2026ರ ಅ.17: ರೈತರಿಂದ ‘ಹುಬ್ಬಳ್ಳಿ ಚಲೋ’ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು
ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ಮುಖ್ಯಮಂತ್ರಿ ಮನವಿಗೂ ಓಗೊಡದ ರೈತರು: ಭಾನುವಾರ ಮತ್ತೆ ಹುಬ್ಬಳ್ಳಿಯತ್ತ ಪಾದಯಾತ್ರೆನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಹೋರಾಟ ನಿಲ್ಲಿಸಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಡಿದ ಮನವಿಗೂ ರೈತರು ಓಗೊಡಲಿಲ್ಲ. ಭಾನುವಾರ ಮತ್ತೆ ಪಾದಯಾತ್ರೆ ಆರಂ

ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ಮುಖ್ಯಮಂತ್ರಿ ಮನವಿಗೂ ಓಗೊಡದ ರೈತರು: ಭಾನುವಾರ ಮತ್ತೆ ಹುಬ್ಬಳ್ಳಿಯತ್ತ ಪಾದಯಾತ್ರೆನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಹೋರಾಟ ನಿಲ್ಲಿಸಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಡಿದ ಮನವಿಗೂ ರೈತರು ಓಗೊಡಲಿಲ್ಲ. ಭಾನುವಾರ ಮತ್ತೆ ಪಾದಯಾತ್ರೆ ಆರಂಭಿಸುವುದಾಗಿ ಘೋಷಿಸಿದರು.ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ರೈತರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ‘ನಿಮ್ಮ ಸಮಸ್ಯೆಗಳು ವಿಧಾನಸೌಧಕ್ಕೂ ಕೇಳಿಸಿವೆ ಸಂಸತ್ ಭವನಕ್ಕೂ ಮುಟ್ಟಿವೆ. ನಿಮ್ಮ ಬಗ್ಗೆ ನನಗೆ ಕಾಳಜಿ ಇದೆ. ನೀವು ಕರೆಯದಿದ್ದರೂ ನಾನಾಗೇ ಇಲ್ಲಿಗೆ ಬಂದಿದ್ದೇನೆ. ಆದರೆ, ನಾನೊಬ್ಬನೇ ಇಲ್ಲಿ ಬಂದು ಬಗೆಹರಿಸುವಂಥ ಸಮಸ್ಯೆಗಳಲ್ಲ ಇವು. ಸಮಯಾವಕಾಶ ಬೇಕಾಗುತ್ತದೆ’ ಎಂದರು.ಮುಖ್ಯಮಂತ್ರಿ ಮನವಿಗೂ ಓಗೊಡದ ರೈತರು: ಭಾನುವಾರ ಮತ್ತೆ ಹುಬ್ಬಳ್ಳಿಯತ್ತ ಪಾದಯಾತ್ರೆದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿಯ ಅತ್ಯಾಚಾರ, ಕೊಲೆ; ಅಪರಾಧಿಗೆ ಮರಣದಂಡನೆದಸರಾದಲ್ಲಿ ಬಲೂನ್ ಮಾರಾಟ ಮಾಡಲು ಬಂದಿದ್ದ ಹತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಪ್ರಕರಣದ ಅಪರಾಧಿ ಸಿದ್ದಲಿಂಗಪುರದ ನಿವಾಸಿ ಕಾರ್ತಿಕ್ (31)ಗೆ ಪೋಕ್ಸೋ ವಿಶೇಷ ನ್ಯಾಯಾಲಯವು ಶನಿವಾರ ಮರಣದಂಡನೆ ವಿಧಿಸಿ ಆದೇಶಿಸಿದೆ.ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿಯ ಅತ್ಯಾಚಾರ, ಕೊಲೆ; ಅಪರಾಧಿಗೆ ಮರಣದಂಡನೆದೆಹಲಿಯಲ್ಲಿ ಪ್ರತಿಭಟನೆ ನೆಪದಲ್ಲಿ ಹಿಂದೂ ಹಬ್ಬಗಳಿಗೆ ಅಡ್ಡಿ: ವಿಶ್ವ ಹಿಂದೂ ಪರಿಷತ್ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ನೆಪದಲ್ಲಿ ವ್ಯಾಪಾರಕ್ಕೆ ಅಡ್ಡಿಪಡಿಸುವ, ಕಾರ್ಮಿಕರ ದಿನಗೂಲಿ ಕಸಿಯುವ ಮತ್ತು ಬೀದಿ ವ್ಯಾಪಾರಿಗಳು, ಆಟೊ ಚಾಲಕರು ಸೇರಿದಂತೆ ವಿವಿಧ ವರ್ಗದ ಜನರ ಜೀವನೋಪಾಯಕ್ಕೆ ಧಕ್ಕೆ ತರುವ ಸಂಚು ನಡೆಯುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಶನಿವಾರ ಆರೋಪಿಸಿದೆ.ದೆಹಲಿಯಲ್ಲಿ ಪ್ರತಿಭಟನೆ ನೆಪದಲ್ಲಿ ಹಿಂದೂ ಹಬ್ಬಗಳಿಗೆ ಅಡ್ಡಿ:ವಿಶ್ವ ಹಿಂದೂ ಪರಿಷತ್ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು ಮಂಜೂರುಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ ಎಂದು ವರದಿಯಾಗಿದೆ.‘ಶಾಂತಿ ಪಾಲನಾ ಒಪ್ಪಂದ’ಕ್ಕೆ ಸಹಿ ಹಾಕುವಂತೆ ದೀಪ್ಕೆಗೆ ಸೂಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು ಮಂಜೂರುಟೆಸ್ಲಾದ ಹಾರುವ ಕಾರು: ತಂತ್ರಜ್ಞಾನದ ಕಸರತ್ತೋ, ಹೊಸ ಕ್ರಾಂತಿಯೋ?ಗಾಳಿಯಲ್ಲಿ ಹಾರುವ ಸಾಮರ್ಥ್ಯ ಸೇರಿದಂತೆ ಹಲವು ವಿಶೇಷ ತಾಂತ್ರಿಕ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ರೋಡ್ಸ್ಟರ್ ಸ್ಪೋರ್ಟ್ಸ್ ಕಾರನ್ನು ಟೆಸ್ಲಾ ಅನಾವರಣಗೊಳಿಸಿದೆ. ಆದರೆ, ಈ ಕಾರು ರಸ್ತೆಗೆ ಇಳಿಯಲು ಇನ್ನು ಹಲವು ವರ್ಷಗಳೇ ಬೇಕಾಗಬಹುದು.ಟೆಸ್ಲಾದ ಹಾರುವ ಕಾರು: ತಂತ್ರಜ್ಞಾನದ ಕಸರತ್ತೋ, ಹೊಸ ಕ್ರಾಂತಿಯೋ?11ನೇ ತರಗತಿ ವಿದ್ಯಾರ್ಥಿಯಿಂದ ಸಹಪಾಠಿ ಮೇಲೆ ಆಟಿಕೆ ಬಂದೂಕಿನಿಂದ ಮನಸೋಇಚ್ಛೆ ಹಲ್ಲೆರಾಜಸ್ಥಾನದ ಕೋಟಾದ ‘ಅಲೆನ್’ ಕೋಚಿಂಗ್ ಕೇಂದ್ರದಲ್ಲಿ ಉತ್ತರ ಪ್ರದೇಶದ ಜೆಇಇ ಆಕಾಂಕ್ಷಿಯೊಬ್ಬ, ಬಿಹಾರ ಮೂಲದ 16 ವರ್ಷದ ಸಹಪಾಠಿಯ ಮೇಲೆ ಆಟಿಕೆ ಬಂದೂಕಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ.ಹಲ್ಲೆಯಿಂದಾಗಿ ವಿದ್ಯಾರ್ಥಿಯ ತಲೆ, ಕೈ ಸೇರಿ ಹಲವೆಡೆ ಗಂಭೀರ ಗಾಯಗಳಾಗಿವೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.11ನೇ ತರಗತಿ ವಿದ್ಯಾರ್ಥಿಯಿಂದ ಸಹಪಾಠಿ ಮೇಲೆ ಆಟಿಕೆ ಬಂದೂಕಿನಿಂದ ಮನಸೋಇಚ್ಛೆ ಹಲ್ಲೆಅತ್ಯಲ್ಪ ಪರಿಹಾರ ಘೋಷಣೆಗೆ ಆಕ್ರೋಶ: ಮುಖ್ಯಮಂತ್ರಿಗೇ ₹ 5,000 ಕಳುಹಿಸಿದ ರೈತಬರಪೀಡಿತ ಪ್ರದೇಶಗಳ ರೈತರಿಗೆ ಮಧ್ಯಂತರ ಪರಿಹಾರವಾಗಿ ಅತ್ಯಲ್ಪ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಘೊಷಿಸಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.ಧಾರಾಶಿವ ಜಿಲ್ಲೆಯ ಸೋಯಾಬೀನ್ ಬೆಳೆಗಾರನೊಬ್ಬ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ₹ 5,000 ಮನಿ ಆರ್ಡರ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.ಅತ್ಯಲ್ಪ ಪರಿಹಾರ ಘೋಷಣೆಗೆ ಆಕ್ರೋಶ: ಮುಖ್ಯಮಂತ್ರಿಗೇ ₹ 5,000 ಕಳುಹಿಸಿದ ರೈತಮಣಿಪುರಕ್ಕೆ ಇಷ್ಟು ಭದ್ರತೆ ಒದಗಿಸಿದ್ದರೆ ಜನಾಂಗೀಯ ಸಂಘರ್ಷ ತಪ್ಪುತ್ತಿತ್ತು: ಘೋಷ್ಚುನಾವಣಾ ಆಯೋಗದ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ಭಾರಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಆದರೆ, ವರ್ಷಗಳಿಂದ ಜನಾಂಗೀಯ ಸಂಘರ್ಷದಿಂದ ನಲುಗಿರುವ ಮಣಿಪುರದಲ್ಲಿ ಇಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಿಲ್ಲವೇಕೆ ಎಂದು ಮಮತಾ ಬ್ಯಾನರ್ಜಿ ಬಣದ ಟಿಎಂಸಿ ಶಾಸಕ ಕುನಾಲ್ ಘೋಷ್ ಶನಿವಾರ ಕೇಳಿದ್ದಾರೆ. ಮಣಿಪುರಕ್ಕೆ ಇಷ್ಟು ಭದ್ರತೆ ಒದಗಿಸಿದ್ದರೆ ಜನಾಂಗೀಯ ಸಂಘರ್ಷ ತಪ್ಪುತ್ತಿತ್ತು: ಘೋಷ್ನಾನಾ ಪಾಟೇಕರ್ OR ಸ್ಮಿತ್ ಮಚ್ಚರ್?: ಮುಂಬೈ ರೈಲು ಮೇಲ್ಸೇತುವೆಗೆ ಹೆಸರಿಡುವ ವಿವಾದಮುಂಬೈನ ವಿದ್ಯಾವಿಹಾರ ರೈಲು ನಿಲ್ದಾಣದ ಬಳಿ ನೂತನವಾಗಿ ನಿರ್ಮಿಸಲಾದ ಪೂರ್ವ-ಪಶ್ಚಿಮ ವಿದ್ಯಾವಿಹಾರ ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನವೇ ಅದಕ್ಕೆ ಹೆಸರಿಡುವ ವಿಚಾರವಾಗಿ ವಿವಾದ ಭುಗಿಲೆದ್ದಿದೆ.ನಾನಾ ಪಾಟೇಕರ್ OR ಸ್ಮಿತ್ ಮಚ್ಚರ್?: ಮುಂಬೈ ರೈಲು ಮೇಲ್ಸೇತುವೆಗೆ ಹೆಸರಿಡುವ ವಿವಾದಸಿಜೆಪಿ ಪ್ರತಿಭಟನೆ ಬೆನ್ನಲ್ಲೇ ಗಾಂಧಿ ಮರಿಮೊಮ್ಮಗ ತುಷಾರ್ರಿಂದ ಸತ್ಯಾಗ್ರಹಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೇಶದಾದ್ಯಂತ ವಿಪಕ್ಷಗಳು ಹಾಗೂ 'ಕಾಕ್ರೋಜ್ ಜನತಾ ಪಾರ್ಟಿ' ನಡೆಸುತ್ತಿರುವ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಅವರು ನವೆಂಬರ್ 1ರಂದು ಮುಂಬೈನಲ್ಲಿ ಸತ್ಯಾಗ್ರಹ ನಡೆಸಲಿದ್ದಾರೆ.ಸಿಜೆಪಿ ಪ್ರತಿಭಟನೆ ಬೆನ್ನಲ್ಲೇ ಗಾಂಧಿ ಮರಿಮೊಮ್ಮಗ ತುಷಾರ್ರಿಂದ ಸತ್ಯಾಗ್ರಹ