ಮುಂದುವರಿದ ಪಾದಯಾತ್ರೆ
ಬೆಳಗಾವಿ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ರೈತರು ಆರಂಭಿಸಿದ ‘ಹುಬ್ಬಳ್ಳಿ ಚಲೋ’ ಪಾದಯಾತ್ರೆ ಶುಕ್ರವಾರ ಚನ್ನಮ್ಮನ ಕಿತ್ತೂರಿನ ಎಂ.ಕೆ.ಹುಬ್ಬಳ್ಳಿ ತಲುಪಿತು. ಇಲ್ಲಿ ಶನಿವಾರ (ಅ. 17) ಎಲ್ಲ 31 ಜಿಲ್ಲೆಗಳ ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಮುಖಂಡರ ಸಭೆ ನಡೆಯಲಿದೆ.ಬೆಳಗಾವಿ ತಾಲ್ಲೂಕಿನ ಹಲಗಾ– ಬಸ್ತವಾಡ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದ ರ

ಬೆಳಗಾವಿ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ರೈತರು ಆರಂಭಿಸಿದ ‘ಹುಬ್ಬಳ್ಳಿ ಚಲೋ’ ಪಾದಯಾತ್ರೆ ಶುಕ್ರವಾರ ಚನ್ನಮ್ಮನ ಕಿತ್ತೂರಿನ ಎಂ.ಕೆ.ಹುಬ್ಬಳ್ಳಿ ತಲುಪಿತು. ಇಲ್ಲಿ ಶನಿವಾರ (ಅ. 17) ಎಲ್ಲ 31 ಜಿಲ್ಲೆಗಳ ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಮುಖಂಡರ ಸಭೆ ನಡೆಯಲಿದೆ.ಬೆಳಗಾವಿ ತಾಲ್ಲೂಕಿನ ಹಲಗಾ– ಬಸ್ತವಾಡ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದ ರೈತರು, ಶುಕ್ರವಾರ ಬೆಳಿಗ್ಗೆ ಸುವರ್ಣ ವಿಧಾನಸೌಧದ ಮುಂಭಾಗಕ್ಕೆ ಬಂದಾಗ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರ ಅಣಕು ಶವಯಾತ್ರೆ ಮಾಡಿದರು. ಪಾದಯಾತ್ರೆ ಮಾರ್ಗಮಧ್ಯೆ ಗ್ರಾಮಸ್ಥರು ಶರಬತ್ತು ಹಾಗೂ ನೀರು, ಊಟದ ವ್ಯವಸ್ಥೆ ಮಾಡಿದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡು ಆರ್ಥಿಕ ನೆರವು ನೀಡಿದರು.ಕಳೆದ ಮೂರು ದಿನಗಳಿಂದ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಬಳಿ ರಾಜ್ಯ ಹೆದ್ದಾರಿ ತಡೆಯಲ್ಲಿ ನಿರತರಾಗಿದ್ದ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಕೂಡ ಶುಕ್ರವಾರ ಪಾದಯಾತ್ರೆಯಲ್ಲಿ ಪಾಲ್ಗೊಂಡರು.‘ಕಬ್ಬಿಗೆ ₹5,500 ಮತ್ತು ಸಕ್ಕರೆಗೆ ₹60 ಬೆಂಬಲ ಬೆಲೆ ಘೋಷಣೆ ಹಾಗೂ ಎಥೆನಾಲ್ ಸಂಪೂರ್ಣ ಖರೀದಿಗೆ ಒತ್ತಾಯಿಸಿದ್ದೇವೆ. ಭಾನುವಾರ ಚನ್ನಮ್ಮನ ಕಿತ್ತೂರು ಅಥವಾ ಅದರ ಮುಂದಿನ ಊರಲ್ಲಿ ವಸತಿ ಮಾಡುತ್ತೇವೆ. ಸೋಮವಾರ ಹುಬ್ಬಳ್ಳಿ ಪ್ರವೇಶಿಸುತ್ತೇವೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ‘ಪ್ರಜಾವಾಣಿ’ಗೆ ತಿಳಿಸಿದರು.ಶಶಿಕಾಂತ ಗುರೂಜಿ ಗೌರವಾಧ್ಯಕ್ಷ ರಾಜ್ಯ ರೈತ ಸಂಘರಾಜ್ಯ ಸರ್ಕಾರದ ವಿರುದ್ಧವೂ ನಮ್ಮ ಹೋರಾಟವಿದೆ. ತಮಿಳುನಾಡು ಮಾದರಿಯಲ್ಲಿ ನಮ್ಮ ಸರ್ಕಾರವೂ ಪ್ರತಿ ಟನ್ ಕಬ್ಬಿಗೆ ₹1000 ಬೆಂಬಲ ಬೆಲೆ ಘೋಷಿಸಬೇಕು ಚೂನಪ್ಪ ಪೂಜೇರಿ ಅಧ್ಯಕ್ಷ ರಾಜ್ಯ ರೈತ ಸಂಘರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ ₹500 ನೀಡಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ನಾಳೆಯ ಸಭೆಯಲ್ಲಿ ಚರ್ಚಿಸುತ್ತಿದ್ದೇವೆ ಪ್ರಲ್ಹಾದ ಜೋಶಿ ಕೇಂದ್ರ ಸಚಿವ- ಬೆಂಬಲ ಬೆಲೆಯನ್ನು ತೀರ್ಮಾನಿಸುವ ಸಮಿತಿಯ ಮೊದಲ ಸಭೆ ಅ. 19ರಂದು ನಡೆಯಲಿದೆ. ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳನ್ನು ನೇಮಿಸಲಾಗಿದೆ. ರೈತರು ಹೋರಾಟ ಕೈಬಿಡಲಿ. ಮನವಿ ಸಲ್ಲಿಸಲು ಬಂದವರು ಪೊಲೀಸ್ ವಶಕ್ಕೆ ಮುಂಡರಗಿ (ಗದಗ ಜಿಲ್ಲೆ): ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಲು ಬಂದ 15ಕ್ಕೂ ಹೆಚ್ಚು ಕಬ್ಬು ಬೆಳೆಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗಾಗಿ ಬಿಜೆಪಿ ಪರ ಪ್ರಚಾರಕ್ಕೆ ಪ್ರಲ್ಹಾದ ಜೋಶಿ ಅವರು ಬರುವ ವಿಷಯ ಗೊತ್ತಾದ ಕೂಡಲೇ 60ಕ್ಕೂ ಹೆಚ್ಚು ರೈತರು ಮುಂಡರಗಿಗೆ ಬಂದರು. ಕೇಂದ್ರ ಬಸ್ ನಿಲ್ದಾಣದ ಬಳಿ ಕೆಲವರನ್ನು ವಶಕ್ಕೆ ಪಡೆಯುತ್ತಿದ್ದಂತೆ ಇನ್ನು ಕೆಲವರು ಪ್ರತಿಭಟನೆ ನಡೆಸಿದರು. ಅವರನ್ನೂ ಪೊಲೀಸರು ವಶಕ್ಕೆ ಪಡೆದರು. ‘ಪ್ರಲ್ಹಾದ ಜೋಶಿ ಅವರಿಗೆ ಘೇರಾವ್ ಹಾಕುವ ಸಾಧ್ಯತೆ ಇದ್ದ ಕಾರಣ ಮುಂಜಾಗ್ರತಾ ಕ್ರಮವಾಗಿ ರೈತರನ್ನು ವಶಕ್ಕೆ ಪಡೆಯಲಾಯಿತು’ ಎಂದು ಸಿಪಿಐನ ಅಯ್ಯನಗೌಡರ ಪಾಟೀಲ ತಿಳಿಸಿದರು. ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪಾಲ್ಗೊಳ್ಳಲಿಲ್ಲ. ‘ರಾಜ್ಯದಿಂದಲೇ ಎಫ್ಆರ್ಪಿ ಸಾಧ್ಯ’ ‘ಈ ಹಿಂದೆ ನಾನು ಕಂದಾಯ ಖಾತೆಯೊಂದಿಗೆ ಸಕ್ಕರೆ ಖಾತೆಯನ್ನೂ ನಿಭಾಯಿಸಿದ್ದೇನೆ. ಆಗಲೂ ಕಬ್ಬು ಬೆಳೆಗಾರರ ಎಫ್ಆರ್ಸಿ ಹಾಗೂ ಎಂಎಸ್ಪಿ ಸಮಸ್ಯೆ ಎದುರಾಗಿತ್ತು. ರೈತ ಮುಖಂಡರು ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆದು ಶಾಂತಿಯುತವಾಗಿ ಪರಿಹಾರ ಕಂಡುಕೊಂಡಿದ್ದೆ. ಅದಕ್ಕೆ ಸಂಬಂಧಿಸಿ ಪ್ರತ್ಯೇಕ ಕಾಯ್ದೆಯನ್ನೂ ಜಾರಿಗೊಳಿಸಿದ್ದೇನೆ. ಹಾಲಿ ಸಕ್ಕರೆ ಖಾತೆ ಸಚಿವ ರುದ್ರಪ್ಪ ಲಮಾಣಿ ಈ ಬಗ್ಗೆ ಗಮನ ಹರಿಸಿದರೆ ಸಮಸ್ಯೆಯೇ ಎದುರಾಗದು’ ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದರು.