ಸೈಬರ್ ದಾಳಿ: ‘ಸಿಇಆರ್ಟಿ’ ಎಚ್ಚರಿಕೆ
ನವದೆಹಲಿ (ಪಿಟಿಐ): ಕೃತಕ ಬುದ್ಧಿಮತ್ತೆ (ಎಐ) ಏಜೆಂಟ್ಗಳು (ಸ್ವಾಯತ್ತ ಸಾಫ್ಟ್ವೇರ್ ವ್ಯವಸ್ಥೆ) ಭಾರತೀಯ ಸಂಸ್ಥೆಗಳ ಗೋಪ್ಯ ಡೇಟಾ ಮತ್ತು ಲೈವ್ ವ್ಯವಸ್ಥೆಗಳನ್ನು ಅನುಮತಿ ಇಲ್ಲದೆ ಪ್ರವೇಶಿಸಿದ್ದು, ಭಾರಿ ಸೈಬರ್ ದಾಳಿಗೆ ಯತ್ನ ನಡೆದಿದೆ ಎಂದು ಭಾರತೀಯ ಸೈಬರ್ ಸುರಕ್ಷತಾ ನೋಡಲ್ ಏಜೆನ್ಸಿಯಾದ ‘ಸಿಇಆರ್ಟಿ’ ಗಂಭೀರ ಎಚ್ಚರಿಕೆ ನೀಡಿದೆ. ಓಪನ್ ಸೋರ್ಸ್ ಎ.

ನವದೆಹಲಿ (ಪಿಟಿಐ): ಕೃತಕ ಬುದ್ಧಿಮತ್ತೆ (ಎಐ) ಏಜೆಂಟ್ಗಳು (ಸ್ವಾಯತ್ತ ಸಾಫ್ಟ್ವೇರ್ ವ್ಯವಸ್ಥೆ) ಭಾರತೀಯ ಸಂಸ್ಥೆಗಳ ಗೋಪ್ಯ ಡೇಟಾ ಮತ್ತು ಲೈವ್ ವ್ಯವಸ್ಥೆಗಳನ್ನು ಅನುಮತಿ ಇಲ್ಲದೆ ಪ್ರವೇಶಿಸಿದ್ದು, ಭಾರಿ ಸೈಬರ್ ದಾಳಿಗೆ ಯತ್ನ ನಡೆದಿದೆ ಎಂದು ಭಾರತೀಯ ಸೈಬರ್ ಸುರಕ್ಷತಾ ನೋಡಲ್ ಏಜೆನ್ಸಿಯಾದ ‘ಸಿಇಆರ್ಟಿ’ ಗಂಭೀರ ಎಚ್ಚರಿಕೆ ನೀಡಿದೆ. ಓಪನ್ ಸೋರ್ಸ್ ಎ.ಐ ಪರಿಕರಕಗಳನ್ನೇ ಸೈಬರ್ ದಾಳಿಯ ವಾಹಕಗಳಾಗಿ ಬಳಸಿಕೊಳ್ಳಲಾಗುತ್ತಿದೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ), ಡಿಜಿಟಲ್ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಕ್ಷಿಪ್ರ ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚಿವೆ. ಬಾಧಿತ ಸಂಸ್ಥೆಗಳು ಸ್ವತಃ ಈ ದಾಳಿಯನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿವೆ ಎಂದು ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡದ (ಸಿಇಆರ್ಟಿ) ವರದಿ ಹೇಳಿದೆ.ಸಾರ್ವಜನಿಕವಾಗಿ ಲಭ್ಯವಿರುವ ಎ.ಐ ಭದ್ರತಾ ಚೌಕಟ್ಟು ಬಳಸಿಕೊಂಡು ಸೈಬರ್ ಅಪರಾಧಿಗಳು ಭಾರತೀಯ ಸಂಸ್ಥೆಗಳ ಸಾಂಪ್ರದಾಯಿಕ ಭದ್ರತಾ ಲೋಪವನ್ನು ಪತ್ತೆ ಹಚ್ಚುತ್ತಿದ್ದಾರೆ. ಆ ಮೂಲಕ ಗೋಪ್ಯ ಡೇಟಾವನ್ನು ಪ್ರವೇಶಿಸುತ್ತಿದ್ದಾರೆ. ಭಾರತೀಯ ಸಂಸ್ಥೆಗಳ ವಿರುದ್ಧ ಆರ್ಥಿಕ ಪ್ರೇರಿತ ಅಭಿಯಾನವೂ ನಡೆಯುತ್ತಿದೆ ಎಂದು ‘ಸಿಇಆರ್ಟಿ’ ಗಮನ ಸೆಳೆದಿದೆ.ಎ.ಐ ಏಜೆಂಟ್ಗಳ ದಾಳಿಯ ಬಗ್ಗೆ ಗಂಭೀರ ಎಚ್ಚರಿಕೆ ವಹಿಸಬೇಕು. ಸಿಇಆರ್ಟಿ ಸಕಾಲಿಕ ಎಚ್ಚರಿಕೆ ನೀಡಿದೆ ಎಂದು ಸೈಬರ್ ಸುರಕ್ಷತಾ ಸಂಸ್ಥೆ ಕ್ಯಾಸ್ಪರ್ಸ್ಕಿ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಜಯದೀಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.