ಯಾದಗಿರಿ | ಬರಸಿಡಿಲ ನಡುವೆ ಶಿಕ್ಷಕರ ಮತಬೇಟೆ: 13 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಯಾದಗಿರಿ: ಬರದ ಬಿಸಿಲಿನ ನಡುವೆ ಈಶಾನ್ಯ ಶಿಕ್ಷಕರ ವಿಧಾನ ಪರಿಷತ್ ಚುನಾವಣೆ ಅಖಾಡ ರಂಗೇರುತ್ತಿದ್ದು, ಜಿಲ್ಲೆಯ 2,259 ಶಿಕ್ಷಕ ಮತದಾರರೂ 13 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.ಬಿಜೆಪಿ ಅಭ್ಯರ್ಥಿಯೂ ಆಗಿರುವ ಹಾಲಿ ಸದಸ್ಯ ಶಶೀಲ್ ಜಿ.ನಮೋಶಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರ ನಡುವೆ ನೇರ ಹಣಾಹಣಿ ಸ್ಪರ್ಧೆ ಇದೆ. ಜಿಲ್ಲೆಗೆ ಇದುವರೆಗೆ ಈ ಎರಡೂ

ಯಾದಗಿರಿ: ಬರದ ಬಿಸಿಲಿನ ನಡುವೆ ಈಶಾನ್ಯ ಶಿಕ್ಷಕರ ವಿಧಾನ ಪರಿಷತ್ ಚುನಾವಣೆ ಅಖಾಡ ರಂಗೇರುತ್ತಿದ್ದು, ಜಿಲ್ಲೆಯ 2,259 ಶಿಕ್ಷಕ ಮತದಾರರೂ 13 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.ಬಿಜೆಪಿ ಅಭ್ಯರ್ಥಿಯೂ ಆಗಿರುವ ಹಾಲಿ ಸದಸ್ಯ ಶಶೀಲ್ ಜಿ.ನಮೋಶಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರ ನಡುವೆ ನೇರ ಹಣಾಹಣಿ ಸ್ಪರ್ಧೆ ಇದೆ. ಜಿಲ್ಲೆಗೆ ಇದುವರೆಗೆ ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದ ಕಣಕ್ಕೆ ಪ್ರವೇಶವೇ ಮಾಡಿಲ್ಲ. ಕಲಬುರಗಿ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಚಾರದಲ್ಲಿಯೇ ತೊಡಗಿಸಿಕೊಂಡಿದ್ದಾರೆ.ಮಟ್ಟೂರ, ನಮೋಶಿ ಸೇರಿದಂತೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸೈಬಣ್ಣಾ ಜಮಾದಾರ, ಜನತಾ ದಳ (ಸಂಯುಕ್ತ) ಪಕ್ಷದ ಅಭ್ಯರ್ಥಿ ಪ್ರೊ.ಎಸ್.ಎಲ್.ಪಾಟೀಲ, ಪಕ್ಷೇತರ ಅಭ್ಯರ್ಥಿಗಳಾದ ಕವಿರಾಜ, ತುಳಸಪ್ಪ ದಾಸರ, ಮೆಹಬೂಬ್ ವಂಟೇಲಿ, ರಾಜಕುಮಾರ, ರಾಜು, ಶರಣಬಸಪ್ಪ, ಶಶಿಧರ, ಶಿವಶಂಕರ ಹಾಗೂ ಸುರೇಶ ಅವರು ಕಣದಲ್ಲಿದ್ದಾರೆ.ಈಶಾನ್ಯ ಶಿಕ್ಷಕರ ಕ್ಷೇತ್ರವು ಬಿಜೆಪಿಯ ಭದ್ರ ಕೋಟೆಯಾಗಿದ್ದು, 2014ರವರೆಗೆ ಶಶೀಲ್ ನಮೋಶಿ ಅವರು ಸತತ ಮೂರು ಬಾರಿ ಗೆದ್ದರು. 2014ರಲ್ಲಿ ಕಾಂಗ್ರೆಸ್ನ ಶರಣಪ್ಪ ಮಟ್ಟೂರ ಗೆದ್ದು, ನಂತರದ 2020ರ ಚುನಾವಣೆಯಲ್ಲಿ ಜೆಡಿಎಸ್–ಕಾಂಗ್ರೆಸ್– ಬಿಜೆಪಿಯ ತ್ರಿಕೋನ ಸ್ಪರ್ಧೆಯ ನಡುವೆಯೂ ನಮೋಶಿ ವಿರುದ್ಧ ಪರಾಭವಗೊಂಡಿದ್ದರು. ಈಗ ಮತ್ತೊಮ್ಮೆ ಇಬ್ಬರ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.ಕಾಂಗ್ರೆಸ್ ಪಕ್ಷಕ್ಕಿಂತಲೂ ಬಿಜೆಪಿ–ಜೆಡಿಎಸ್ ದೋಸ್ತಿ ಪಕ್ಷಗಳು ಪ್ರಚಾರದಲ್ಲಿ ಮುಂದಿವೆ. ನಮೋಶಿ ಪರವಾಗಿ ಶಾಸಕ ಶರಣಗೌಡ ಕಂದಕೂರ, ಪಕ್ಷದ ಜಿಲ್ಲಾಧ್ಯಕ್ಷರು ಗುರುಮಠಕಲ್ನಲ್ಲಿ ಪ್ರಚಾರ ಸಭೆಗಳನ್ನು ನಡೆಸಿ ಮತಯಾಚಿಸುತ್ತಿದ್ದಾರೆ. ಬಿಜೆಪಿಯ ಕೆಲ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ, ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಒಂದು ಸುತ್ತಿನ ಪ್ರಚಾರವನ್ನು ಪೂರ್ಣಗೊಳಿಸಿದ್ದಾರೆ.ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ನ ಮೂವರು ಶಾಸಕರು ಇದ್ದರೆ, ಬಿಜೆಪಿಯ ಒಬ್ಬ ಶಾಸಕರೂ ಇಲ್ಲ. ಆದರೆ, ಎನ್ಡಿಎ ದೋಸ್ತಿಯ ಭಾಗವಾಗಿ ಜೆಡಿಎಸ್ ಶಾಸಕರು ಇರುವುದರಿಂದ ಬಿಜೆಪಿ ಅಭ್ಯರ್ಥಿಯಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ತಿಮ್ಮಯ್ಯ ಪುರ್ಲೆ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಮತಬುಟ್ಟಿಗೆ ಕೈಹಾಕಿದ್ದರು. ಇದರಿಂದಾಗಿ ‘ಕೋಟಾ’ ಮತಗಳನ್ನು ತಲುಪಲು ನಮೋಶಿ ಅವರು ಪ್ರಯಾಸ ಪಡಬೇಕಾಗಿತ್ತು. ಈ ಬಾರಿ ಜೆಡಿಎಸ್ ಅಭ್ಯರ್ಥಿ ಇಲ್ಲ. ಆದರೆ, ಕಳೆದ ಬಾರಿಯಂತೆ ಈ ಬಾರಿ ಜಿಲ್ಲೆಯಲ್ಲಿ ಶಾಸಕರ ಬಲ ಇಲ್ಲವಾಗಿದೆ.ಪುರುಷ ಶಿಕ್ಷಕ ಮತದಾರರೇ ನಿರ್ಣಾಯಕಜಿಲ್ಲೆಯಲ್ಲಿ ಒಟ್ಟು 2,259 ಶಿಕ್ಷಕ ಮತದಾರರಿದ್ದಾರೆ. ಅವರಲ್ಲಿ ಪುರುಷ ಶಿಕ್ಷಕರು 1,548 ಮತದಾರರಿದ್ದು, ಅಭ್ಯರ್ಥಿಗಳ ಗೆಲುವಿನಲ್ಲಿ ಅವರೇ ನಿರ್ಣಾಯಕ ಪಾತ್ರ ವಹಿಸುವರು. ಶಿಕ್ಷಕಿಯರ ಮತದಾರರ ಸಂಖ್ಯೆಯು 711 ಇದೆ.2025ರ ಅಂತಿಮ ಮತದಾರರ ಕರಡು ಪಟ್ಟಿಯಲ್ಲಿ 2,020 ಶಿಕ್ಷಕ ಮತದಾರರ ಇದ್ದರು. ಈಗ 239 ಮತದಾರರ ಹೆಚ್ಚಳವಾಗಿ 2,259ಕ್ಕೆ ತಲುಪಿದೆ.ನನಸಾಗದ ಗುರುಭವನಜಿಲ್ಲೆಯಾಗಿ 16 ವರ್ಷಗಳು ಕಳೆದರೂ ಇದುವರೆಗೂ ಗುರುಭವನ ನಿರ್ಮಾಣದ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.ತಾಲ್ಲೂಕುಗಳು ಮತ್ತು ಜಿಲ್ಲಾ ಕೇಂದ್ರದಲ್ಲಿ ಶಿಕ್ಷಕರ ಸಭೆ, ಸಮಾರಂಭ, ತರಬೇತಿ ಹಾಗೂ ಶೈಕ್ಷಣಿಕ ಸಂಬಂಧಿತ ಚರ್ಚೆಗಳನ್ನು ನಡೆಸಲು ಶಿಕ್ಷಕರಿಗೆ ಸುಸಜ್ಜಿತವಾದ ಗುರುಭವನದ ಅಗತ್ಯವಿದೆ. ಆದರೆ, ಒಂದೂವರೆ ದಶಕದಿಂದಲೂ ಭರವಸೆಯಾಗಿಯೇ ಉಳಿದಿರುವುದು ಶಿಕ್ಷಕರಲ್ಲಿ ಅಸಮಾಧಾನವಿದೆ.ಮತಗಟ್ಟೆವಾರು ಶಿಕ್ಷಕ ಮತದಾರರುಮತಗಟ್ಟೆಗಳು;ಪುರುಷ;ಮಹಿಳೆ;ಒಟ್ಟುಶಹಾಪುರ;410;221;631ಸುರಪುರ;306;130;436ಹುಣಸಗಿ;82;16;98ಕೆಂಭಾವಿ;95;16;111ವಡಗೇರಾ;76;24;100ಕೊಡೇಕಲ್;59;13;72ಯಾದಗಿರಿ;353;220;573ಗುರುಮಠಕಲ್;167;71;238ಒಟ್ಟು;1,548;711;2,259261017-30-1834128926