ಎತ್ತಿನಹೊಳೆ ಯೋಜನೆ ಭೂಸ್ವಾಧೀನ ಪ್ರಕ್ರಿಯೆ ಡಿಸೆಂಬರ್ ಒಳಗೆ ಪೂರ್ಣ: ಜಿಲ್ಲಾಧಿಕಾರಿ
ಚಿಂತಾಮಣಿ: ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಸುವ ಯೋಜನೆಯ ಮೂರು ಪ್ಯಾಕೇಜ್ಗಳ ಕಾಮಗಾರಿಗೆ ಡಿಸೆಂಬರ್ ಒಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಪ್ರತಿ ತಾಲ್ಲೂಕಿನಲ್ಲಿ 30-40 ಕೆರೆಗಳನ್ನು ಶಾಶ್ವತವಾಗಿ ತುಂಬಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.ತಾಲ್ಲೂಕಿನ ಕನಿಶೆಟ್ಟಿಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿ

ಚಿಂತಾಮಣಿ: ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಸುವ ಯೋಜನೆಯ ಮೂರು ಪ್ಯಾಕೇಜ್ಗಳ ಕಾಮಗಾರಿಗೆ ಡಿಸೆಂಬರ್ ಒಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಪ್ರತಿ ತಾಲ್ಲೂಕಿನಲ್ಲಿ 30-40 ಕೆರೆಗಳನ್ನು ಶಾಶ್ವತವಾಗಿ ತುಂಬಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.ತಾಲ್ಲೂಕಿನ ಕನಿಶೆಟ್ಟಿಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರದ ಕುರಿತು ಗುರುವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.ಮೊದಲನೇ ಪ್ಯಾಕೇಜ್ನಲ್ಲಿ ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರ ಪೈಪ್ಲೈನ್, ಎರಡನೇ ಪ್ಯಾಕೇಜ್ನಲ್ಲಿ ಗುಡಿಬಂಡೆ– ಬಾಗೇಪಲ್ಲಿ ಇನ್ನೊಂದು ಲೈನ್, ಶಿಡ್ಲಘಟ್ಟ ತಾಲ್ಲೂಕು, ಮೂರನೇ ಪ್ಯಾಞಕೇಜ್ನಲ್ಲಿ ಶಿಡ್ಲಘಟ್ಟದಿಂದ ಚಿಂತಾಮಣಿ, ಶ್ರೀನಿವಾಸಪುರ ತಾಲ್ಲೂಕು. ಈ ಮೂರು ಪ್ಯಾಕೇಜ್ಗಳ ಭೂಸ್ವಾಧೀನ ಪ್ರಕ್ರಿಯೆ ಶೀಘ್ರವೇ ಪ್ರಾರಂಭವಾಗಲಿದೆ. ಭೂಸ್ವಾಧೀನವಾದ ಜಮೀನುಗಳ 10 ಅಡಿ ಆಳದಲ್ಲಿ ಪೈಪ್ ಅಳವಡಿಸಲಾಗುವುದು ಎಂದರು.ಭೂಸ್ವಾಧೀನವಾದ ಜಮೀನುಗಳಲ್ಲಿ ರೈತರು ಎಂದಿನಂತೆ ಕೃಷಿ ಮಾಡಿಕೊಳ್ಳಬಹುದು. ರೈತರಿಗೆ ಪರಿಹಾರವೂ ದೊರೆಯುತ್ತದೆ. ಆದರೆ ಮಾಲೀಕತ್ವ ಮಾತ್ರ ವಿಶ್ವೇಶ್ವರಯ್ಯ ನಿಗಮದ್ದಾಗಿರುತ್ತದೆ. ಭೂಮಿಯ ಒಳಗಡೆ ಪೈಪ್ಗಳನ್ನು ಅಳವಡಿಸುವುದರಿಂದ ನೀರು ವ್ಯರ್ಥವಾಗುವುದಿಲ್ಲ. ಅಂತರ್ಜಲ ವೃದ್ಧಿ ಮತ್ತು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ರೈತರು ಸಹಕರಿಸಬೇಕು. ಕೆರೆಗಳನ್ನು ತುಂಬಿಸಿ ಕೈಗಾರಿಕೆ ಪ್ರದೇಶಗಳಿಗೂ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.ನರಸಾಪುರದಲ್ಲಿ ಇರುವಂತೆ ಎಸ್ಟಿಪಿ ಪ್ಲಾಂಟ್ ನಿರ್ಮಿಸಿ ಬಳಕೆಯಾದ ನೀರನ್ನು ಶುದ್ಧೀಕರಿಸಿ ಕೈಗಾರಿಕೆಗಳಿಗೆ ಬಳಸಿಕೊಳ್ಳಲು ಸಹ ನಕ್ಷೆ ತಯಾರಿಸಲಾಗಿದೆ. ತಾಲ್ಲೂಕಿನಲ್ಲಿ ಬೃಹತ್ ಕೈಗಾರಿಕೆಗಳನ್ನು ತಂದು ಜನರಿಗೆ ಉದ್ಯೋಗ ಒದಗಿಸಲಾಗುವುದು. ಸ್ಥಳೀಯರಿಗೆ ಅದರಲ್ಲೂ ಭೂಮಿ ಕಳೆದುಕೊಂಡಿರುವ ಕನಿಶೆಟ್ಟಹಳ್ಳಿ ಹಾಗೂ ಸುತ್ತಮುತ್ತಲ ಐದು ಹಳ್ಳಿಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.ಕೈಗಾರಿಕೆಗಳಿಂದ ಆಗುತ್ತಿರುವ ಪರಿಸರ, ವಾಯು ಹಾಗೂ ಶಬ್ದ ಮಾಲಿನ್ಯ, ನೀರು ಪೂರೈಕೆ ಕುರಿತ ಸಮಸ್ಯೆ ಕುರಿತು ಚರ್ಚಿಸಲಾಯಿತು. ಪರಿಹಾರಕ್ಕಾಗಿ ರೈತರು ನೀಡುವ ಸಲಹೆಗಳನ್ನು ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು. ಕೈಗಾರಿಕೆಗಳು ಪರಿಸರಸ್ನೇಹಿ ಕ್ರಮ ಕೈಗೊಳ್ಳುವುದನ್ನು ಕಡ್ಡಾಯಗೊಳಿಸಿ, ವಶಪಡಿಸಿಕೊಳ್ಳಲಾದ ಭೂಮಿಯಲ್ಲಿ ಶೇ 20ರಷ್ಟನ್ನು ಹಸಿರು ವಲಯವನ್ನಾಗಿ ಉಳಿಸಿಕೊಳ್ಳಲಾಗಿದೆ. ಪರಿಸರಕ್ಕೆ ಎಲ್ಲಿಲ್ಲದ ಒತ್ತು ಮತ್ತು ಕಾಳಜಿಯನ್ನು ಯೋಜನೆಯಲ್ಲಿ ರೂಪಿಸಲಾಗಿದೆ ಎಂದು ಹೇಳಿದರು.ಕೈಗಾರಿಕಾ ಪ್ರದೇಶಕ್ಕಾಗಿ ಭೂಮಿ ಕೊಟ್ಟಿರುವ ಗ್ರಾಮಗಳ ಜನರಿಗೆ ಗ್ರಾಮ ಪಂಚಾಯಿತಿ ಹಂತದಲ್ಲೇ ಉದ್ಯೋಗ ಮೇಳ ಮಾಡಿ ಉದ್ಯೋಗ ನೀಡುವಂತೆ ಕ್ರಮ ಕೈಗೊಳ್ಳಲು ಕೆಐಎಡಿಬಿ ಅಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕು, ಜಿಲ್ಲಾಡಳಿತವು ಸಹ ಗ್ರಾಮಗಳ ಜನರಿಗೆ ಸೇವೆ ಒದಗಿಸಲು ಸಿದ್ಧವಾಗಿರುತ್ತದೆ ಎಂದರು.ತಹಶೀಲ್ದಾರ್ ಸುದರ್ಶನ ಯಾದವ್, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಮೀನಾಕ್ಷಿ, ಕಾರ್ಯಪಾಲಕ ಎಂಜಿನಿಯರ್ ಕೆ.ಆದರ್ಶ, ಎಇಇ ಅಖಿಲೇಶ್, ಸಹಾಯಕ ಎಂಜಿನಿಯರ್ ಚಲುವರಾಜ್, ಉಮೇಶ್ ಭಾಗವಹಿಸಿದ್ದರು.261017-16-1304467416