ಮಾರಾಟ ಮಾಡಿದ್ದ ತನ್ನ ಕಾರನ್ನೇ GPS, 3ನೇ ಕೀ ಬಳಸಿ ಕಳವು ಮಾಡಿದ ಭೂಪ!
ನವದೆಹಲಿ: ವ್ಯಕ್ತಿಯೊಬ್ಬ ತನ್ನ ಸೆಡಾನ್ ಕಾರನ್ನು ಬೇರೆಯವರಿಗೆ ಮಾರಾಟ ಮಾಡಿದ ನಂತರವೂ ಸ್ನೇಹಿತ ಜೊತೆ ಸೇರಿ ಮತ್ತೆ ಆದೇ ಕಾರನ್ನು ಕದಿಯಲು ಸಂಚು ರೂಪಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ಯೋಗೇಶ್ ದಹಿಯಾ ಎಂಬಾತ ತನ್ನ ಕಾರನ್ನು ಬೇರೆಯವರಿಗೆ ಮಾರಾಟ ಮಾಡಿದ್ದ. ಬಳಿಕ ಸ್ನೇಹಿತ ಸಾಹಿಲ್ ರೋಹಿಲ್ಲಾ ಜೊತೆ ಸೇರಿ ಜಿಪಿಎಸ್ ಟ್ರ್ಯಾಕಿಂಗ್ ಸಾಧನ ಮತ್ತು ತನ್ನ ಬಳಿ ಉಳಿಸಿಕ

ನವದೆಹಲಿ: ವ್ಯಕ್ತಿಯೊಬ್ಬ ತನ್ನ ಸೆಡಾನ್ ಕಾರನ್ನು ಬೇರೆಯವರಿಗೆ ಮಾರಾಟ ಮಾಡಿದ ನಂತರವೂ ಸ್ನೇಹಿತ ಜೊತೆ ಸೇರಿ ಮತ್ತೆ ಆದೇ ಕಾರನ್ನು ಕದಿಯಲು ಸಂಚು ರೂಪಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ಯೋಗೇಶ್ ದಹಿಯಾ ಎಂಬಾತ ತನ್ನ ಕಾರನ್ನು ಬೇರೆಯವರಿಗೆ ಮಾರಾಟ ಮಾಡಿದ್ದ. ಬಳಿಕ ಸ್ನೇಹಿತ ಸಾಹಿಲ್ ರೋಹಿಲ್ಲಾ ಜೊತೆ ಸೇರಿ ಜಿಪಿಎಸ್ ಟ್ರ್ಯಾಕಿಂಗ್ ಸಾಧನ ಮತ್ತು ತನ್ನ ಬಳಿ ಉಳಿಸಿಕೊಂಡಿದ್ದ ಮೂರನೇ ಕೀಯನ್ನು ಬಳಸಿ ಕಾರು ಕಳವು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣ ಸಂಬಂಧ ಯೋಗೇಶ್ ದಹಿಯಾ ಮತ್ತು ಸಾಹಿಲ್ ರೋಹಿಲ್ಲಾನನ್ನು ಬಂಧಿಸಲಾಗಿದೆ. ಅವರ ಬಳಿಯಿದ್ದ ಕದ್ದ ಕಾರು ಮತ್ತು ₹89,500 ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಅಕ್ಟೋಬರ್ 8ರಂದು ದಿಲ್ಶಾದ್ ಗಾರ್ಡನ್ನಲ್ಲಿ ಕಾರನ್ನು ನಿಲ್ಲಿಸಲಾಗಿತ್ತು. ಇದಾದ ನಾಲ್ಕೇ ನಿಮಿಷಗಳಲ್ಲಿ ಕಾರನ್ನು ಕಳ್ಳತನ ಮಾಡಲಾಗಿತ್ತು. ಕಾರಿನಲ್ಲಿ ₹2 ಲಕ್ಷ ಹಣ ಇರಿಸಲಾಗಿತ್ತು ಎಂದು ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು.ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ, ಫಾಸ್ಟ್ಟ್ಯಾಗ್ ವಿವರಗಳನ್ನು ಪರಿಶೀಲಿಸಿದ್ದರು. ಬಳಿಕ ಕಾರು ಹರಿಯಾಣದ ಸೋನಿಪತ್ನಲ್ಲಿರುವುದು ದೃಢಪಟ್ಟಿತ್ತು. ಕಾರಿನ ಮಾಲೀಕನೇ (ದಹಿಯಾ) ಕಳ್ಳತನದ ಪ್ರಮುಖ ರೂವಾರಿ ಎಂದು ಶಂಕಿಸಲಾಗಿತ್ತು.‘ದಹಿಯಾ ಜಿಪಿಎಸ್ ಸಾಧನದ ಮೂಲಕ ಕಾರಿನ ಚಲನವಲನ ಗಮನಿಸುತ್ತಿದ್ದ. ಬಳಿಕ ರೋಹಿಲ್ಲಾ ಜೊತೆ ಸೇರಿ, ತನ್ನ ಬಳಿಯಿದ್ದ ಮತ್ತೊಂದು ಕೀಯನ್ನು ಬಳಸಿ ಕಾರನ್ನು ಕದ್ದಿದ್ದ. ಕದ್ದ ಕಾರನ್ನುಪೊಲೀಸರಿಗೆ ಅನುಮಾನ ಬಾರದಂತೆ ರೋಹಿಲ್ಲಾ ಬಳಿ ಬಿಟ್ಟಿದ್ದ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ದಹಿಯಾ ಬಳಿ ₹39,500 ಮತ್ತು ರೋಹಿಲ್ಲಾನಿಂದ ₹50,000 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕದ್ದ ಹಣದಲ್ಲಿ ₹25,000 ಖರ್ಚು ಮಾಡಿರುವುದಾಗಿ ರೋಹಿಲ್ಲಾ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.