ಸೋಲಾರ್ ಅಳವಡಿಸಿ ಸ್ವಾಲಂಬಿಗಳಾಗಿ: ಮೆಸ್ಕಾಂ ಎಂಜಿನಿಯರ್ ಚಂದ್ರಪ್ಪ
ಹೊಳೆಹೊನ್ನೂರು: ‘ಸೋಲಾರ್ ಅಳವಡಿಸಿಕೊಳ್ಳುವುದರಿಂದ ರೈತರು ಸ್ವಾವಲಂಬಿಗಳಾಬಹುದು’ ಎಂದು ಪಟ್ಟಣದ ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಪ್ಪ ತಿಳಿಸಿದರು.ಪಟ್ಟಣದಲ್ಲಿ ಮೆಸ್ಕಾಂ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.ಯೋಜನೆಗೆ ಸರ್ಕಾರದಿಂದ ಸಬ್ಸಿಡಿ ಹಾಗೂ ಸಾಲ ದೊರೆಯುತ್ತದೆ. ಕೇ

ಹೊಳೆಹೊನ್ನೂರು: ‘ಸೋಲಾರ್ ಅಳವಡಿಸಿಕೊಳ್ಳುವುದರಿಂದ ರೈತರು ಸ್ವಾವಲಂಬಿಗಳಾಬಹುದು’ ಎಂದು ಪಟ್ಟಣದ ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಪ್ಪ ತಿಳಿಸಿದರು.ಪಟ್ಟಣದಲ್ಲಿ ಮೆಸ್ಕಾಂ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.ಯೋಜನೆಗೆ ಸರ್ಕಾರದಿಂದ ಸಬ್ಸಿಡಿ ಹಾಗೂ ಸಾಲ ದೊರೆಯುತ್ತದೆ. ಕೇಂದ್ರ ಸರ್ಕಾರವು ಮುಂದಿನ ಮಾರ್ಚ್ ವೇಳೆಗೆ 1 ಕೋಟಿ ಮನೆಗಳಿಗೆ ಈ ಯೋಜನೆಯನ್ನು ತಲುಪಿಸುವ ಗುರಿ ಹೊಂದಿದೆ. ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಿದರೆ ವಿದ್ಯುತ್ ಕಂಪನಿಯು ಯೂನಿಟ್ಗೆ ₹2.75 ದರದಲ್ಲಿ ಖರೀದಿಸುತ್ತದೆ ಎಂದು ಹೇಳಿದರು.ಎಲ್ಲ ದರಗಳು ಏರುತ್ತಲೇ ಇರುವುದರಿಂದ ಸೌರಶಕ್ತಿಯನ್ನು ಉಪಯೋಗಿಸಿಕೊಂಡು ವಿದ್ಯುತ್ ತಯಾರಿಸಿ, ರೈತರೇ ಸರ್ಕಾರಕ್ಕೆ ಅದನ್ನು ಮಾರಾಟ ಮಾಡಬಹುದು ಎಂದರು.ಯೂನಿಯನ್ ಬ್ಯಾಂಕ್ ಮ್ಯಾನೇಜರ್ ವಿಕಾಸ್ ಗುಪ್ತ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಾನಸಾ ಸೇರಿದಂತೆ ಇನ್ನಿತರರು ಹಾಜರಿದ್ದರು.261016-42-459178675
Read the complete story at Prajavani