ಸ್ಟಿಂಗ್ ರೂವಾರಿಗಳ ಬಂಧನಕ್ಕೆ ಆಗ್ರಹ – ಡಿಜಿಪಿ ಸಲೀಂಗೆ ದೂರು ನೀಡಿದ ಹೆಚ್ಡಿಕೆ
– ಡಿಜಿಪಿ ಕಚೇರಿ ಮುಂದೆ ಜೆಡಿಎಸ್ ಕಾರ್ಯಕರ್ತರ ಧರಣಿ; ಭಾರಿ ಹೈಡ್ರಾಮಾ – ದಸರಾ ಬಳಿಕ ಬೀದರ್ನಿಂದ ಚಾಮರಾಜನಗರ ವರೆಗೂ ಪ್ರತಿಭಟನೆ ಎಚ್ಚರಿಕೆ ಬೆಂಗಳೂರು: ಸ್ಟಿಂಗ್ ಆಪರೇಷನ್ ರೂವಾರಿಗಳ ಬಂಧನಕ್ಕೆ ಆಗ್ರಹಿಸಿ ಡಿಜಿ-ಐಜಿಪಿ ಸಲೀಂ ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರು ದೂರು ನೀಡಿದ್ದಾರೆ. ನಗರದ ಡಿಜಿಪಿ ಕಚೇರಿ ಮುಂದೆ ಜೆಡಿಎಸ್ ಕಾ

– ಡಿಜಿಪಿ ಕಚೇರಿ ಮುಂದೆ ಜೆಡಿಎಸ್ ಕಾರ್ಯಕರ್ತರ ಧರಣಿ; ಭಾರಿ ಹೈಡ್ರಾಮಾ – ದಸರಾ ಬಳಿಕ ಬೀದರ್ನಿಂದ ಚಾಮರಾಜನಗರ ವರೆಗೂ ಪ್ರತಿಭಟನೆ ಎಚ್ಚರಿಕೆ ಬೆಂಗಳೂರು: ಸ್ಟಿಂಗ್ ಆಪರೇಷನ್ ರೂವಾರಿಗಳ ಬಂಧನಕ್ಕೆ ಆಗ್ರಹಿಸಿ ಡಿಜಿ-ಐಜಿಪಿ ಸಲೀಂ ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರು ದೂರು ನೀಡಿದ್ದಾರೆ. ನಗರದ ಡಿಜಿಪಿ ಕಚೇರಿ ಮುಂದೆ ಜೆಡಿಎಸ್ ಕಾರ್ಯಕರ್ತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತಳ್ಳಾಟ ನೂಕಾಟವಾಗಿ ಭಾರಿ ಹೈಡ್ರಾಮಾ ಸೃಷ್ಟಿಯಾಯಿತು. ಪರಸ್ಪರರು ವಾಗ್ವಾದ ನಡೆಸಿದರು. ಬಳಿಕ ಡಿಜಿಪಿ ಕಚೇರಿಗೆ ಆಗಮಿಸಿದ ಹೆಚ್ಡಿಕೆ ದೂರು ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿದ್ದೇನೆ. ಶಾಸಕ ರೇವಣ್ಣ ಹೊರಗಡೆ ಬಂದ್ರು. ಶಾಸಕರು ಮತ್ತು ಮಾಜಿ ಸಚಿವರು ಎಲ್ಲಾ ಸೇರಿ ಭೇಟಿ ಮಾಡಿದ್ದೇವೆ. ಪೊಲೀಸರು ನಿಷ್ಕ್ರಿಯವಾಗಿರೋ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಹ್ಲಾದ್ ಜೋಶಿ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದ ರೈತರಿಗೆ ಬಿಗ್ ಶಾಕ್ ಪೊಲೀಸ್ ಇಲಾಖೆಯಲ್ಲಿಯೇ ಇದ್ದ ಹಿರಿಯ ಅಧಿಕಾರಿಗೆ ಕೊಲೆ ಬೆದರಿಕೆ ಆಡಿಯೋ ರಾಜ್ಯದಲ್ಲಿ ಪ್ರಚಾರ ಆಗಿದೆ. ಪೊಲೀಸರು ಉತ್ತಮ ರೀತಿಯಲ್ಲಿ ಕೆಲಸ ಮಾಡ್ತಾರೆ ಅಂತ ನಿರೀಕ್ಷೆಯಿತ್ತು ಎಂದು ಮಾತನಾಡಿದರು. ಪುನಃ ಹಬ್ಬದ ಬಳಿಕ ರಾಜ್ಯ ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಪ್ರತಿಭಟನೆ ಮಾಡ್ತೀವಿ. ಕೇಂದ್ರ ಸರ್ಕಾರದ ಮುಂದೆ ಇದುವರೆಗೂ ಯಾರು ಬಂದಿಲ್ಲ. ಬೀದರ್ನಿಂದ ಚಾಮರಾಜನಗರದ ವರೆಗೂ ಪ್ರತಿಭಟನೆ ಮಾಡ್ತೀವಿ. ಡಿಜಿಪಿ ಅವರು ಕೇವಲ ಮೌನವಾಗಿ ದೂರು ಸ್ವೀಕಾರ ಮಾಡಿದ್ದಾರೆ ಎಂದು ಟೀಕಿಸಿದರು. ಡಿಜಿಪಿ ಭೇಟಿ ಬಳಿಕ ರೇವಣ್ಣ ಪ್ರತಿಕ್ರಿಯಿಸಿ, ಡಿಜಿಪಿಯನ್ನು ಭೇಟಿಯಾಗಿ ದೂರು ನೀಡಿದ್ದೀವಿ. ಕುಮಾರಸ್ವಾಮಿಯವರು ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡ್ತಾರೆ. ಸಿದ್ದರಾಮಯ್ಯ ವರ್ಚಸ್ಸು ಹಾಳು ಮಾಡಲು ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಭಾಗಿಯಾಗಿಲ್ಲ. ಸಿದ್ದರಾಮಯ್ಯ ಅವರ ಹೆಸರನ್ನು ಹೇಳು ಅಂತ ಹೇಳಿ ಪ್ರಶ್ನೆ ಮಾಡಿದ್ದಾನೆ. ಇದನ್ನ ನೋಡಿ ಸಿದ್ದರಾಮಯ್ಯಗೆ ರಕ್ತ ಕುದಿಯುತ್ತಾ ಇಲ್ವಾ…? ಏನಾಯ್ತು ನಿಮಗೆ? ನಿಮ್ಮ ಕಾರ್ಯಕ್ರಮದ ಬಗ್ಗೆ ರಾಜಕೀಯ ವಿರೋಧವಾಗಿಯೂ ಕೆಲಸ ಮಾಡಿದ್ದೀನಿ. ಈ ಘಟನೆ ನಿಮ್ಮ ಒಬ್ಬರ ಪ್ರಶ್ನೆ ಅಲ್ಲ. ಇವತ್ತು ರಾಜ್ಯದ ಮುಖ್ಯಮಂತ್ರಿ ಹಲವರ ಸ್ಟಿಂಗ್ ಆಗಿದೆ ಅಂತ ಕ್ಯಾಬಿನೆಟ್ ಅಲ್ಲಿ ಹೇಳಿದ್ದಾರೆ. ಇಷ್ಟೆಲ್ಲಾ ಆದ್ರೂ ಗೃಹಸಚಿವ ರಾಜಾರೋಷ ತೋರಿಸ್ತಾ ಇದ್ದರೆ, ಪೊಲೀಸರಿಂದ ನಾವೇನು ನಿರೀಕ್ಷೆ ಮಾಡೋಕೆ ಆಗ್ತಾ ಇಲ್ಲ ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: 2023ರಲ್ಲಿ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಆಗಿದೆ – ಹೆಚ್ಡಿಕೆ ಹೊಸ ಬಾಂಬ್ ದೂರು ಕೊಟ್ಟ ಬಳಿಕವೂ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಮುಂದುವರಿದಿದೆ. ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ್ದಾರೆ.