ವಯಸ್ಸಿನ ಆಧಾರದ ಮೇಲೆ ಮಕ್ಕಳಿಗೆ ಇಂಟರ್ನೆಟ್ ನಿಷೇಧ ಸಲ್ಲದು: ಸುಪ್ರೀಂ ಕೋರ್ಟ್
ನವದೆಹಲಿ: ಮಕ್ಕಳಿಗೆ ವಯಸ್ಸಿನ ಆಧಾರದ ಮೇಲೆ ಇಂಟರ್ನೆಟ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇಂಟರ್ನೆಟ್ ಅನ್ನು ಪಡೆದುಕೊಳ್ಳುವುದು ಮತ್ತು ಬಳಸುವುದು ಮಕ್ಕಳ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಪ್ರತಿಪಾದಿಸಿದೆ.ಮಕ್ಕಳ ಆನ್ಲೈನ್ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯ ಇವೆರಡೂ ಒಂದಕ್ಕೊಂದು ವಿರುದ್ಧವಾದ ವಿಷಯಗಳಲ್ಲ. ಆದ್ದ

ನವದೆಹಲಿ: ಮಕ್ಕಳಿಗೆ ವಯಸ್ಸಿನ ಆಧಾರದ ಮೇಲೆ ಇಂಟರ್ನೆಟ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇಂಟರ್ನೆಟ್ ಅನ್ನು ಪಡೆದುಕೊಳ್ಳುವುದು ಮತ್ತು ಬಳಸುವುದು ಮಕ್ಕಳ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಪ್ರತಿಪಾದಿಸಿದೆ.ಮಕ್ಕಳ ಆನ್ಲೈನ್ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯ ಇವೆರಡೂ ಒಂದಕ್ಕೊಂದು ವಿರುದ್ಧವಾದ ವಿಷಯಗಳಲ್ಲ. ಆದ್ದರಿಂದ ಸಂಪೂರ್ಣ ನಿಷೇಧ ಹೇರುವ ಬದಲು, ಅಪಾಯಗಳನ್ನು ಕಡಿಮೆ ಮಾಡಲು ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರ್ಟ್ ಹೇಳಿರುವುದಾಗಿ 'ಡಿಎನ್ಎ ವೈಬ್ಸೈಟ್' ವರದಿ ಮಾಡಿದೆ.ಧೈರ್ಯನೇ ಇಲ್ವಾ ನಿಮಗೆಲ್ಲಾ... ಮನೆಮಂದಿಗೆ ಕಿಚ್ಚ ಸುದೀಪ್ ನೇರ ಪ್ರಶ್ನೆಮಣಿಪುರಕ್ಕೆ ಇಷ್ಟು ಭದ್ರತೆ ಒದಗಿಸಿದ್ದರೆ ಜನಾಂಗೀಯ ಸಂಘರ್ಷ ತಪ್ಪುತ್ತಿತ್ತು: ಘೋಷ್ ಇಂಟರ್ನೆಟ್ ಬಳಕೆಯು ಮಕ್ಕಳ ಕಲಿಕೆ ಮತ್ತು ಬೆಳವಣಿಗೆಗೆ ಅಗತ್ಯವಾಗಿದ್ದು, ವಯಸ್ಸಿನ ನೆಪದಲ್ಲಿ ಅದನ್ನು ಸಂಪೂರ್ಣವಾಗಿ ತಡೆಯಬಾರದು ಎಂದಿದೆ.ನಿಯಮಗಳನ್ನು ಮೀರಿ ಇಂಟರ್ನೆಟ್ ಬಳಸಿದಾಗ ಆನ್ಲೈನ್ನಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಬೆದರಿಕೆಗೆ ಒಳಗಾದರೆ, ಭಯದಿಂದ ಮಕ್ಕಳು ಯಾರ ಬಳಿಯೂ ದೂರು ನೀಡದೆ ಮೌನವಾಗುವ ಅಪಾಯವಿದೆ ಎಂದೂ ಹೇಳಿದೆ.ರಕ್ಷಣೆ ಮತ್ತು ಸುರಕ್ಷತೆಗೆ ಒತ್ತುಮಕ್ಕಳನ್ನು ಇಂಟರ್ನೆಟ್ನಿಂದ ದೂರವಿಡುವ ಬದಲು, ಡಿಜಿಟಲ್ ವೇದಿಕೆಯನ್ನು ಅವರಿಗೆ ಸುರಕ್ಷಿತವಾಗಿಸುವುದು ಮುಖ್ಯ ಎಂದು ಕೋರ್ಟ್ ತಿಳಿಸಿದೆ. ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಹಾಗೂ ಅಪಾಯಕಾರಿ ವಿಷಯಗಳನ್ನು ಆನ್ಲೈನ್ನಿಂದ ತಕ್ಷಣವೇ ಪತ್ತೆಹಚ್ಚಿ ತೆಗೆದುಹಾಕಲು ಕಟ್ಟುನಿಟ್ಟಿನ ವ್ಯವಸ್ಥೆ ತರಬೇಕು ಎಂದು ಸುಪ್ರೀಂ ಕೋರ್ಟ್ ಸರ್ಕಾರ ಮತ್ತು ಸಂಸ್ಥೆಗಳಿಗೆ ನಿರ್ದೇಶಿಸಿದೆ. ದೃಶ್ಯಂ 3 ಚಿತ್ರ ಪ್ರೇರಣೆ: ಚಿನ್ನದ ಚೈನ್ಗಾಗಿ ಸಹಪಾಠಿಯನ್ನೇ ಕೊಂದ ಸ್ನೇಹಿತರು!75ರ ಹರೆಯದಲ್ಲೂ ತಲೈವಾ ಸಖತ್ ಫಿಟ್: ರಜನಿಕಾಂತ್ ಆಹಾರ ಪದ್ಧತಿಯ ರಹಸ್ಯವಿದು...