2023ರಲ್ಲಿ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಆಗಿದೆ – ಹೆಚ್ಡಿಕೆ ಹೊಸ ಬಾಂಬ್
ಬೆಂಗಳೂರು: ಕರ್ನಾಟಕದ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಬಿರುಗಾಳಿ ಎಬ್ಬಿಸಿದೆ. ಮಾಜಿ ಮುಖ್ಯಮಂತ್ರಿ ಇಟ್ಕೊಂಡೇ ಸ್ಟಿಂಗ್ ಮಾಡಿದ್ದಾರೆ. 2011 ಅಲ್ಲ, ಸಿದ್ದರಾಮಯ್ಯ ಸ್ಟಿಂಗ್ 2023ರಲ್ಲಿ ಆಗಿದೆ ಎಂದು ಹೆಚ್ಡಿ ಕುಮಾರಸ್ವಾಮಿ (H D Kumarswamy ) ಹೊಸ ಬಾಂಬ್ ಸಿಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಎಂ ಡಿಕೆ ಶಿವಕುಮಾರ್ ಭೇಟಿಯಾದ ಬಗ್ಗೆ ಪ್ರತಿಕ್ರ

ಬೆಂಗಳೂರು: ಕರ್ನಾಟಕದ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಬಿರುಗಾಳಿ ಎಬ್ಬಿಸಿದೆ. ಮಾಜಿ ಮುಖ್ಯಮಂತ್ರಿ ಇಟ್ಕೊಂಡೇ ಸ್ಟಿಂಗ್ ಮಾಡಿದ್ದಾರೆ. 2011 ಅಲ್ಲ, ಸಿದ್ದರಾಮಯ್ಯ ಸ್ಟಿಂಗ್ 2023ರಲ್ಲಿ ಆಗಿದೆ ಎಂದು ಹೆಚ್ಡಿ ಕುಮಾರಸ್ವಾಮಿ (H D Kumarswamy ) ಹೊಸ ಬಾಂಬ್ ಸಿಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಎಂ ಡಿಕೆ ಶಿವಕುಮಾರ್ ಭೇಟಿಯಾದ ಬಗ್ಗೆ ಪ್ರತಿಕ್ರಿಯಿಸಿದ ವೇಳೆ ಹೊಸ ಬಾಂಬ್ ಸಿಡಿಸಿದ್ದಾರೆ. ಇದೀಗ ಆ ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು ಎಂದು ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯಪಾಲರ ಭೇಟಿಯ ನಂತರ ಮಾತನಾಡಿದ ಅವರು, ರಾಜ್ಯಕ್ಕೆ ಉತ್ತಮ ರಾಜ್ಯಪಾಲರು ಸಿಕ್ಕಿದ್ದಾರೆ. ನಮ್ಮ ಪಕ್ಷದ ಶಾಸಕರ ಮಿತ್ರರು ಗೌರವಾನ್ವಿತ ಅವರನ್ನು ಭೇಟಿ ಮಾಡಿದ್ದೇವೆ. ನಿನ್ನೆ ಅಧಿಕಾರ ಸ್ವೀಕಾರ ಮಾಡಿದ ರಾಜ್ಯಪಾಲರಿಗೆ ಶುಭ ಕೋರಿದ್ದೇವೆ. ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆ ಮಾಡಲಿಲ್ಲ, ಬದಲಿಗೆ ಅವರಿಗೆ ಮನವಿ ಮಾಡಿದ್ದೇವೆ. ಮೊದಲು ಆಡಳಿತದಲ್ಲಿ ದೇಶಕ್ಕೆ ಕರ್ನಾಟಕ ಮಾದರಿಯಾಗಿತ್ತು. ಆದರೆ, ಈಗ ರಾಜ್ಯ ದಾರಿ ತಪ್ಪಿದೆ .ಮುಂದೆ ಇದನ್ನೆಲ್ಲ ಗಮನಿಸಿ ಸರಿ ದಾರಿಗೆ ತರಲು ಮನವಿ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯಾದ್ಯಂತ ಸ್ವೀಟ್ಸ್ ಶಾಪ್ಗಳ ಮೇಲೆ ದಾಳಿ – 15 ಸ್ವೀಟ್ಸ್ ತಯಾರಿಕಾ ಘಟಕಗಳಿಗೆ ನೋಟಿಸ್ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಇವತ್ತು ಪಕ್ಷದ ಮುಖಂಡರ ಸಭೆ ಕರೆದಿದ್ದೇವೆ. ಮುಂದಿನ ಹೋರಾಟ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ನಾವೇನು ಯಾರ ಜತೆಗೂ ವೈಯಕ್ತಿಕ ದ್ವೇಷ ಇಟ್ಟುಕೊಂಡಿಲ್ಲ. ಸ್ಟಿಂಗ್ ಆಪರೇಷನ್ ಚರ್ಚೆ ಮೂಲಕ ಯಾರಿಗೂ ಗೌರವ ಬರುವ ಸಂದರ್ಭ ಇಲ್ಲ. ಇದು ಮುಂದೆ ಸರಿಯಾಗಬೇಕು. ವಾತಾವರಣ ಸರಿಪಡಿಸುವಲ್ಲಿ ನಮ್ಮದೂ ಜವಾಬ್ದಾರಿ ಇದೆ. ಸರ್ಕಾರ ಕಾನೂನು ಬಾಹಿರ ಮತ್ತು ದುಡ್ಡು ಹೊಡೆಯುವ ದಂಧೆ ಇಟ್ಟುಕೊಂಡಿದೆ ಎಂದು ಆರೋಪಿಸಿದರು. ಸಿಎಂ ಮತ್ತು ಸಿದ್ದರಾಮಯ್ಯ ಅವರ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ಭೇಟಿ ತಪ್ಪಿಲ್ಲ. ಹಾಲಿ ಮತ್ತು ಮಾಜಿ ಸಿಎಂಗಳು ಚರ್ಚೆ ಮಾಡಿದ್ದಾರೆ ಅಷ್ಟೇ. ಮಾಜಿ ಸಿಎಂ ಇಟ್ಟುಕೊಂಡೇ ಸ್ಟಿಂಗ್ ಮಾಡಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಕೂಡ ದೂರು ನೀಡಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ 2023 ರಲ್ಲಿ ಆಗಿದೆ, ಅದು 2011 ರದ್ದು ಎಂದು ನಾನು ಅಂದುಕೊಂಡಿದ್ದೆ. ಹಲವು ಸ್ನೇಹಿತರು 2023ರದ್ದೇ ಈ ಸ್ಟಿಂಗ್ ಆಪರೇಷನ್ ಅಂದಿದ್ದಾರೆ. ಕಾನೂನಾತ್ಮಕವಾಗಿ ಮುಂದೇನಾಗುತ್ತೋ ನೋಡಬೇಕಿದೆ ಎಂದು ಹೇಳಿದರು.ಇದನ್ನೂ ಓದಿ: ಕನ್ನಡಕ್ಕೆ ಹಿಟ್ ಸಾಂಗ್ ನೀಡಿದ್ದ ಹಿರಿಯ ಸಂಗೀತ ನಿರ್ದೇಶಕ ದೇವ ಇನ್ನಿಲ್ಲ