ಬೀದರ್ನಲ್ಲಿ ‘ಪತಂಗ ಉತ್ಸವ’ ಇಂದಿನಿಂದ
ಬೀದರ್: ಅ. 17, 18ರಂದು ನಗರದ ಬಿವಿಬಿ ಕಾಲೇಜು ಆವರಣದಲ್ಲಿ ‘ಪತಂಗ ಉತ್ಸವ’ ನಡೆಯಲಿದೆ. ಈ ನಿಮಿತ್ತ ಲೋಗೊ ಬಿಡುಗಡೆಗೊಳಿಸಲಾಯಿತು..ಪತಂಗ ಉತ್ಸವದ ಆಯೋಜಕ ಬಾಬು ವಾಲಿ ಮಾತನಾಡಿ, ‘ನಮ್ಮ ಬಾಲ್ಯದ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಿ, ಮತ್ತೆ ಮರುಕಳಿಸುವ ಉದ್ದೇಶದಿಂದ ಈ ಉತ್ಸವ ಆಯೋಜಿಸಲಾಗಿದೆ’ ಎಂದು ತಿಳಿಸಿದರು.ಹೈದರಾಬಾದ್ನ

ಬೀದರ್: ಅ. 17, 18ರಂದು ನಗರದ ಬಿವಿಬಿ ಕಾಲೇಜು ಆವರಣದಲ್ಲಿ ‘ಪತಂಗ ಉತ್ಸವ’ ನಡೆಯಲಿದೆ. ಈ ನಿಮಿತ್ತ ಲೋಗೊ ಬಿಡುಗಡೆಗೊಳಿಸಲಾಯಿತು..ಪತಂಗ ಉತ್ಸವದ ಆಯೋಜಕ ಬಾಬು ವಾಲಿ ಮಾತನಾಡಿ, ‘ನಮ್ಮ ಬಾಲ್ಯದ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಿ, ಮತ್ತೆ ಮರುಕಳಿಸುವ ಉದ್ದೇಶದಿಂದ ಈ ಉತ್ಸವ ಆಯೋಜಿಸಲಾಗಿದೆ’ ಎಂದು ತಿಳಿಸಿದರು.ಹೈದರಾಬಾದ್ನ ಕೋಹಿನೂರ್ ಕೈಟ್ ಕ್ಲಬ್ ಮತ್ತು ಇಂಡಿಯನ್ ಕೈಟ್ ಫ್ಲೆಯರ್ ಕ್ಲಬ್ಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಲಿವೆ. ಸ್ಥಳದಲ್ಲೇ ಗಾಳಿಪಟ ಖರೀದಿಸಿ, ಹಾರಿಸಬಹುದು ಎಂದರು.ಪ್ರಮುಖರಾದ ಸೋಮಶೇಖರ ಪಾಟೀಲ ಗಾದಗಿ, ಡಾ. ರಜನೀಶ್ ವಾಲಿ, ದೀಪಕ್ ವಾಲಿ, ಶರಣಪ್ಪ ಸಿಕೇನಪುರ, ರವಿ ಮೂಲಗೆ, ಪ್ರಕಾಶ ಟೊಣ್ಣೆ, ಅಮರ್ ಏರೋಳಕರ್, ಭಾರತಿ ವಸ್ತ್ರದ, ಪೂರ್ಣಿಮಾ ಜಾರ್ಜ್, ಪ್ರಕಾಶ ಚಂದಾ, ಶಶಿ ಹೊಸಳ್ಳಿ, ಸುರೇಶ ಚನಶೆಟ್ಟಿ, ದಿಗಂಬರ್ ಮಡಿವಾಳ, ವಿಜಯ ಕುಮಾರ ಪಾಟೀಲ ಯರನಳ್ಳಿ, ರಮೇಶ್ ಬಿರಾದಾರ, ಪ್ರಭು ಮಡಿವಾಳ, ಬಿವಿಬಿ ಕಾಲೇಜಿನ ಪ್ರಾಂಶುಪಾಲೆ ದೀಪಾ, ತುಕರಾಮ್, ಅಲ್ಲಮ ಪ್ರಭು, ಶಿವಕುಮಾರ ಸಾಲಿ, ಸಂತೋಷ ಬಾಲೋಡೆ, ದೀಪಾ ಬಾಲೋಡೆ, ಸುನೀಲ ದಳವೆ ಉಪಸ್ಥಿತರಿದ್ದರು.261017-33-515463615