಲ್ಲೂ ಕಾವೇರಿ ನದಿಗೆ ಪೂಜೆ ಸಲ್ಲಿಸುವ ಮಹತ್ವಾಕಾಂಕ್ಷೆಯ ಕಾವೇರಿ ಆರತಿ ಕಾರ್ಯಕ್ರಮದ ಎರಡನೇ ವರ್ಷದ ಸಂಭ್ರಮಕ್ಕೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಕೆಆರ್ಎಸ್ಗೆ ಆಗಮಿಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರು ಆರತಿ ಮಾಡುವ ಮೂಲಕ ಕಾವೇರಿ ಆರತಿಗೆ ಚಾಲನೆ ನೀಡಿದರು. ಡಿಕೆಶಿ ಪತ್ನಿ ಉಷಾ ಅವರು ಕೂಡ ಕಾವೇರಿ ಆರತಿಯಲ್ಲಿ ಭಾಗವಹಿಸಿದ್ದರು. ಸುತ್ತೂರು ಶ್ರೀಗಳುವ, ನಿಶ್ಚಲಾನಂದನಾಥ ಸ್ವಾಮಿ, ಚುಂಚನಗಿರಿ ಮೈಸೂರು ಶಾಖ ಮಠದ ಸೋಮನಾಥ ಸ್ವಾಮೀಜಿ ಹಾಗೂ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಶಾಸಕ ರಮೇಶ್ ಬಂಡೀಸಿದ್ದೇಗೌಡ ಸೇರಿ ಅನೇಕರು ಭಾಗವಹಿಸಿದ್ದರು. ದಕ್ಷಿಣ ಭಾರತದ ಶೈಲಿಯಲ್ಲಿ ಕಾವೇರಿ ಆರತಿ ಆರಂಭವಾಯಿತು. ಕೆಆರ್ಎಸ್ ಬೃಂದಾವನದಲ್ಲಿ ಮನಸೂರೆಗೊಂಡಿತು. ಸಾವಿರಾರು ಜನರು ಭಕ್ತಿಯ ಪರಾಕಾಷ್ಠೆಯಲ್ಲಿ ಆರತಿ ವೀಕ್ಷಣೆ ಮಾಡಿದರು. ವಾರಣಾಸಿ ವೈದಿಕರ ತಂಡದಿಂದ ಕಾವೇರಿ ಆರತಿ ನೆರವೇರಿತು. ಮೋಹನ್ ಮಿಶ್ರಾ ನೇತೃತ್ವದ ಅರ್ಚಕರ 15 ಜನರ ತಂಡದಿAದ ಕಾವೇರಿ ಮಾತೆಗೆ ಆರತಿ ನಡೆಸಲಾಯಿತು. ಕಾವೇರಿ ಆರತಿ ಬಳಿಕ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಹಲವು ಅಡೆತಡೆಗಳ ನಡುವೆ ಇಂದು ಕಾವೇರಿ ಆರತಿ ಜರುಗಿದೆ. ಕಳೆದ ಬಾರಿ ಸಾಕಷ್ಟು ತಪ್ಪುಗಳಾಗಿತ್ತು. ಈ ಬಾರಿ ಆ ತಪ್ಪುಗಳನ್ನ ಸರಿಪಡಿಸಿಕೊಂಡು ಕಾವೇರಿ ಆರತಿ ನೆರವೇರಿದೆ. 100 ದಿನಗಳಲ್ಲಿ ನಮ್ಮ ಸಿಎಂ ಜನಪರ ಕೆಲಸ ಮಾಡಿದ್ದಾರೆ. ಬಹಳ ಜನಕ್ಕೆ ಇದು ಹೊಟ್ಟೆ ಕಿವುಚುಕೊಳ್ಳುವಂತಾಗಿದೆ. ಯಾರು ಏನೇ ಅಂದ್ಕೊಳ್ಳಿ ಸಮಾಜಕ್ಕೆ ತೃಪ್ತಿಯಾಗುವಂತೆ ಕಲಸ ಮಾಡಿದ್ರೆ ಸಾಕು ಎಂದರು. ಸಿಎಂ ಡಿಕೆ ಶಿವಕುಮಾರ್ ಮಾತನಾಡಿ, 2ನೇ ವರ್ಷದ ಕಾವೇರಿ ಆರತಿ. ಕಾವೇರಿ ಆರತಿ ಉದ್ದೇಶ ಉಪಕಾರ ಸ್ಮರಣೆ. ನಮ್ಮೆಲ್ಲರ ತಾಯಿ ಕಾವೇರಿ. ಅನ್ನವನ್ನು ನೀಡುತ್ತಿದ್ದಾಳೆ. ಕನ್ನಂಬಾಡಿ ಕಟ್ಟೆ ಅನ್ನದ ತಟ್ಟೆ. ಕಾವೇರಿ ಮಡಿಲಲ್ಲಿ ಒಂದು ಮಗು ಬೆಳೆದರೆ ಇಡೀ ಕರುನಾಡು ಬೆಳೆಯುತ್ತದೆ. ಪ್ರತಿಯೊಂದು ಹನಿ ನೀರು ಉಳಿಸಿಕೊಳ್ಳಲು ಹೋರಾಟ. ಕಾವೇರಿ ನಮ್ಮ ಸಂಸ್ಕೃತಿ, ಪ್ರಕೃತಿ. ನಮ್ಮ ಬದುಕಿನ ದೊಡ್ಡ ಶಕ್ತಿ ಕಾವೇರಿ. ನೀರು ಉಳಿದರೆ ನಾಡು ಉಳಿಯುತ್ತದೆ. ಕಾವೇರಿ ಉಳಿದರೆ ಕರುನಾಡು ಉಳಿಯುತ್ತದೆ. ಚಾಮುಂಡೇಶ್ವರಿ ತಾಯಿ ಶಕ್ತಿಯ ಸಂಕೇತ. ಕಾವೇರಿ ತಾಯಿ ಸಮೃದ್ಧಿಯ ಸಂಕೇತ. ಆ ತಾಯಿಗೆ ನಮನ ಸಲ್ಲಿಸಲು ಪವಿತ್ರ ಕಾರ್ಯಕ್ರಮ ಆಯೋಜನೆ. ಕಾವೇರಿ ಆರತಿ ಕಾರ್ಯಕ್ರಮವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.