ಕಾರವಾರ: ಸಿಐಎಸ್ಎಫ್ ಯೋಧನ ಕುಟುಂಬಕ್ಕೆ ₹1 ಕೋಟಿ ಪರಿಹಾರ
ಕಾರವಾರ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ತಾಲ್ಲೂಕಿನ ಕೈಗಾದ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆಯ (ಸಿಐಎಸ್ಎಫ್) ಸಿಬ್ಬಂದಿ ಶೇಖರ್ ಬಿ.ಜಗದಾಳೆ ಅವರ ಕುಟುಂಬಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ನ (ಎಸ್ಬಿಐ) ವೇತನ ಪ್ಯಾಕೇಜ್ನಡಿ ₹1 ಕೋಟಿ ಅಪಘಾತ ವಿಮೆ ಪರಿಹಾರ ನೀಡಲಾಗಿದೆ.ಕೈಗಾ ಅಣು ವಿದ್ಯುತ್ ಸ್ಥಾವರದ ಎನ್ಪಿಸಿ ಘಟಕದಲ್ಲಿ ಕರ್

ಕಾರವಾರ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ತಾಲ್ಲೂಕಿನ ಕೈಗಾದ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆಯ (ಸಿಐಎಸ್ಎಫ್) ಸಿಬ್ಬಂದಿ ಶೇಖರ್ ಬಿ.ಜಗದಾಳೆ ಅವರ ಕುಟುಂಬಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ನ (ಎಸ್ಬಿಐ) ವೇತನ ಪ್ಯಾಕೇಜ್ನಡಿ ₹1 ಕೋಟಿ ಅಪಘಾತ ವಿಮೆ ಪರಿಹಾರ ನೀಡಲಾಗಿದೆ.ಕೈಗಾ ಅಣು ವಿದ್ಯುತ್ ಸ್ಥಾವರದ ಎನ್ಪಿಸಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶೇಖರ್ ಅವರು 2025ರ ನ.8ರಂದು ಮೃತಪಟ್ಟಿದ್ದರು. ಅವರು ಎಸ್ಬಿಐನ ಎನ್ಪಿಸಿ ಕೈಗಾ ಶಾಖೆಯ ಗ್ರಾಹಕರಾಗಿದ್ದು, ಸಿಐಎಸ್ಎಫ್ ಸಿಬ್ಬಂದಿಗಾಗಿ ರೂಪಿಸಿರುವ ಸಿಎಪಿಎಸ್ಪಿ ವೇತನ ಪ್ಯಾಕೇಜ್ನಡಿ ವಿಮಾ ಸೌಲಭ್ಯ ಹೊಂದಿದ್ದರು. ಈ ಪ್ಯಾಕೇಜ್ನಡಿ ಅವರ ಪತ್ನಿ ಅಂಜನಿ ಜಗದಾಳೆ ಅವರಿಗೆ ಅಪಘಾತ ವಿಮೆ ಪರಿಹಾರ ಪಾವತಿಸಲಾಗಿದೆ.‘ಇದೇ ವೇತನ ಪ್ಯಾಕೇಜ್ನಡಿ ಈ ಹಿಂದೆ ₹10 ಲಕ್ಷ ಮೊತ್ತದ ಟರ್ಮ್ ಲೈಫ್ ಇನ್ಶೂರೆನ್ಸ್ ಪರಿಹಾರವನ್ನೂ ಕುಟುಂಬಕ್ಕೆ ಪಾವತಿಸಲಾಗಿತ್ತು’ ಎಂದು ಎಸ್ಬಿಐ ಅಧಿಕಾರಿಗಳು ತಿಳಿಸಿದರು.ಕೈಗಾದ ಸಿಐಎಸ್ಎಫ್ ಘಟಕದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಮೆ ಪರಿಹಾರದ ಚೆಕ್ ಹಸ್ತಾಂತರಿಸಲಾಯಿತು. ಸಿಐಎಸ್ಎಫ್ ಪರವಾಗಿ ಹಿರಿಯ ಕಮಾಂಡೆಂಟ್ ಅಜಯ್ ಕುಮಾರ್ ಝಾ, ಉಪ ಕಮಾಂಡೆಂಟ್ ಬಿರೇಂದ್ರ ಕುಮಾರ್, ಸಹಾಯಕ ಕಮಾಂಡೆಂಟ್ ಮನೋಜ್ ಕುಮಾರ್, ಎಸ್ಬಿಐ ಹುಬ್ಬಳ್ಳಿಯ ಉಪ ಪ್ರಧಾನ ವ್ಯವಸ್ಥಾಪಕ ಮೊಣಿಕಂಡನ್ ರಾಮಕೃಷ್ಣನ್, ಕಾರವಾರ ಪ್ರಾದೇಶಿಕ ವ್ಯವಸ್ಥಾಪಕ ಮುರಳೀಧರ, ಕಾರವಾರದ ಮುಖ್ಯ ವ್ಯವಸ್ಥಾಪಕ ಗಣೇಶ್ ಎಲ್.ಭಟ್ ಹಾಗೂ ಎಸ್ಬಿಐ ಎನ್ಪಿಸಿಸಿ ಕೈಗಾ ಶಾಖೆಯ ವ್ಯವಸ್ಥಾಪಕ ಮನೀಶ್ ದುಮಾಡೆ ಪಾಲ್ಗೊಂಡಿದ್ದರು.261017-20-831714883