ಕಾಕ್ರೋಚ್ ವಿರುದ್ಧ ʻಸ್ವಚ್ಛ ದೆಹಲಿʼ ಅಭಿಯಾನ – ರಾಮಲೀಲಾದಲ್ಲಿ ರಾವಣನ ಜೊತೆ 30 ಅಡಿ ʻಜಿರಳೆʼ ದಹನ!
ನವದೆಹಲಿ: ಈ ಬಾರಿ ರಾಜಧಾನಿಯಲ್ಲಿ (Delhi Ramlila) ನಡೆಯುವ ರಾಮಲೀಲಾದಲ್ಲಿ ರಾವಣ, ಕುಂಭಕರ್ಣ ಮತ್ತು ಮೇಘನಾದ ಪ್ರತಿಮೆಗಳ ಜೊತೆಗೆ 30 ಅಡಿ ಎತ್ತರದ ʻಜಿರಳೆʼ (Cockroach) ಪ್ರತಿಕೃತಿಯ ದಹನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ದೆಹಲಿಯ ಪಿತಾಂಪುರದ ಶ್ರೀ ಕೇಶವ್ ರಾಮಲೀಲಾ ಸಮಿತಿ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಜಿರಳೆಯನ್ನು ಕೊಳಕು ಮತ್ತು ಅಶುಚಿತ್ವದ ಸ

ನವದೆಹಲಿ: ಈ ಬಾರಿ ರಾಜಧಾನಿಯಲ್ಲಿ (Delhi Ramlila) ನಡೆಯುವ ರಾಮಲೀಲಾದಲ್ಲಿ ರಾವಣ, ಕುಂಭಕರ್ಣ ಮತ್ತು ಮೇಘನಾದ ಪ್ರತಿಮೆಗಳ ಜೊತೆಗೆ 30 ಅಡಿ ಎತ್ತರದ ʻಜಿರಳೆʼ (Cockroach) ಪ್ರತಿಕೃತಿಯ ದಹನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ದೆಹಲಿಯ ಪಿತಾಂಪುರದ ಶ್ರೀ ಕೇಶವ್ ರಾಮಲೀಲಾ ಸಮಿತಿ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಜಿರಳೆಯನ್ನು ಕೊಳಕು ಮತ್ತು ಅಶುಚಿತ್ವದ ಸಂಕೇತವಾಗಿ ರೂಪಿಸಿರುವ ಸಮಿತಿ, ಈ ಬಾರಿಯ ದಸರಾ ಆಚರಣೆಯಲ್ಲಿ 30 ಅಡಿ ಎತ್ತರದ ʻಜಿರಳೆʼ ಪ್ರತಿಕೃತಿ ದಹನಕ್ಕೆ ಮುಂದಾಗಿದೆ. ಜೊತೆಗೆ ಈ ಉಪಕ್ರಮವು ʻಸ್ವಚ್ಛ ಭಾರತʼ ಮತ್ತು ʻಸ್ವಚ್ಛ ದೆಹಲಿʼ ಅಭಿಯಾನಗಳ ಭಾಗವಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಬೈಕ್ ಟ್ಯಾಕ್ಸಿ ಹತ್ತಿ 29 ಕಿ.ಮೀ. ಸವಾರಿ – ಡ್ರಾಪ್ ಆದ್ಮೇಲೆ ದುಡ್ಡಿಲ್ಲ ಅಂತ ಯುವತಿ ಕಿರಿಕ್, ವಿಡಿಯೋ ವೈರಲ್ ಸಮಿತಿಯ ಅಧ್ಯಕ್ಷ ಮತ್ತು ಬಿಜೆಪಿ ಶಾಸಕ ಅಶೋಕ್ ಗೋಯೆಲ್ ಮಾತನಾಡಿ, ಈ ನಿರ್ಧಾರವು ರಾಜಕೀಯ ಪ್ರೇರಿತವಲ್ಲ. ರಾವಣನ ಸೈನ್ಯದಲ್ಲಿರುವ ಅಸುರರಲ್ಲಿ ಜಿರಳೆ ಕೂಡ ಇರುತ್ತದೆ. ಜಿರಳೆ ಪ್ರತಿಕೃತಿಯನ್ನು ಸುಡುವುದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಮತ್ತು ಸ್ವಚ್ಛತೆಯ ಸಂದೇಶವನ್ನು ಬಲಪಡಿಸುವ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು. ನೀಟ್ ಹಗರಣದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ತಲೆದಂಡವಾದ ಬಳಿಕ, ಈಗ ಎಸ್ಐಆರ್ನಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸುತ್ತಿದೆ. ಈ ಸಂದರ್ಭದಲ್ಲೇ ಈ ನಿರ್ಧಾರ ಪ್ರಕಟವಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮುನಿಸು ಮರೆತು ಒಂದಾದ ಡಿಸಿ, ಎಸ್ಪಿ – ಒಟ್ಟಾಗಿ ಹಾಸನಾಂಬ ದರ್ಶನೋತ್ಸವ ಸಿದ್ಧತೆ ಪರಿಶೀಲನೆ; ಕುಂಕುಮಾರ್ಚನೆ