ಕಬ್ಬು ಬೆಳೆಗಾರರಿಗೆ ಅನ್ಯಾಯ: ಕಾಂಗ್ರೆಸ್ ಸರ್ಕಾರ ಕಾರಣ; ಪ್ರಲ್ಹಾದ ಜೋಶಿ ಆರೋಪ
ಗದಗ: ‘ಮಹಾರಾಷ್ಟ್ರದಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳಿದ್ದರೂ ಅಲ್ಲಿನ ರೈತರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಬೇರೆ ರಾಜ್ಯಗಳಲ್ಲೂ ಸಮಸ್ಯೆ ಇಲ್ಲ. ಕರ್ನಾಟಕದಲ್ಲಷ್ಟೇ ಸಮಸ್ಯೆ ಆಗುತ್ತಿರುವುದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಥೆನಾಲ್ ತಯಾರಿಕೆ ಆರಂಭವಾ

ಗದಗ: ‘ಮಹಾರಾಷ್ಟ್ರದಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳಿದ್ದರೂ ಅಲ್ಲಿನ ರೈತರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಬೇರೆ ರಾಜ್ಯಗಳಲ್ಲೂ ಸಮಸ್ಯೆ ಇಲ್ಲ. ಕರ್ನಾಟಕದಲ್ಲಷ್ಟೇ ಸಮಸ್ಯೆ ಆಗುತ್ತಿರುವುದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಥೆನಾಲ್ ತಯಾರಿಕೆ ಆರಂಭವಾದ ನಂತರ ರೈತರಿಗೆ ನಿರಂತರವಾಗಿ ಬಿಲ್ ಪಾವತಿ ಆಗುತ್ತಿದೆ. ಹೆಚ್ಚು ಪ್ರಮಾಣದಲ್ಲಿ ಎಥಿನಾಲ್ ಖರೀದಿಸಲಾಗುತ್ತಿದೆ. ಆದರೆ, ಉಳಿದ ರಾಜ್ಯಗಳಂತೆ ಕರ್ನಾಟಕದಲ್ಲಿ ಎಸ್ಎಪಿ (ಸ್ಟೇಟ್ ಅಡ್ವೈಸ್ಡ್ ಪ್ರೈಸ್) ಕೊಡುತ್ತಿಲ್ಲ. ತೂಕದಲ್ಲಿನ ಮೋಸ ತಡೆಯಲಾಗುತ್ತಿಲ್ಲ. ಕೇಂದ್ರ ನೀಡಿದ್ದನ್ನು ಕಬ್ಬು ಬೆಳೆಗಾರರಿಗೆ ಸರಿಯಾಗಿ ವರ್ಗಾವಣೆ ಮಾಡುತ್ತಿಲ್ಲ’ ಎಂದು ಆರೋಪಿಸಿದರು.‘ಸೂಕ್ತ ದಿನಾಂಕ ನಿಗದಿ ಮಾಡಿ, ರೈತರೊಂದಿಗೆ ಸಭೆ ನಡೆಸಲು ರಾಜ್ಯ ಸರ್ಕಾರಕ್ಕೆ ತಿಳಿಸುವಂತೆ ಇಲ್ಲಿನ ಅಧಿಕಾರಿಗಳಿಗೆ ಹೇಳಿದ್ದೇವೆ. ಬೆಂಬಲ ಬೆಲೆ ಸೇರಿದಂತೆ ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಸಹಾನುಭೂತಿಯಿಂದ ಪರಿಶೀಲನೆ ಮಾಡಲು ಕೇಂದ್ರ ಸಮಿತಿ ಹಾಗೂ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ರೈತರು ಪ್ರತಿಭಟನೆ ನಡೆಸುತ್ತಿರುವ ಕುರಿತು ಯಾವುದೇ ನಕಾರಾತ್ಮಕ ಭಾವನೆ ನಮ್ಮಲ್ಲಿ ಇಲ್ಲ’ ಎಂದು ಸ್ಪಷ್ಟಪಡಿಸಿದರು.‘ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಇಡೀ ಕಾಂಗ್ರೆಸ್ ನಡವಳಿಕೆಗಳು ಜನರಿಗೆ ವಾಕರಿಕೆ ತರಿಸುತ್ತಿವೆ. ಭೀಕರ ಬರಗಾಲವಿದ್ದರೂ, ಸಮರ್ಪಕವಾಗಿ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಕಲ್ಪಿಸಿಲ್ಲ. ವಿದ್ಯುತ್ ಉತ್ಪಾದನೆಯಲ್ಲಿ ಕೊರತೆ ಇಲ್ಲದಿದ್ದರೂ, ಅದನ್ನು ಖರೀಸಲು ಕ್ರಮ ವಹಿಸುತ್ತಿಲ್ಲ’ ಎಂದು ಟೀಕಿಸಿದರು.‘ಹಾಲು, ಸಾರಿಗೆ, ಡೀಸೆಲ್, ಜನನ ಹಾಗೂ ಮರಣ ನೋಂದಣಿ ಶುಲ್ಕ ಏರಿಕೆ ಮಾಡಲಾಗಿದ್ದು, ಒಂದು ಬಾರಿ ಬರ ಪರಿಹಾರವಾಗಿ ರೈತ ಕುಟುಂಬಕ್ಕೆ ₹2,000 ಮಾತ್ರ ನೀಡಲಾಗಿದೆ. ಹಾಲು–ಮದ್ಯದ ದರ ಏರಿಕೆ ಲೆಕ್ಕ ಹಾಕಿದರೂ ಒಬ್ಬರಿಂದ ₹5,000 ವಸೂಲಿ ಮಾಡಲಾಗುತ್ತಿದೆ. ಅಭಿವೃದ್ಧಿ ಪಥದಲ್ಲಿದ್ದ ಕರ್ನಾಟಕವನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ಸಿ.ಸಿ. ಪಾಟೀಲ, ಬಿಜೆಪಿ ಜಿಲ್ಲಾ ಗಟಕದ ಅಧ್ಯಕ್ಷ ರಾಜು ಕುರಡಗಿ, ಮುಖಂಡರಾದ ರವಿ ದಂಡಿನ, ಉಷಾ ದಾಸರ, ಎಂ.ಎಸ್. ಕರಿಗೌಡರ, ಜಯತೀರ್ಥ ಕಟ್ಟಿ, ಎಂ.ಎಂ. ಹಿರೇಮಠ ಇದ್ದರು.ನಕಲಿ ಮತದಾರರ ರದ್ದು; ಕಾಂಗ್ರೆಸ್ಗೆ ಬೇಕಿಲ್ಲ: ಬೊಮ್ಮಾಯಿ‘ಭಾರತದಲ್ಲಿದ್ದ ಜಡತ್ವ ತೊಲಗಿ, ದೇಶ ಹಾಗೂ ನಾಯಕತ್ವದ ಮೇಲೆ ಹೊಸ ಭರವಸೆ ಮೂಡಿದೆ. ಇದನ್ನು ಕೆಡಿಸಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ಅಭಿವೃದ್ಧಿ ಬಗ್ಗೆ ಮಾತನಾಡಲಾಗದೆ, ಮತಯಂತ್ರದ ಬಗ್ಗೆ ವಿರೋಧ ವ್ಯಕ್ತಪಡಿಸಿತ್ತು. ಈಗ ಎಸ್ಐಆರ್ ಅನ್ನು ಟೀಕಿಸುತ್ತಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.ಪಶ್ಚಿಮ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರವಾಗಿ ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಸತ್ತವರ ಹೆಸರು, ಎರಡ್ಮೂರು ಕ್ಷೇತ್ರಗಳಲ್ಲಿ ಒಬ್ಬರದೇ ಹೆಸರು, ನಕಲಿ ಮತದಾರರ ಹೆಸರನ್ನು ಪಟ್ಟಿಯಲ್ಲಿ ರದ್ದುಮಾಡುವುದು ಕಾಂಗ್ರೆಸ್ನವರಿಗೆ ಬೇಕಿಲ್ಲ. ಬಡತನದ ಹೆಸರಿನಲ್ಲಿ ಮತ ಪಡೆಯಲು ಯತ್ನಿಸುತ್ತಿದ್ದು, ಅರಾಜಕತೆ ಉಂಟುಮಾಡುತ್ತಿದೆ’ ಎಂದು ಆರೋಪಿಸಿದರು.ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಕೆಪಿಎಸ್ಸಿ ಹಗರಣದಲ್ಲಿ ಕಾಂಗ್ರೆಸ್ ಪಾಲಿದೆ. ವಿದೇಶಿ ಮತದಾರರ ಬಳಸಿ ಚುನಾವಣೆಯಲ್ಲಿ ಗೆಲ್ಲುವ ಹುನ್ನಾರ ನಡೆಸುತ್ತಿದೆ. ವಿದೇಶಿಗರ ಬೆಂಬಲದಿಂದ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿರುವ ಕಾಂಗ್ರೆಸ್ ನಾಯಕನಿಗೆ ವಿದ್ಯಾವಂತರು ಸ್ಪಷ್ಟ ಸಂದೇಶ ನೀಡಬೇಕು’ ಎಂದರು.ಅಭ್ಯರ್ಥಿ ಎಸ್.ವಿ. ಸಂಕನೂರ, ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಮೊದಲಾದವರು ಇದ್ದರು.ಕಾಂಗ್ರೆಸ್ನಲ್ಲಿನ ಅಸಹನೀಯ ವಿದ್ಯಮಾನದಿಂದ ವಿಧಾನ ಪರಿಷತ್ನ ನಾಲ್ಕೂ ಸ್ಥಾನಗಳಲ್ಲಿ ಎನ್ಡಿಎ ಗೆಲ್ಲಲಿದೆ. ಎಸ್.ವಿ. ಸಂಕನೂರ ಅವರು ನಿರಾಯಾಸವಾಗಿ ಗೆದ್ದುಬರುವರು ಪ್ರಲ್ಹಾದ ಜೋಶಿ, ಕೇಂದ್ರ ಸಚಿವ261017-23-2013823661