ರಿಮ್ಸ್ನಲ್ಲಿ ಔಷಧ ಸಂಕಷ್ಟ: ತಪ್ಪದ ಅಲೆದಾಟ
ರಾಯಚೂರು: ಇಲ್ಲಿನ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಔಷಧ ಹೊರಗಡೆ ಬರೆದುಕೊಡುತ್ತಿದ್ದು, ಪರದಾಡಬೇಕಾದ ಪರಿಸ್ಥಿತಿ ಇದೆ ಎಂದು ರೋಗಿಗಳು ಮತ್ತು ಅವರ ಸಂಬಂಧಿಕರು ಆರೋಪಿಸುತ್ತಾರೆ.ಜಿಲ್ಲೆ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ಬಡ ಕುಟುಂಬಗಳಿಗೆ ರಿಮ್ಸ್ ಆಸ್ಪತ್ರೆಯೇ ಆಸರೆ. ಆರೋಗ್ಯ ತೊಂದರೆ ಎದುರಾದರೆ ಸಾವಿರಾರು ರೂಪಾಯಿ ಖರ್ಚು ಮಾಡಿ ಖಾಸಗಿ ಆಸ್ಪತ್ರೆಗೆ

ರಾಯಚೂರು: ಇಲ್ಲಿನ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಔಷಧ ಹೊರಗಡೆ ಬರೆದುಕೊಡುತ್ತಿದ್ದು, ಪರದಾಡಬೇಕಾದ ಪರಿಸ್ಥಿತಿ ಇದೆ ಎಂದು ರೋಗಿಗಳು ಮತ್ತು ಅವರ ಸಂಬಂಧಿಕರು ಆರೋಪಿಸುತ್ತಾರೆ.ಜಿಲ್ಲೆ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ಬಡ ಕುಟುಂಬಗಳಿಗೆ ರಿಮ್ಸ್ ಆಸ್ಪತ್ರೆಯೇ ಆಸರೆ. ಆರೋಗ್ಯ ತೊಂದರೆ ಎದುರಾದರೆ ಸಾವಿರಾರು ರೂಪಾಯಿ ಖರ್ಚು ಮಾಡಿ ಖಾಸಗಿ ಆಸ್ಪತ್ರೆಗೆ ಹೋಗುವ ಬದಲು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತದೆ ಎನ್ನುವ ನಂಬಿಕೆಯಿಂದ ಇಲ್ಲಿಗೆ ಬರುತ್ತಾರೆ.ಆದರೆ, ಆಸ್ಪತ್ರೆಗೆ ಬಂದ ಮೇಲೆ ಔಷಧಕ್ಕೆ ಹೊರಗಿನ ಮೆಡಿಕಲ್ ಶಾಪ್ಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ರೋಗಿಗಳಿಗೆ ಬೇಕಾದ ಔಷಧ, ಚಿಕಿತ್ಸೆ ನೀಡಲು ಅಗತ್ಯವಾದ ಸೌಲಭ್ಯಗಳೂ ಇಲ್ಲ ಎಂಬುದು ಸಾರ್ವಜನಿಕರ ದೂರು.ಸಾಮಾನ್ಯವಾಗಿ ಕೆಮ್ಮು, ನೆಗಡಿ, ಜ್ವರ ಬಂದರೆ ಬಡವರು ಮೊದಲು ಸರ್ಕಾರಿ ಆಸ್ಪತ್ರೆಗೆ ಹೋಗುತ್ತಾರೆ. ಅಲ್ಲಿ ವೈದ್ಯರು ಪರೀಕ್ಷಿಸಿ ಔಷಧ ಬರೆದುಕೊಡುತ್ತಾರೆ. ಆದರೆ, ಆ ಔಷಧ ಪಡೆಯಲು ಔಷಧ ವಿತರಣಾ ಕೌಂಟರ್ಗೆ ಹೋದರೆ, ‘ಔಷಧ ದಾಸ್ತಾನು ಇಲ್ಲ’ ಅನ್ನೋ ಉತ್ತರ ಸಿಗುತ್ತದೆ ಎನ್ನುವುದು ರೋಗಿಗಳ ಅಳಲು.ವೈದ್ಯರು ಹತ್ತು ಔಷಧ ಬರೆದುಕೊಟ್ಟರೆ ಅದರಲ್ಲಿ ಒಂದೆರಡು ಮಾತ್ರ ಆಸ್ಪತ್ರೆಯಲ್ಲಿ ಸಿಗುತ್ತವೆ. ಉಳಿದ ಔಷಧಗಳನ್ನು ಹೊರಗಡೆಯಿಂದ ಖರೀದಿಸಿಕೊಂಡು ಬನ್ನಿ ಅನ್ನು ತ್ತಾರೆ ಔಷಧ ವಿತರಕರು. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ತಪಾಸಣೆ ಮತ್ತು ಸಲಹೆ ಸಿಕ್ಕರೂ, ಔಷಧ ಖರೀದಿಸಲು ಮಾತ್ರ ಜೇಬಿನಿಂದ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ರಿಮ್ಸ್ ಆಸ್ಪತ್ರೆಯಲ್ಲಿದೆ ಎಂಬ ದೂರು ಇದೆ.ರೋಗಿಗಳಿಗೆ ಔಷಧದ ಖರ್ಚು ಹೊರೆಯಾಗುತ್ತಿದೆ. ಕೆಲವರಿಗೆ ನೂರು, ಇನ್ನೂ ಕೆಲವರಿಗೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಹೀಗಾದರೆ ಸರ್ಕಾರಿ ಆಸ್ಪತ್ರೆ ಯಾಕೆ ಬೇಕು ಎಂದು ಪ್ರಶ್ನಿಸುತ್ತಾರೆ ರೋಗಿಗಳು.ರಾತ್ರಿ ವೇಳೆಯಲ್ಲಿ ಔಷಧ ಲಭ್ಯವಿಲ್ಲದೆ ತುರ್ತು ಪರಿಸ್ಥಿತಿಯಲ್ಲಿ ಔಷಧ ಇಲ್ಲ ಎಂಬ ಉತ್ತರ ರೋಗಿಗಳನ್ನು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿಸುತ್ತದೆ. ತಡರಾತ್ರಿ ಖಾಸಗಿ ಔಷಧ ಮಳಿಗೆಗಳೂ ತೆರೆದಿರುವುದಿಲ್ಲ. ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಇದ್ದರೂ ಪ್ರಯೋಜನವಿಲ್ಲದ ಸ್ಥಿತಿ ಇದೆ.ಹೆರಿಗೆ, ಶಸ್ತ್ರಚಿಕಿತ್ಸೆ ರೋಗಿಗಳು ಕಡ್ಡಾಯವಾಗಿ ಖಾಸಗಿ ಮಳಿಗೆಗಳಿಂದ ಔಷಧ ಖರೀದಿಸಿ ಕೊಡಬೇಕು. ತಜ್ಞ ವೈದ್ಯರು ಇದ್ದರೂ ಅವರಿಗೆ ಸೂಕ್ತ ಸೌಲಭ್ಯ ಒದಗಿಸದ ಕಾರಣ ರೋಗಿಗಳಿಗೆ ಅನುಕೂಲವಾಗುತ್ತಿಲ್ಲ ಎಂಬ ದೂರು ಇದೆ.ರಿಮ್ಸ್ನಲ್ಲಿ ಔಷಧ ಕೊರತೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಯಾವ ಔಷಧಗಳು ಹೆಚ್ಚು ಬಳಕೆಯಾಗುತ್ತವೆ. ಯಾವ ಔಷಧಗಳ ದಾಸ್ತಾನು ಕಡಿಮೆಯಾಗಿದೆ. ಅಗತ್ಯ ಔಷಧಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.ಯಾರು ಏನೆಂದರು?ದೇವರಾಜ, ರೋಗಿಯ ಸಂಬಂಧಿರಂಗಮ್ಮ, ರೋಗಿಯ ಸಂಬಂಧಿರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿದಿನ ಹೆಚ್ಚಿನ ಪ್ರಮಾಣದ ಔಷಧ ಖಾಲಿಯಾಗುತ್ತದೆ. ಔಷಧ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಸೂರ್ಯಕಾಂತ ಮಂದೊಳ್ಕರ್, ವೈದ್ಯಕೀಯ ಅಧೀಕ್ಷಕ ಬಡವರು ಸಾಲ ಮಾಡಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಪರಿಸ್ಥಿತಿ ತಪ್ಪಬೇಕು. ವೈದ್ಯರು ಬರೆದುಕೊಟ್ಟ ಔಷಧ ಆಸ್ಪತ್ರೆಯಲ್ಲೇ ಸಿಗುವಂತಾಗಬೇಕು ವಿನೋದಕುಮಾರ, ಸಾಮಾಜಿಕ ಕಾರ್ಯಕರ್ತವೈದ್ಯರು, ಸಿಬ್ಬಂದಿ ಇದ್ದರೂ ಔಷಧ ಇಲ್ಲದ ಕಾರಣ ರೋಗಿಗಳು ಸಾಲ ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಿದೆ. ಇದು ಬಡ ಜನರಿಗೆ ಹೊರೆಯಾಗಿ ಪರಿಣಮಿಸಿದೆ.ನಾಗರಾಜ ನಾಯಕ, ಸಾಮಾಜಿಕ ಕಾರ್ಯಕರ್ತಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗದವರ ಪಾಲಿಗೆ ಸರ್ಕಾರಿ ಆಸ್ಪತ್ರೆ ಸಂಜೀವಿನಿ ಇದ್ದಂತೆ. ಕೆಲವರ ಬೇಜವಾಬ್ದಾರಿಯಿಂದ ಅಗತ್ಯ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುವಂತಾಗಿದೆ. ದೇವರಾಜ, ರೋಗಿಯ ಸಂಬಂಧಿಸರ್ಕಾರಿ ಆಸ್ಪತ್ರೆಗಳಿಗೆ ಬಹುತೇಕ ಬಡ ಮತ್ತು ಮಧ್ಯಮ ವರ್ಗದವರು ಬರುತ್ತಾರೆ. ಔಷಧ ಕೊರತೆಯಿಂದ ಗುಣಮಟ್ಟದ ಚಿಕಿತ್ಸೆ ಸಿಗದೆ ತೊಂದರೆ ಅನುಭವಿಸುತ್ತಾರೆ.261017-32-2076898188