ಯೂಟ್ಯೂಬರ್ ಧ್ರುವ ರಾಠಿ ವಿರುದ್ಧ ಜಾಮೀನು ಪಡೆಯಬಹುದಾದ ವಾರಂಟ್ ಜಾರಿ
ನವದೆಹಲಿ: 2018ರ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಧ್ರುವ ರಾಠಿ ವಿರುದ್ಧ ದೆಹಲಿಯ ನ್ಯಾಯಾಲಯವೊಂದು ಶನಿವಾರ ಜಾಮೀನು ಪಡೆಯಬಹುದಾದ ವಾರಂಟ್ ಜಾರಿಗೊಳಿಸಿದೆ. ಬಿಜೆಪಿ ಐ.ಟಿ ಸೆಲ್ ಸದಸ್ಯ ವಿಕಾಸ್ ಪಾಂಡೆ ಈ ಮೊಕದ್ದಮೆ ಹೂಡಿದ್ದರು. ಸಮನ್ಸ್ ನೀಡಲು ತೆರಳಿದಾಗ ರಾಠಿ ಅವರ ಮನೆಗೆ ಬೀಗ ಜಡಿಯಲಾಗಿತ್ತು ಎಂಬ ವರದಿಯ ಹಿನ್ನೆಲೆಯಲ್ಲಿ ನ್ಯಾಯಾಲಯ

ನವದೆಹಲಿ: 2018ರ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಧ್ರುವ ರಾಠಿ ವಿರುದ್ಧ ದೆಹಲಿಯ ನ್ಯಾಯಾಲಯವೊಂದು ಶನಿವಾರ ಜಾಮೀನು ಪಡೆಯಬಹುದಾದ ವಾರಂಟ್ ಜಾರಿಗೊಳಿಸಿದೆ. ಬಿಜೆಪಿ ಐ.ಟಿ ಸೆಲ್ ಸದಸ್ಯ ವಿಕಾಸ್ ಪಾಂಡೆ ಈ ಮೊಕದ್ದಮೆ ಹೂಡಿದ್ದರು. ಸಮನ್ಸ್ ನೀಡಲು ತೆರಳಿದಾಗ ರಾಠಿ ಅವರ ಮನೆಗೆ ಬೀಗ ಜಡಿಯಲಾಗಿತ್ತು ಎಂಬ ವರದಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಅಕ್ಟೋಬರ್ 31ಕ್ಕೆ ಮುಂದೂಡಿದೆ. ವಿವರವಾದ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.ದೂರುದಾರರು ಹಲವು ವರ್ಷಗಳಿಂದ ರಾಠಿ ಅವರಿಗೆ ಸಮನ್ಸ್ ನೀಡಲು ಪ್ರಯತ್ನಿಸುತ್ತಿದ್ದಾರೆ. ಈ ಸಂಬಂಧ ಹರಿಯಾಣದ ಗುರುಗ್ರಾಮದಲ್ಲಿರುವ ಅವರ ನಿವಾಸಕ್ಕೆ ಅಕ್ಟೋಬರ್ 12ರಂದು ಹೊಸ ಸಮನ್ಸ್ ಜಾರಿಗೊಳಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಪ್ರಕರಣ ಸಂಬಂಧ 2019ರ ಜುಲೈನಲ್ಲಿ ರಾಠಿ ಅವರಿಗೆ ಮೊದಲ ಬಾರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಧ್ರುವ ರಾಠಿ ಆಸ್ಟ್ರಿಯಾದಲ್ಲಿ ವಾಸಿಸುತ್ತಿದ್ದು, ದೆಹಲಿಯಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದರು ಎಂದು ದೂರುದಾರರ ಪರ ವಕೀಲ ಸಮಕ್ಷ್ ಶರ್ಮಾ ನ್ಯಾಯಾಲಯಕ್ಕೆ ತಿಳಿಸಿದರು.ಲಂಡನ್ನಲ್ಲಿ ‘ಮತ ಕಳ್ಳತನ’ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ ಧ್ರುವ ರಾಠಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ವಕೀಲರ ಭೇಟಿಗೆ ಅವಕಾಶ ನೀಡಿಲ್ಲ: ನೇಹಾ ಆರೋಪ