ಕಾಂಗ್ರೆಸ್ನಿಂದ ಅಂತರ ಕಾಯ್ದುಕೊಂಡಿರುವ DMK: ಹೊಸ ಮೈತ್ರಿಕೂಟ ರಚನೆಗೆ ಸಿದ್ಧತೆ?
ಚೆನ್ನೈ: ಚುನಾವಣಾ ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಜ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆಗೆ ಡಿಎಂಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷದಿಂದ ತಾನು (ಡಿಎಂಕೆ) ಅಂತರ ಕಾಯ್ದುಕೊಂಡಿರುವುದಾಗಿಯೂ ಸ್ಪಷ್ಟಪಡಿಸಿದೆ.ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್

ಚೆನ್ನೈ: ಚುನಾವಣಾ ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಜ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆಗೆ ಡಿಎಂಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷದಿಂದ ತಾನು (ಡಿಎಂಕೆ) ಅಂತರ ಕಾಯ್ದುಕೊಂಡಿರುವುದಾಗಿಯೂ ಸ್ಪಷ್ಟಪಡಿಸಿದೆ.ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಡಿಎಂಕೆ ಸಂಸದರ ಸಭೆಯಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು, ಎಸ್ಐಆರ್ ರದ್ದುಗೊಳಿಸಬೇಕು ಹಾಗೂ ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಬೇಕು ಎಂದು ಡಿಎಂಕೆ ಆಗ್ರಹಿಸಿದೆ.ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು ಮಂಜೂರುದೇಶದ ಯುವಕರು ಪ್ರತೀಕಾರ ಎದುರಿಸುತ್ತಿದ್ದಾರೆಯೇ? UN ವರದಿ ತಳ್ಳಿಹಾಕಿದ ಭಾರತ ಕಾಂಗ್ರೆಸ್ ಮತ್ತು ಟಿವಿಕೆಗೆ ವಿರೋಧಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಆಡಳಿತಾರೂಢ ಟಿವಿಕೆ ದ್ವಂದ್ವ ನಿಲುವು ತಳೆದಿವೆ ಎಂದು ಡಿಎಂಕೆ ಆರೋಪಿಸಿದೆ.ಸಿಜಿಪಿ ಮತ್ತು ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿರುವ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ಡಿಎಂಕೆ ತಿಳಿಸಿದೆ.ಯುವಕರ ಹೋರಾಟದ ಶ್ರೇಯವನ್ನು ತನ್ನದಾಗಿಸಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್ ಜೊತೆ ಇನ್ಮುಂದೆ ಯಾವುದೇ ಜಂಟಿ ಹೋರಾಟ ನಡೆಸುವುದಿಲ್ಲ ಎಂದು ಡಿಎಂಕೆ ಸ್ಪಷ್ಟಪಡಿಸಿದೆ.ಸಿಜಿಪಿ ಮುಖ್ಯಸ್ಥರ ಬಂಧನಕ್ಕೆ ಸ್ಟಾಲಿನ್ ಖಂಡನೆಸಿಜಿಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಇತರ ಯುವ ನಾಯಕರನ್ನು ಪೊಲೀಸರು ಬಂಧಿಸಿರುವುದಕ್ಕೆ ಎಂ.ಕೆ. ಸ್ಟಾಲಿನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಯುವಕರ ಬಂಧನ ಕಾನೂನುಬಾಹಿರ ಹಾಗೂ ಅಮಾನವೀಯ. ಸರ್ಕಾರ ಎಷ್ಟು ಧ್ವನಿಗಳನ್ನು ಅಡಗಿಸಲು ಸಾಧ್ಯ?‘ ಎಂದು ಸ್ಟಾಲಿನ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಶ್ನಿಸಿದ್ದಾರೆ.ಪರಿಶುದ್ಧ ಪ್ರೀತಿ ನೀಡುವ ಮಹಿಳೆ ‘ಜಯಮ್ಮ’: ರಶ್ಮಿಕಾ ಮಂದಣ್ಣ ಭಾವುಕ ಪೋಸ್ಟ್ಧೈರ್ಯನೇ ಇಲ್ವಾ ನಿಮಗೆಲ್ಲಾ... ಮನೆಮಂದಿಗೆ ಕಿಚ್ಚ ಸುದೀಪ್ ನೇರ ಪ್ರಶ್ನೆಅಲ್ಲದೆ, ಪ್ರತಿಭಟನಾಕಾರರಿಗೆ ಅಗತ್ಯವಿರುವ ಕಾನೂನು ನೆರವು ನೀಡುವುದಾಗಿಯೂ ಹೇಳಿದ್ದಾರೆ.ಹೊಸ ಮೈತ್ರಿಕೂಟದ ಸುಳಿವು?ತಮಿಳುನಾಡಿನಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದುಬಿದ್ದ ನಂತರ, ಡಿಎಂಕೆ 'ಇಂಡಿಯಾ' ಒಕ್ಕೂಟದಿಂದ ದೂರ ಉಳಿದಿದೆ. ಇದೀಗ ಕೆಲವು ಪ್ರಾದೇಶಿಕ ನಾಯಕರನ್ನು ಒಟ್ಟುಗೂಡಿಸಿ ಹೊಸ 'ಮೈತ್ರಿಕೂಟ' ರಚಿಸಲು ಡಿಎಂಕೆ ತಂತ್ರ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.