'ಜೈಲರ್–2’ ಅಬ್ಬರ: ಮೊದಲ ದಿನದ ಗಳಿಕೆಯತ್ತ ಕಣ್ಣು
ಬಹುನಿರೀಕ್ಷಿತ ರಜನಿಕಾಂತ್ ಅಭಿನಯದ ‘ಜೈಲರ್–2’ ಗುರುವಾರ ವಿಶ್ವದಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮ ಕಳೆಗಟ್ಟಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಟೌಟ್ಗಳಿಗೆ ಹಾಲಿನ ಅಭಿಷೇಕ, ಜನಪದ ನೃತ್ಯಗಳ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರವನ್ನು ಬರಮಾಡಿಕೊಂಡಿದ್ದಾರೆ.ಕುಟುಂಬದೊಂದಿಗೆ ಶಾಂತಿಯುತ ಬದುಕು ನಡೆಸ

ಬಹುನಿರೀಕ್ಷಿತ ರಜನಿಕಾಂತ್ ಅಭಿನಯದ ‘ಜೈಲರ್–2’ ಗುರುವಾರ ವಿಶ್ವದಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮ ಕಳೆಗಟ್ಟಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಟೌಟ್ಗಳಿಗೆ ಹಾಲಿನ ಅಭಿಷೇಕ, ಜನಪದ ನೃತ್ಯಗಳ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರವನ್ನು ಬರಮಾಡಿಕೊಂಡಿದ್ದಾರೆ.ಕುಟುಂಬದೊಂದಿಗೆ ಶಾಂತಿಯುತ ಬದುಕು ನಡೆಸುತ್ತಿದ್ದ ನಿವೃತ್ತ ಜೈಲರ್ ಟೈಗರ್ ಮುತ್ತುವೇಲ್ ಪಾಂಡಿಯನ್ಗೆ ಭೂಗತ ಜಗತ್ತಿನ ಶಕ್ತಿಗಳಿಂದ ಎದುರಾಗುವ ಬೆದರಿಕೆಗಳನ್ನು ಅವರು ಹೇಗೆ ಎದುರಿಸಿ ಜಯಿಸುತ್ತಾರೆ ಎಂಬುದು ಚಿತ್ರದ ಕಥಾಹಂದರ.ಆ್ಯಕ್ಷನ್ ಪ್ರಧಾನ ಈ ಚಿತ್ರವನ್ನು ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶಿಸಿದ್ದಾರೆ. ಕಲಾನಿಧಿ ಮಾರನ್ ನಿರ್ಮಿಸಿರುವ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದು, ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಚಿತ್ರಗ್ರಹಣ ನಿರ್ವಹಿಸಿದ್ದಾರೆ.‘ಜೈಲರ್–2’ ಈ ಸರಣಿಯ ಎರಡನೇ ಚಿತ್ರ. ಬಾಕ್ಸ್ ಆಫೀಸ್ ಗಳಿಕೆಯ ಅಂಕಿಅಂಶಗಳನ್ನು ಪ್ರಕಟಿಸುವ ‘ಸ್ಯಾಕ್ನಿಲ್ಕ್’ ವೆಬ್ಸೈಟ್ ಪ್ರಕಾರ, 2023ರಲ್ಲಿ ಬಿಡುಗಡೆಯಾಗಿದ್ದ ಮೊದಲ ‘ಜೈಲರ್’ ಚಿತ್ರವು ಮೊದಲ ದಿನವೇ ವಿಶ್ವದಾದ್ಯಂತ ₹96.36 ಕೋಟಿ ಗಳಿಸಿತ್ತು.‘ಸ್ಯಾಕ್ನಿಲ್ಕ್’ ವೆಬ್ಸೈಟ್ನ ಮಾಹಿತಿಯಂತೆ, ‘ಜೈಲರ್–2’ ಮೊದಲ ದಿನ ಒಟ್ಟು 6,044 ಪ್ರದರ್ಶನಗಳನ್ನು ಹೊಂದಿದೆ. ಈ ಪೈಕಿ ತಮಿಳು ಆವೃತ್ತಿಯು 3,709, ತೆಲುಗು ಆವೃತ್ತಿಯು 924, ಹಿಂದಿ ಆವೃತ್ತಿಯು 1,369 ಹಾಗೂ ಕನ್ನಡ ಆವೃತ್ತಿಯು 42 ಪ್ರದರ್ಶನಗಳನ್ನು ಹೊಂದಿವೆ. ಮೊದಲ ದಿನದ ಗಳಿಕೆ ಎಷ್ಟಿರಲಿದೆ ಎಂಬ ಕುತೂಹಲ ಮೂಡಿದೆ.***ರಜನಿಕಾಂತ್