ಜೊಯಿಡಾ: ಕಾಳಿನದಿ ನೀರು ಕೃಷಿಗೆ ಒದಗಿಸಲು ಕುಣಬಿ ಸಮಾಜದಿಂದ ಮನವಿ
ಜೊಯಿಡಾ: ತಾಲ್ಲೂಕಿನಲ್ಲಿ ಹರಿಯುವ ಕಾಳಿ ನದಿಯ ನೀರನ್ನು ಕೃಷಿ ಭೂಮಿಗೆ ಮತ್ತು ತಾಲ್ಲೂಕಿನ ವಿವಿಧ ಭಾಗಗಳಿಗೆ ಪೂರೈಸುವಂತೆ ಆಗ್ರಹಿಸಿ ಕುಣಬಿ ಸಮಾಜದ ವತಿಯಿಂದ ತಹಶೀಲ್ದಾರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ್ದು ಸರ್ಕಾರ ಆದಷ್ಟು ಬೇಗ ಬೆಳೆ ವಿಮೆ, ಬರ ಪರಿಹಾರ ನೀಡುವುದರ ಜೊತೆಗೆ ಕಾಳಿ ನದಿ ಮತ್ತು ಸುಪಾ ಹಿನ್ನೀ

ಜೊಯಿಡಾ: ತಾಲ್ಲೂಕಿನಲ್ಲಿ ಹರಿಯುವ ಕಾಳಿ ನದಿಯ ನೀರನ್ನು ಕೃಷಿ ಭೂಮಿಗೆ ಮತ್ತು ತಾಲ್ಲೂಕಿನ ವಿವಿಧ ಭಾಗಗಳಿಗೆ ಪೂರೈಸುವಂತೆ ಆಗ್ರಹಿಸಿ ಕುಣಬಿ ಸಮಾಜದ ವತಿಯಿಂದ ತಹಶೀಲ್ದಾರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ್ದು ಸರ್ಕಾರ ಆದಷ್ಟು ಬೇಗ ಬೆಳೆ ವಿಮೆ, ಬರ ಪರಿಹಾರ ನೀಡುವುದರ ಜೊತೆಗೆ ಕಾಳಿ ನದಿ ಮತ್ತು ಸುಪಾ ಹಿನ್ನೀರನ್ನು ಹಾಗೂ ಕಾಳಿ ನದಿಯ ಉಪನದಿಗಳಾಗಿರುವ ಕಾನೇರಿ, ಪಾಂಡ್ರಿ, ನಾಗಿ, ವಾಕಿ ಮತ್ತು ನಾಶಿ ನದಿಗಳ ನೀರನ್ನು ತಾಲ್ಲೂಕಿನ ಕೃಷಿ ಭೂಮಿಗೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂದು ಮನವಿ ಆಗ್ರಹಿಸಲಾಗಿದೆ.ತಾಲ್ಲೂಕಿನಲ್ಲಿ ಯಾವುದೇ ಕೈಗಾರಿಕೆ, ಸ್ವ ಉದ್ಯೋಗ ಮಾಡಲು ಅವಕಾಶವಿಲ್ಲದ ಕಾರಣ ಸರ್ಕಾರಿ ಮತ್ತು ಹೊರಗುತ್ತಿಗೆ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಲಾಗಿದೆ.ಆದಷ್ಟು ಬೇಗ ಸರ್ಕಾರ ಈ ಬಗ್ಗೆ ಯೋಜನೆ ರೂಪಿಸಿ ತಾಲ್ಲೂಕಿನ ಜನರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಆಗಲಿದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.ಈ ಸಂದರ್ಭದಲ್ಲಿ ಕುಣಬಿ ಜಿಲ್ಲಾಧ್ಯಕ್ಷ ಸುಭಾಷ್ ಗಾವಡಾ, ತಾಲ್ಲೂಕು ಅಧ್ಯಕ್ಷ ಪ್ರೇಮಾನಂದ ವೇಳಿಪ, ಪ್ರಮುಖರಾದ ಕೃಷ್ಣ ಮೀರಾಶಿ, ಸಂತೋಷ ವೇಳಿಪ, ಸುರೇಶ್ ಗಾವಡಾ, ಗಜಾನನ ವೇಳಿಪ, ಬಾಲಚಂದ್ರ ಮೀರಾಶಿ ಮುಂತಾದವರು ಇದ್ದರು.261017-20-1409617854