ಪಂದ್ಯಕ್ಕೆ ಮಳೆ ಅಡ್ಡಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೈನ್–9 ಹಣಾಹಣಿ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ವರ್ಷಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಯೋಜನೆಗೊಂಡಿದೆ. ಆದರೆ ಮಳೆಯಿಂದಾಗಿ ಪಂದ್ಯವು ನಿಗದಿಯ ಸಮಯಕ್ಕೆ ಆರಂಭವಾಗಲಿಲ್ಲ. ಶನಿವಾರ ರಾತ್ರಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟಿ20 ಪಂದ್ಯವು ರಾತ್ರಿ 7ಕ್ಕೆ ಆರಂಭವಾಗಬೇಕಿತ್ತು. ಆದರೆ ಸಂಜೆ 5.30ರಿಂದ ಆರಂಭವಾದ ಮಳೆಯಿಂದಾಗಿ ಪಿಚ್ಗಳಿಗೆ ಹ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ವರ್ಷಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಯೋಜನೆಗೊಂಡಿದೆ. ಆದರೆ ಮಳೆಯಿಂದಾಗಿ ಪಂದ್ಯವು ನಿಗದಿಯ ಸಮಯಕ್ಕೆ ಆರಂಭವಾಗಲಿಲ್ಲ. ಶನಿವಾರ ರಾತ್ರಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟಿ20 ಪಂದ್ಯವು ರಾತ್ರಿ 7ಕ್ಕೆ ಆರಂಭವಾಗಬೇಕಿತ್ತು. ಆದರೆ ಸಂಜೆ 5.30ರಿಂದ ಆರಂಭವಾದ ಮಳೆಯಿಂದಾಗಿ ಪಿಚ್ಗಳಿಗೆ ಹೊದಿಕೆ ಹಾಕಲಾಗಿತ್ತು. ರಾತ್ರಿ 8.45 ರ ಸುಮಾರಿಗೆ ಮಳೆ ಕಡಿಮೆಯಾದಾಗ ಸಿಬ್ಬಂದಿ ಹೊದಿಕೆ ಸರಿಸಿದರು. ಗ್ಯಾಲರಿಯಲ್ಲಿದ್ದ ಸುಮಾರು 20 ಸಾವಿರ ಪ್ರೇಕ್ಷಕರು ಸಂತಸದಿಂದ ಕೇಕೆ ಹಾಕಿದರು. 9 ಗಂಟೆ ಟಾಸ್ ಮಾಡುವುದಾಗಿ ಘೋಷಿಸಲಾಯಿತು. 9.15 ಕ್ಕೆ ಪಂದ್ಯ ಆರಂಭವಾಗಲಿದೆ. ಪಂದ್ಯವನ್ನು 9–ಒಂಬತ್ತು ಓವರ್ಗಳಿಗೆ ನಿಗದಿಗೊಳಿಸಲಾಗಿದೆ.
Read the complete story at Prajavani