ನಟ ರಣಬೀರ್ ಕಪೂರ್ ಕೈಯಲ್ಲಿ ಬರೋಬ್ಬರಿ ₹78 ಲಕ್ಷದ ವಾಚ್! ಇದರ ವಿಶೇಷ ಏನು?
ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟುಹಾಕಿರುವ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ, ರವಿ ದುಬೆ, ಯಶ್, ರಾಕುಲ್ ಪ್ರೀತ್ ಸಿಂಗ್, ನಿರ್ದೇಶಕ ನಿತೀಶ್ ತಿವಾರಿ ಹಾಗೂ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಭಾಗವಹಿಸಿದ್ದರು. ಈ ಕಾ

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟುಹಾಕಿರುವ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ, ರವಿ ದುಬೆ, ಯಶ್, ರಾಕುಲ್ ಪ್ರೀತ್ ಸಿಂಗ್, ನಿರ್ದೇಶಕ ನಿತೀಶ್ ತಿವಾರಿ ಹಾಗೂ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಮನಗೆದ್ದ ರಣಬೀರ್ ಕಪೂರ್, ತಮ್ಮ ಕೈಯಲ್ಲಿದ್ದ ದುಬಾರಿ ಹಾಗೂ ವಿಶೇಷ ವಿನ್ಯಾಸದ ಕೈ ಗಡಿಯಾರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ರಣಬೀರ್ ಕಪೂರ್ ಧರಿಸಿದ್ದ ಗಡಿಯಾರದ ಮೌಲ್ಯ ಬರೋಬ್ಬರಿ ₹78 ಲಕ್ಷ.ಯಶ್ ಬಾಸ್ ಅವರಿಂದ ಇನ್ನೂ ಚೆನ್ನಾಗಿ ಕನ್ನಡ ಕಲಿಯುತ್ತೇನೆ ಎಂದ ರಣಬೀರ್ ಕಪೂರ್PHOTOS: ಪ್ರೇಮದ ಊರಲಿ ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ನಟ ಯಶ್ ಹಾಗಾದರೆ ಈ ವಾಚ್ನ ವಿಶೇಷತೆಗಳೇನು?ವಿಶೇಷ ಆವೃತ್ತಿ: ರಣಬೀರ್ ಕಪೂರ್ ಧರಿಸಿದ್ದು 'ಜೇಕಬ್ ಆಂಡ್ ಕೋ' (Jacob & Co.) ಸಂಸ್ಥೆಯ 'ಎಪಿಕ್ ಎಕ್ಸ್ ರಾಮ್ ಜನ್ಮಭೂಮಿ ರೋಸ್ ಗೋಲ್ಡ್ ಸ್ಪೆಷಲ್ ಎಡಿಷನ್' ಗಡಿಯಾರ. ಇದರ ಬೆಲೆ ₹78 ಲಕ್ಷ ಎಂದು ಈಥೋಸ್ ವಾಚಸ್ ತಿಳಿಸಿದೆ.ವಿಶಿಷ್ಟ ಕೆತ್ತನೆ: ರಾಮಜನ್ಮಭೂಮಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಾರವನ್ನು ಬಿಂಬಿಸುವ ಕೆತ್ತನೆ ಈ ಗಡಿಯಾರದಲ್ಲಿದೆ. ಅಯೋಧ್ಯೆಯ ರಾಮಮಂದಿರದ ಸಣ್ಣ ಚಿತ್ರ, ಬಿಲ್ಲು ಹಿಡಿದ ಶ್ರೀರಾಮ ಮತ್ತು ಹನುಮಂತನ ಕೆತ್ತನೆಗಳನ್ನೂ ಇದು ಒಳಗೊಂಡಿದೆ.ಆಧ್ಯಾತ್ಮಿಕ ಸ್ಪರ್ಶ: ಡಯಲ್ ಮತ್ತು ಬೆಝಲ್ ಭಾಗದಲ್ಲಿ ಹಿಂದೂ ದೇವತೆಗಳ ಶಾಸನಗಳನ್ನು ಕೆತ್ತಲಾಗಿದೆ.ವಿನ್ಯಾಸ: ಕಿತ್ತಳೆ ಬಣ್ಣದ ಪಟ್ಟಿ (Orange strap), ರೋಸ್ ಗೋಲ್ಡ್ನಿಂದ ಮಾಡಿದ ಪಿನ್ ಬಕಲ್ (Clasp) ಅನ್ನು ಇದು ಹೊಂದಿದೆ. ಎಪಿಕ್ ಎಕ್ಸ್ ಕಲೆಕ್ಷನ್ ಅನ್ನು 2015ರಲ್ಲಿ ಪ್ರಾರಂಭಿಸಲಾಯಿತು ಮತ್ತು 2022ರಲ್ಲಿ ಇದನ್ನು ಪರಿಷ್ಕರಿಸಿ ಹೊಸದಾಗಿ ವಿನ್ಯಾಸಗೊಳಿಸಲಾಯಿತು.75ರ ವೃದ್ಧನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ 30ರ ಯುವತಿ; ಶೀಘ್ರದಲ್ಲೇ ಮದುವೆ!ಜೈಲರ್ 2: 40 ವರ್ಷಗಳ ಬಳಿಕ ತೆರೆ ಮೇಲೆ ರಜನಿಕಾಂತ್, ಹೃತಿಕ್ ರೋಷನ್ ಜೋಡಿಯ ಮೋಡಿ ಈ ರಾಮಜನ್ಮಭೂಮಿ ಸರಣಿಯ ಗಡಿಯಾರಗಳಲ್ಲಿ ಟೈಟಾನಿಯಂ ಎಡಿಷನ್ (₹35.88 ಲಕ್ಷ), ರೋಸ್ ಗೋಲ್ಡ್ ಎಡಿಷನ್ (₹78 ಲಕ್ಷ) ಮತ್ತು ಗೋಲ್ಡ್ ಎಡಿಷನ್ (₹83 ಲಕ್ಷದಿಂದ 1.08 ಕೋಟಿವರೆಗೆ) ಸೇರಿದಂತೆ ನಾಲ್ಕು ಮಾದರಿಗಳು ಲಭ್ಯವಿವೆ.ಕಾರ್ಯಕ್ರಮದಲ್ಲಿ ರಣಬೀರ್ ಮಾತುಕಾರ್ಯಕ್ರಮದಲ್ಲಿ ಮಾತನಾಡಿದ ರಣಬೀರ್, ‘ಬೆಳ್ಳಿತೆರೆಯಲ್ಲಿ ಶ್ರೀರಾಮನ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ. ನಾನು ಅದಕ್ಕೆ ಅರ್ಹನೇ ಎಂಬ ಅನುಮಾನಗಳಿದ್ದವು. ಕೋಟ್ಯಂತರ ಜನರು ಹೃದಯದಲ್ಲಿ ಇಟ್ಟುಕೊಂಡಿರುವ ಶ್ರೀರಾಮನ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವೇ ಎಂಬ ಪ್ರಶ್ನೆಗಳಿದ್ದವು. ಆದರೆ ಇದು ನನ್ನನ್ನು ಬದಲಾಯಿಸಿಕೊಳ್ಳಲು, ಶ್ರೀರಾಮನನ್ನು, ರಾಮಾಯಣವನ್ನು ಮತ್ತು ನಮ್ಮ ಸಂಸ್ಕೃತಿ-ಇತಿಹಾಸವನ್ನು ಉತ್ತಮವಾಗಿ ಅರ್ಥೈಸಿಕೊಳ್ಳಲು ಸಿಕ್ಕ ಜೀವಮಾನದ ಅವಕಾಶ ಎಂದು ಅರಿತುಕೊಂಡೆ‘ ಎಂದು ಹೇಳಿದ್ದಾರೆ.