ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆಯಿಂದ ವಿಶೇಷ ರೈಲು
ಮಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಚೆನ್ನೈ ಎಗ್ಮೋರ್ನಿಂದ ಮಂಗಳೂರು ಸೆಂಟ್ರಲ್ಗೆ ಹಾಗೂ ಮಂಗಳೂರು ಸೆಂಟ್ರಲ್ನಿಂದ ರಾಮೇಶ್ವರಂಗೆ ಏಕಮುಖ ಎಕ್ಸ್ಪ್ರೆಸ್ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ನಿರ್ಧರಿಸಿದೆ.ರೈಲು ಸಂಖ್ಯೆ 06036: ಚೆನ್ನೈ ಎಗ್ಮೋರ್ – ಮಂಗಳೂರು ಸೆಂಟ್ರಲ್ ಏಕಮುಖ ಎಕ್ಸ್ಪ್ರೆಸ್ ವಿಶೇಷ ರೈಲು ಅ.18ರಂದು ಸಂಜೆ 7.45
ಮಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಚೆನ್ನೈ ಎಗ್ಮೋರ್ನಿಂದ ಮಂಗಳೂರು ಸೆಂಟ್ರಲ್ಗೆ ಹಾಗೂ ಮಂಗಳೂರು ಸೆಂಟ್ರಲ್ನಿಂದ ರಾಮೇಶ್ವರಂಗೆ ಏಕಮುಖ ಎಕ್ಸ್ಪ್ರೆಸ್ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ನಿರ್ಧರಿಸಿದೆ.ರೈಲು ಸಂಖ್ಯೆ 06036: ಚೆನ್ನೈ ಎಗ್ಮೋರ್ – ಮಂಗಳೂರು ಸೆಂಟ್ರಲ್ ಏಕಮುಖ ಎಕ್ಸ್ಪ್ರೆಸ್ ವಿಶೇಷ ರೈಲು ಅ.18ರಂದು ಸಂಜೆ 7.45ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.ರೈಲು ಸಂಖ್ಯೆ 06142 ಮಂಗಳೂರು ಸೆಂಟ್ರಲ್ – ರಾಮೇಶ್ವರಂ ಎಕ್ಸ್ಪ್ರೆಸ್ ವಿಶೇಷ ರೈಲು ಅ.19ರಂದು ಬೆಳಿಗ್ಗೆ 4.15ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಟು, ಸಂಜೆ 07.30ಕ್ಕೆ ರಾಮೇಶ್ವರಂ ತಲುಪಲಿದೆ.ಈ ರೈಲು ಕಾಸರಗೋಡು, ಕಾಞಂಗಾಡ್, ಪಯ್ಯನ್ನೂರು, ಕಣ್ಣೂರು, ತಲಶ್ಶೇರಿ, ವಡಕರ, ಕೋಯಿಕ್ಕೋಡ್, ತಿರೂರು, ಶೋರನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಪಾಲಕ್ಕಾಡ್ ಟೌನ್, ಕೊಲ್ಲಂಗೋಡ್, ಪೊಲ್ಲಾಚಿ ಜಂಕ್ಷನ್, ಉದುಮಲೈಪೇಟೈ, ಪಳನಿ, ಒಟ್ಟಂಚತ್ರಂ, ದಿಂಡಿಗಲ್ ಜಂಕ್ಷನ್, ಮಧುರೈ ಜಂಕ್ಷನ್, ಮನಮಧುರೈ ಜಂಕ್ಷನ್, ಪರಮಕುಡಿ ಮತ್ತು ರಾಮನಾಥಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.ಈ ಎರಡೂ ವಿಶೇಷ ರೈಲುಗಳು 21 ಬೋಗಿಗಳನ್ನು ಹೊಂದಿರಲಿವೆ. ಇವುಗಳಲ್ಲಿ ಪ್ರಥಮ ದರ್ಜೆ ಎ.ಸಿ, ಎ.ಸಿ ಟು ಟೈರ್, ಎ.ಸಿ ತ್ರಿ ಟೈರ್, ಸ್ಲೀಪರ್ ಕ್ಲಾಸ್, ಸಾಮಾನ್ಯ ದರ್ಜೆ ಬೋಗಿಗಳು, ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.