ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸಜ್ಜು: ಶೀಘ್ರವೇ ವಿಶೇಷ ಅಧಿವೇಶನ ಸಾಧ್ಯತೆ
– ಸಂವಿಧಾನಿಕ ತಿದ್ದುಪಡಿಗೆ ಕೇಂದ್ರಕ್ಕೆ ಹಲವು ಪಕ್ಷಗಳಿಂದ ಬೆಂಬಲ ನವದೆಹಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Gyanesh Kumar) ವಿರುದ್ಧ ವಿರೋಧ ಪಕ್ಷಗಳ ಪ್ರತಿಭಟನೆ ತೀವ್ರಗೊಂಡಿರುವ ನಡುವೆಯೇ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಡಲು ಮುಂದಾಗಿದೆ. ಕ್ಷೇತ್ರ ಪುನರ್ವಿಂಗಡನೆ (Delimitation)

– ಸಂವಿಧಾನಿಕ ತಿದ್ದುಪಡಿಗೆ ಕೇಂದ್ರಕ್ಕೆ ಹಲವು ಪಕ್ಷಗಳಿಂದ ಬೆಂಬಲ ನವದೆಹಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Gyanesh Kumar) ವಿರುದ್ಧ ವಿರೋಧ ಪಕ್ಷಗಳ ಪ್ರತಿಭಟನೆ ತೀವ್ರಗೊಂಡಿರುವ ನಡುವೆಯೇ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಡಲು ಮುಂದಾಗಿದೆ. ಕ್ಷೇತ್ರ ಪುನರ್ವಿಂಗಡನೆ (Delimitation) ಹಾಗೂ ಲೋಕಸಭೆ-ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ(Women Reservation) ಜಾರಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು(Constitutional Amendments) ಅಂಗೀಕರಿಸಲು ಕೇಂದ್ರ ಸರ್ಕಾರ ಈ ತಿಂಗಳಾಂತ್ಯದಲ್ಲಿ ಸಂಸತ್ತಿನ ವಿಶೇಷ ಅಧಿವೇಶನ(Special Parliament Session) ಕರೆಯುವ ಸಾಧ್ಯತೆಯಿದೆ. ಲೋಕಸಭೆಯಲ್ಲಿ ಈ ಮಸೂದೆಗಳನ್ನು ಸುಲಭವಾಗಿ ಪಾಸ್ ಮಾಡಿಕೊಳ್ಳಲು ಅಗತ್ಯವಿರುವಷ್ಟು ಸಂಖ್ಯಾಬಲ ತಮ್ಮ ಬಳಿ ಇದೆ ಎಂದು ಉನ್ನತ ಸರ್ಕಾರಿ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ. ಕಳೆದ ಏಪ್ರಿಲ್ 17ರ ಬಜೆಟ್ ಅಧಿವೇಶನದಲ್ಲಿ ಇದೇ ಸಂವಿಧಾನ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಅಗತ್ಯ ಬೆಂಬಲ ಸಿಗದೆ ಪತನಗೊಂಡಿದ್ದು ಮೋದಿ ಸರ್ಕಾರಕ್ಕೆ ಹಿನ್ನಡೆಯಾಗಿತ್ತು. ನಂತರ ಮುಂಗಾರು ಅಧಿವೇಶನದಲ್ಲಿ ಇದನ್ನು ಮಂಡಿಸಲು ಉದ್ದೇಶಿಸಲಾಗಿದ್ದರೂ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದ, ಸಿಜೆಪಿ ಹೋರಾಟದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಎಸ್ಐಆರ್ ವಿವಾದಗಳು ಭುಗಿಲೆದ್ದ ಕಾರಣ ಸರ್ಕಾರ ಈ ನಿರ್ಧಾರವನ್ನು ಮುಂದೂಡಿತ್ತು. ಇದನ್ನೂ ಓದಿ: ಕಾಕ್ರೋಚ್ ವಿರುದ್ಧ ʻಸ್ವಚ್ಛ ದೆಹಲಿʼ ಅಭಿಯಾನ – ರಾಮಲೀಲಾದಲ್ಲಿ ರಾವಣನ ಜೊತೆ 30 ಅಡಿ ʻಜಿರಳೆʼ ದಹನ! ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಸಂಸತ್ತಿನಲ್ಲಿ ವಿಶೇಷ ಬಹುಮತ (ಕನಿಷ್ಠ ಮೂರನೇ ಎರಡರಷ್ಟು ಬಹುಮತ – ಅಂದಾಜು 360) ಸದಸ್ಯರ ಬೆಂಬಲ ಅಗತ್ಯವಿದೆ. ಪ್ರಸ್ತುತ 540 ಸದಸ್ಯ ಬಲ ಹೊಂದಿರುವ ಲೋಕಸಭೆಯಲ್ಲಿ ಎನ್ಡಿಎ ಮೈತ್ರಿಕೂಟದ ಸ್ಥಾನಗಳು ಹೆಚ್ಚಿವೆ. ಕಳೆದ ಅಧಿವೇಶನದ ನಂತರ ತೃಣಮೂಲ ಕಾಂಗ್ರೆಸ್ನ (TMC) 20 ಸಂಸದರು ಹಾಗೂ ಶಿವಸೇನೆ (UBT) ಉದ್ದವ್ ಬಣದ 6 ಸಂಸದರು ಆಡಳಿತ ಪಕ್ಷದ ಪರ ವಾಲಿದ್ದು, ಸರ್ಕಾರದ ಸಂಖ್ಯಾಬಲ ಗಣನೀಯವಾಗಿ ಹೆಚ್ಚಿದೆ. ಇದರೊಂದಿಗೆ ತಮಿಳುನಾಡು ಚುನಾವಣೆಯ ನಂತರ ಕಾಂಗ್ರೆಸ್ ಮೈತ್ರಿ ತೊರೆದು ಇಂಡಿ(INDIA) ಕೂಟದಿಂದ ಹೊರಬಂದಿರುವ ಡಿಎಂಕೆ (DMK) ಪಕ್ಷದೊಂದಿಗೂ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದ್ದು, ಮಸೂದೆಗೆ ಅವರ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದೆ. ಜೊತೆಗೆ ಕೆಲವು ಸಣ್ಣ ವಿರೋಧ ಪಕ್ಷಗಳ ಬೆಂಬಲ ಕೋರಲಾಗಿದೆ. ಅಧಿವೇಶನ ಇನ್ನೂ ಮುಕ್ತಾಯಗೊಂಡಿಲ್ಲ ಆಗಸ್ಟ್ 13 ರಂದು ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತೇ ಹೊರತು, ಸಾಂವಿಧಾನಿಕವಾಗಿ ಅಧಿವೇಶನವನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿ ಅಧಿಸೂಚನೆ ಹೊರಡಿಸಿಲ್ಲ. ಸಾಮಾನ್ಯವಾಗಿ 2-3 ದಿನಗಳಲ್ಲಿ ಆಗಬೇಕಿದ್ದ ಈ ಪ್ರಕ್ರಿಯೆ ಎರಡು ತಿಂಗಳು ಕಳೆದರೂ ಆಗಿಲ್ಲ. ಇದು ಸರ್ಕಾರಕ್ಕೆ ನೇರವಾಗಿ ವಿಶೇಷ ಕಲಾಪ ಕರೆಯಲು ದಾರಿ ಮಾಡಿಕೊಟ್ಟಿದೆ. ಅಕ್ಟೋಬರ್ 26 ಮತ್ತು 27 ರಂದು ಸಂವಿಧಾನ್ ಸದನದಲ್ಲಿ 12ನೇ ಬ್ರಿಕ್ಸ್ (BRICS) ಸಂಸದೀಯ ವೇದಿಕೆ ನಡೆಯಲಿದ್ದು, ಈ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ಒಂದು ವಾರದ ಮುಂಚಿತ ನೋಟಿಸ್ ನೀಡಿ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆಯಿದೆ. ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಏಪ್ರಿಲ್ 17 ರಂದು ಲೋಕಸಭೆಯಲ್ಲಿ ನಡೆದ ಮಸೂದೆಯ ಮತದಾನದಲ್ಲಿ, ಮಸೂದೆಯ ಪರವಾಗಿ 298 ಮತಗಳು ಮತ್ತು ವಿರುದ್ಧವಾಗಿ 230 ಮತಗಳು ಬಿದ್ದಿದ್ದವು. ಒಟ್ಟು 528 ಸದಸ್ಯರು ಈ ಮತದಾನದಲ್ಲಿ ಭಾಗವಹಿಸಿದ್ದರು. ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಗೊಳ್ಳಲು ಮೂರನೇ ಎರಡರಷ್ಟು ಬಹುಮತದ (ಕನಿಷ್ಠ 352 ಮತಗಳು) ಅಗತ್ಯವಿದ್ದಿದ್ದರಿಂದ, ಈ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಳ್ಳದೆ ಸೋಲನ್ನು ಅನುಭವಿಸಿತು. ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯೊಂದಿಗೆ ಮಹಿಳಾ ಮೀಸಲಾತಿಯನ್ನು ಲಿಂಕ್ ಮಾಡಿದ್ದನ್ನು ವಿರೋಧಿಸಿ ಇಂಡಿ ಒಕ್ಕೂಟದ ಪಕ್ಷಗಳು ಇದರ ವಿರುದ್ಧ ಮತ ಚಲಾಯಿಸಿದ್ದವು.