137 ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ – ನ.9 ರಿಂದಲೇ ಪರಿಷ್ಕೃತ ದರ ಜಾರಿ
ನವದೆಹಲಿ: ಕೇಂದ್ರ ಸರ್ಕಾರ ಕ್ಯಾನ್ಸರ್ ರೋಗಿಗಳಿಗೆ ಗುಡ್ನ್ಯೂಸ್ ಕೊಟ್ಟಿದೆ. 137 ಬಗೆಯ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ನ.9 ರಿಂದಲೇ ಪರಿಷ್ಕೃತ ಬೆಲೆ ಜಾರಿಯಾಗಲಿದೆ. ಕ್ಯಾನ್ಸರ್ ಔಷಧಿಗಳ ದುಬಾರಿ ಬೆಲೆಗೆ ಸುಪ್ರೀಂ ಕೋರ್ಟ್ ಕೂಡ ಗರಂ ಆಗಿತ್ತು. ಇದಾದ ಬಳಿಕ ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರ ಔಷಧಿಗಳ ಮೇಲಿನ ವ್ಯಾಪಾರ ಲಾಭದ

ನವದೆಹಲಿ: ಕೇಂದ್ರ ಸರ್ಕಾರ ಕ್ಯಾನ್ಸರ್ ರೋಗಿಗಳಿಗೆ ಗುಡ್ನ್ಯೂಸ್ ಕೊಟ್ಟಿದೆ. 137 ಬಗೆಯ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ನ.9 ರಿಂದಲೇ ಪರಿಷ್ಕೃತ ಬೆಲೆ ಜಾರಿಯಾಗಲಿದೆ. ಕ್ಯಾನ್ಸರ್ ಔಷಧಿಗಳ ದುಬಾರಿ ಬೆಲೆಗೆ ಸುಪ್ರೀಂ ಕೋರ್ಟ್ ಕೂಡ ಗರಂ ಆಗಿತ್ತು. ಇದಾದ ಬಳಿಕ ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರ ಔಷಧಿಗಳ ಮೇಲಿನ ವ್ಯಾಪಾರ ಲಾಭದ ಮಿತಿಯನ್ನು 30%ಗೆ ನಿಗದಿಪಡಿಸಿತ್ತು. ಇದರಿಂದ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ 70% ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದಿಂದ ಗುಡ್ನ್ಯೂಸ್; ಔಷಧಗಳ ದರ ಶೇ. 30ಕ್ಕೆ ಮಿತಿ ಸರ್ಕಾರದ್ ಈ ನಿರ್ಧಾರದಿಂದ ದುಬಾರಿ ಕ್ಯಾನ್ಸರ್ ಚಿಕಿತ್ಸೆಯಿಂದ ತೊಂದರೆ ಅನುಭವಿಸುತ್ತಿರುವ ರೋಗಿಗಳಿಗೆ ಪರಿಹಾರ ದೊರೆಯಲಿದೆ. ಇಮ್ಯುನೋಥೆರಪಿ ಸೇರಿದಂತೆ ಪೆಂಬ್ರೊಲಿಜುಮಾಬ್, ದುರ್ವಾಲುಮಾಬ್ ಮತ್ತು ಓಸಿಮರ್ಟಿನಿಬ್ ಔಷಧಿಗಳು ಅಗ್ಗವಾಗುವ ನಿರೀಕ್ಷೆಯಿದೆ. ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಅಂಡಾಶಯ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ಯಾನ್ಸರ್ಗಳ ಚಿಕಿತ್ಸೆಗೆ ಬಳಸುವ ಔಷಧಿಗಳ ಬೆಲೆ ಇಳಿಕೆಯಾಗಲಿದೆ. ಔಷಧ ತಯಾರಕರು ಪರಿಷ್ಕೃತ ಬೆಲೆ ಪಟ್ಟಿಯನ್ನು ಪ್ರಕಟಿಸಬೇಕಿದೆ. ಅಲ್ಲದೇ ಪರಿಷ್ಕೃತ ಬೆಲೆಗಳನ್ನು ಔಷಧ ಅಂಗಡಿಗಳಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಔಷಧದ ಅಂಗಡಿಗಳು ಮತ್ತು ಆಸ್ಪತ್ರೆಗಳು ನವೆಂಬರ್ 9ರಿಂದ ಕಡಿತಗೊಂಡ ಬೆಲೆಯಲ್ಲೇ ಔಷಧ ಮಾರಾಟ ಮಾಡಬೇಕಿದೆ. ಔಷಧಿಗಳ ಬೆಲೆ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ರಾಜ್ಯ ಔಷಧ ನಿಯಂತ್ರಣ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಔಷಧಗಳ ಬೆಲೆ 70% ಇಳಿಕೆ ಸಾಧ್ಯತೆ; ಸರ್ಕಾರದ ಮುಂದಿದೆ ಹೊಸ ಪ್ರಸ್ತಾವನೆ!