ನನ್ನ ಆರೋಗ್ಯ ಚೆನ್ನಾಗಿದೆ.. ಗೃಹ ಸಚಿವರು ನನ್ನ ಹೃದಯದ ಕಾಳಜಿ ವಹಿಸೋದು ಬೇಡ: ಹೆಚ್ಡಿಕೆ ಟಾಂಗ್
ಬೆಂಗಳೂರು: ನನ್ನ ಆರೋಗ್ಯ ಚೆನ್ನಾಗಿದೆ. ಗೃಹ ಸಚಿವರು ನನ್ನ ಹೃದಯದ ಬಗ್ಗೆ ಕಾಳಜಿ ವಹಿಸೋದು ಬೇಡ ಎಂದು ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಾಗ್ದಾಳಿ ನಡೆಸಿದರು. ಜೆಡಿಎಸ್ ಪ್ರತಿಭಟನೆ ವೇಳೆ ಮಾತನಾಡಿದ ಹೆಚ್ಡಿಕೆ, ಗೃಹ ಸಚಿವರು ನನ್ನ ಆರೋಗ್ಯದ ಬಗ್ಗೆ ಅನಾಗರಿಕವಾಗಿ ಮಾತನಾಡಿದ್ದಾರೆ. ನನ

ಬೆಂಗಳೂರು: ನನ್ನ ಆರೋಗ್ಯ ಚೆನ್ನಾಗಿದೆ. ಗೃಹ ಸಚಿವರು ನನ್ನ ಹೃದಯದ ಬಗ್ಗೆ ಕಾಳಜಿ ವಹಿಸೋದು ಬೇಡ ಎಂದು ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಾಗ್ದಾಳಿ ನಡೆಸಿದರು. ಜೆಡಿಎಸ್ ಪ್ರತಿಭಟನೆ ವೇಳೆ ಮಾತನಾಡಿದ ಹೆಚ್ಡಿಕೆ, ಗೃಹ ಸಚಿವರು ನನ್ನ ಆರೋಗ್ಯದ ಬಗ್ಗೆ ಅನಾಗರಿಕವಾಗಿ ಮಾತನಾಡಿದ್ದಾರೆ. ನನ್ನ ಹೃದಯ ಗಟ್ಟಿಯಾಗಿದೆ ಅನ್ನೋದನ್ನ ತೋರಿಸೋದಕ್ಕೆ ಪಾದಯಾತ್ರೆ ಮಾಡಿದ್ದೇನೆ. ನನ್ನ ಹೃದಯದ ಚಿಕಿತ್ಸೆ ಮಾಡುವ ಕೆಲಸ ನಿಮಗೆ ಬೇಡ ಎಂದು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಕುಮಾರಸ್ವಾಮಿ ಅವರೇ ದಾಖಲೆಗಳಿದ್ದರೆ ಬಹಿರಂಗಪಡಿಸಿ, ಇಲ್ಲವೇ ಸುಮ್ಮನಿರಿ: ಪ್ರಿಯಾಂಕ್ ಖರ್ಗೆ ಕಿಡಿ ಪಕ್ಷದ ಕಚೇರಿಯಿಂದ ಫ್ರೀಡಂ ಪಾರ್ಕ್ವರೆಗೆ ಕಾಲ್ನಡಿಗೆಯಲ್ಲಿ ಬಂದೆ. ನನ್ನ ಆರೋಗ್ಯ ಚೆನ್ನಾಗಿದೆ. ಗಟ್ಟಿ ಇದ್ದೇನೆ ಅಂತ ತೋರಿಸಿದ್ದೇನೆ. ಗೃಹ ಸಚಿವರು ನನ್ನ ಹೃದಯದ ಕಾಳಜಿ ತಗೊಳ್ಳೋದು ಬೇಡ. ಕಾರ್ಯಕರ್ತರು ಇದ್ದಾರೆ ಎಂದು ತಿಳಿಸಿದರು. ಹಬ್ಬದ ಬಳಿಕ ಮುಂದಿನ ಹೋರಾಟ ಮಾಡ್ತೇವೆ. ಇದು ವೈಯಕ್ತಿಕ ಹೋರಾಟ ಅಲ್ಲ. ಭೂಮಿಗಳನ್ನು ಲಪಟಾಯಿಸಲು, ಯುವಕರ ಉದ್ಯೋಗ ಲಪಟಾಯಸಲು ಹೊರಟಿದ್ದಾರೆ ಎಂದು ಸರ್ಕಾರದ ವಿರುದ್ಧ ಗುಡುಗಿದರು. ಇದನ್ನೂ ಓದಿ: ಸ್ಟಿಂಗ್ ರೂವಾರಿಗಳ ಬಂಧನಕ್ಕೆ ಆಗ್ರಹ – ಡಿಜಿಪಿ ಸಲೀಂಗೆ ದೂರು ನೀಡಿದ ಹೆಚ್ಡಿಕೆ