₹3 ಲಕ್ಷ ಲಂಚ: ‘ಯುಡಾ’ ಸದಸ್ಯ ಕಾರ್ಯದರ್ಶಿ ಬಂಧನ
ಯಾದಗಿರಿ: ಕೃಷಿಯೇತರ (ಎನ್ಎ) ನಿವೇಶನಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತಿಸಲು ₹3 ಲಕ್ಷ ಲಂಚ ಪಡೆದ ಆರೋಪದಡಿ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ (ಯುಡಾ) ಪ್ರಭಾರ ಸದಸ್ಯ ಕಾರ್ಯದರ್ಶಿ ಶರಣಪ್ಪ ಹಾಗೂ ಕಾರು ಚಾಲಕ ಸಂತೋಷ ಕುಮಾರನನ್ನು ರಾಯಚೂರಿನ ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.ರಾಯಚೂರು ಜಿಲ್ಲೆಯ ಮಾನ್ವಿ ನಿವಾಸಿ ಸುಧಾಕರ್ ವೀರಭದ್ರರಾವ್

ಯಾದಗಿರಿ: ಕೃಷಿಯೇತರ (ಎನ್ಎ) ನಿವೇಶನಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತಿಸಲು ₹3 ಲಕ್ಷ ಲಂಚ ಪಡೆದ ಆರೋಪದಡಿ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ (ಯುಡಾ) ಪ್ರಭಾರ ಸದಸ್ಯ ಕಾರ್ಯದರ್ಶಿ ಶರಣಪ್ಪ ಹಾಗೂ ಕಾರು ಚಾಲಕ ಸಂತೋಷ ಕುಮಾರನನ್ನು ರಾಯಚೂರಿನ ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.ರಾಯಚೂರು ಜಿಲ್ಲೆಯ ಮಾನ್ವಿ ನಿವಾಸಿ ಸುಧಾಕರ್ ವೀರಭದ್ರರಾವ್ ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.‘ಮಾನ್ವಿಯ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಶರಣಪ್ಪ ಅವರು ಸುಧಾಕರ್ ಅವರ ಎನ್ಎ ನಿವೇಶನಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತಿಸಿ ಕೊಡಲು ₹3 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದರು. ಯಾದಗಿರಿ ‘ಯುಡಾ’ ಕಚೇರಿಯಲ್ಲಿ ₹3 ಲಕ್ಷ ಲಂಚದ ಹಣ ಪಡೆಯುವಾಗ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.ಲೋಕಾಯುಕ್ತ ರಾಯಚೂರು ಡಿವೈಎಸ್ಪಿ ಶಿವಾನಂದ ಪವಡಶೆಟ್ಟಿ, ಪಿಐ ರವಿ ಪುರುಷೋತ್ತಮ್ ಅವರಿದ್ದ ತಂಡ ದಾಳಿ ಮಾಡಿದೆ.ಸಂತೋಷ
Read the complete story at Prajavani