ಮೈಸೂರು ದಸರಾ | ಬಾನಂಗಳದಲ್ಲಿ 3,500 ಡ್ರೋನ್ಗಳ ಆಕರ್ಷಕ ಪ್ರದರ್ಶನ
ಮೈಸೂರು: ದಸರಾ (Mysuru Dasara) ಅಂಗವಾಗಿ ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅತ್ಯಾಕರ್ಷಕ ಡ್ರೋನ್ ಪ್ರದರ್ಶನ (Drone Show) ನಡೆಯಿತು. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಆಧುನಿಕ ತಂತ್ರಜ್ಞಾನದ ಸಂಗಮಕ್ಕೆ ಸಾಕ್ಷಿಯಾಯಿತು. ಬಾನಂಗಳಕ್ಕೆ ಏಕ ಕಾಲಕ್ಕೆ 3,500 ಡ್ರೋನ್ಗಳು ಹಾರಾಡಿ ಬಣ್ಣಬಣ್ಣದ ಎಲ್ಇಡಿ ದೀಪಗಳ ಬೆಳಕಿನಿಂದ 12 ವಿಭಿನ್ನ ವಿನ್ಯಾಸಗ

ಮೈಸೂರು: ದಸರಾ (Mysuru Dasara) ಅಂಗವಾಗಿ ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅತ್ಯಾಕರ್ಷಕ ಡ್ರೋನ್ ಪ್ರದರ್ಶನ (Drone Show) ನಡೆಯಿತು. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಆಧುನಿಕ ತಂತ್ರಜ್ಞಾನದ ಸಂಗಮಕ್ಕೆ ಸಾಕ್ಷಿಯಾಯಿತು. ಬಾನಂಗಳಕ್ಕೆ ಏಕ ಕಾಲಕ್ಕೆ 3,500 ಡ್ರೋನ್ಗಳು ಹಾರಾಡಿ ಬಣ್ಣಬಣ್ಣದ ಎಲ್ಇಡಿ ದೀಪಗಳ ಬೆಳಕಿನಿಂದ 12 ವಿಭಿನ್ನ ವಿನ್ಯಾಸಗಳ ಚಿತ್ತಾರಗಳನ್ನು ಆಗಸದಲ್ಲಿ ಬಿಡಿಸಿದವು. ಇದು ಇಡೀ ಮೈದಾನದಲ್ಲಿ ನೆರೆದಿದ್ದ ಅಸಂಖ್ಯಾತ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಇದನ್ನೂ ಓದಿ: ಈ ಬಾರಿ ಅಂಬಾರಿ ಹೊರಲಿದ್ದಾನೆ ಪ್ರಶಾಂತ ಈ ಬಾರಿಯ ಪ್ರದರ್ಶನದಲ್ಲಿ ಗ್ಯಾಲಕ್ಸಿ, ದೇಶದ ಹೆಮ್ಮೆಯ ಸೈನಿಕ, ಆಕರ್ಷಕ ಚಿಟ್ಟೆ, ರಾಷ್ಟ್ರೀಯ ಪಕ್ಷಿ ನವಿಲು ಹಾಗೂ ಕಾಡಿನ ರಾಜ ಸಿಂಹದ ವಿನ್ಯಾಸಗಳು ಗಮನ ಸೆಳೆದವು. ಅದರಲ್ಲೂ ರಾಷ್ಟ್ರೀಯ ಪಕ್ಷಿ ನವಿಲಿನ ವಿನ್ಯಾಸದ ಮೂಲಕ ಮತ್ತೊಂದು ಗಿನ್ನಿಸ್ ದಾಖಲೆ ನಿರ್ಮಿಸುವ ಸೆಸ್ಕ್ನ ಪ್ರಯತ್ನ ವಿಶೇಷ ಕುತೂಹಲ ಮೂಡಿಸಿತು. ಇದನ್ನೂ ಓದಿ: ದಸರಾ ಮಹೋತ್ಸವದಲ್ಲಿ ವಿಂಟೇಜ್ ಕಾರುಗಳ ವೈಭವ
Read the complete story at Public TV Kannada