ರಾಕೇಶ್ ಶೆಟ್ಟಿ ಬಂಧನಕ್ಕೆ ಒತ್ತಾಯ: HDK ನೇತೃತ್ವದಲ್ಲಿ JDS ಕಾರ್ಯಕರ್ತರ ಹೋರಾಟ
ಬೆಂಗಳೂರು: ‘ಸ್ಟಿಂಗ್ ಕಾರ್ಯಾಚರಣೆ ಸಂಚುಕೋರ ರಾಕೇಶ್ ಶೆಟ್ಟಿಯನ್ನು ತಕ್ಷಣವೇ ಬಂಧಿಸಿ’ ಎಂದು ಒತ್ತಾಯಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪೊಲೀಸ್ ಮಹಾನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.ಶನಿವಾರ ಮಧ್ಯಾಹ್ನ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರನ್ನು ಭೇಟಿ ಮಾಡಲು ಕುಮಾರಸ್ವಾಮಿ ಕಚೇರಿಯ ಬಳಿ ಬಂದರ
ಬೆಂಗಳೂರು: ‘ಸ್ಟಿಂಗ್ ಕಾರ್ಯಾಚರಣೆ ಸಂಚುಕೋರ ರಾಕೇಶ್ ಶೆಟ್ಟಿಯನ್ನು ತಕ್ಷಣವೇ ಬಂಧಿಸಿ’ ಎಂದು ಒತ್ತಾಯಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪೊಲೀಸ್ ಮಹಾನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.ಶನಿವಾರ ಮಧ್ಯಾಹ್ನ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರನ್ನು ಭೇಟಿ ಮಾಡಲು ಕುಮಾರಸ್ವಾಮಿ ಕಚೇರಿಯ ಬಳಿ ಬಂದರು. ಇದೇ ವೇಳೆ ಕಚೇರಿಯ ಎದುರು ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜೆಡಿಎಸ್ ಕಾರ್ಯಕರ್ತರು, ‘ರಾಕೇಶ್ ಶೆಟ್ಟಿಯನ್ನು ತಕ್ಷಣವೇ ಬಂಧಿಸಬೇಕು’ ಎಂದು ಒತ್ತಾಯಿಸಿ ಪ್ರತಿಭಟನೆಗೆ ಮುಂದಾದರು. ಕುಮಾರಸ್ವಾಮಿ ಸಹ ಅವರಿಗೆ ಜತೆಯಾದರು.ಪ್ರತಿಭಟನೆ ತೀವ್ರವಾಗುತ್ತಿದ್ದಂತೆಯೇ ಪೊಲೀಸರು ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಬಳಿ ಬ್ಯಾರಿಕೇಡ್ಗಳನ್ನು ಹಾಕಿ, ಪ್ರತಿಭಟನಕಾರರು ಕಚೇರಿಯ ಆವರಣ ಪ್ರವೇಶಿಸುವುದನ್ನು ತಡೆದರು. ಈ ಮಧ್ಯೆ ಕುಮಾರಸ್ವಾಮಿ ಅವರು ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ದಾರೆ.‘ಸ್ಟಿಂಗ್ ಕಾರ್ಯಾಚರಣೆ ಸಂಚುಕೋರ ರಾಕೇಶ್ ಶೆಟ್ಟಿಯನ್ನು ತಕ್ಷಣವೇ ಬಂಧಿಸಿ’ ಎಂದು ಒತ್ತಾಯಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪೊಲೀಸ್ ಮಹಾನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.#JDS #siddaramaiah #DKShivakumar #Politics #Congress #BJP pic.twitter.com/8pWMcf6ceL— Prajavani (@prajavani) October 17, 2026