ಗುರುಗ್ರಾಮ್ನಲ್ಲಿ ಟೆಕ್ಕಿ ದಂಪತಿ ನಿಗೂಢ ಸಾವು
ಚಂಡೀಗಢ: ಗುರುಗ್ರಾಮ್ನಲ್ಲಿ (Gurugram) ಟೆಕ್ಕಿ ದಂಪತಿ ನಿಗೂಢ ಸಾವನ್ನಪ್ಪಿದ್ದಾರೆ. ಪತ್ನಿಯನ್ನು ಕೊಂದು ಪತಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೇರಳ ಮೂಲದ ಮೊಹಮ್ಮದ್ ಅಸ್ಲಂ (30), ಫರ್ಹಾನಾ (28) ಮೃತ ದಂಪತಿ. ಗುರುಗ್ರಾಮ್ನ ಸೆಕ್ಟರ್ 68ರ M3M ಮರೀನಾ ಅಪಾರ್ಟ್ಮೆಂಟ್ನಲ್ಲಿ ಬುಧವಾರ ಘಟನೆ ನಡೆದಿದೆ. ಇದನ್ನೂ ಓದಿ: ಮೂರು ಮಕ್ಕಳು ಸೇರಿ

ಚಂಡೀಗಢ: ಗುರುಗ್ರಾಮ್ನಲ್ಲಿ (Gurugram) ಟೆಕ್ಕಿ ದಂಪತಿ ನಿಗೂಢ ಸಾವನ್ನಪ್ಪಿದ್ದಾರೆ. ಪತ್ನಿಯನ್ನು ಕೊಂದು ಪತಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೇರಳ ಮೂಲದ ಮೊಹಮ್ಮದ್ ಅಸ್ಲಂ (30), ಫರ್ಹಾನಾ (28) ಮೃತ ದಂಪತಿ. ಗುರುಗ್ರಾಮ್ನ ಸೆಕ್ಟರ್ 68ರ M3M ಮರೀನಾ ಅಪಾರ್ಟ್ಮೆಂಟ್ನಲ್ಲಿ ಬುಧವಾರ ಘಟನೆ ನಡೆದಿದೆ. ಇದನ್ನೂ ಓದಿ: ಮೂರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವು – ನೂಡಲ್ಸ್ ತಿಂದು ಸಾವನ್ನಪ್ಪಿರುವ ಶಂಕೆ! ಫರ್ಹಾನಾ ಕುತ್ತಿಗೆಯಲ್ಲಿ ಗಾಯದ ಗುರುತು, ನೇಣುಬಿಗಿದ ಸ್ಥಿತಿಯಲ್ಲಿ ಅಸ್ಲಂ ಶವ ಪತ್ತೆಯಾಗಿದೆ. ಘಟನೆಗೂ ಮುನ್ನ ಅಸ್ಲಂ ತಾನು ಕೆಲಸ ಮಾಡುತ್ತಿದ್ದ ಕಚೇರಿಗೆ ಇ-ಮೇಲ್ ಕಳುಹಿಸಿದ್ದ. ‘ನಾವು ಈ ಜಗತ್ತನ್ನು ತೊರೆಯುತ್ತಿದ್ದೇವೆ’ ಎಂದು ಸಂದೇಶದಲ್ಲಿ ತಿಳಿಸಿದ್ದ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನಾ ಸ್ಥಳದಿಂದ ಪೊಲೀಸರು ಮೂರು ಲ್ಯಾಪ್ಟಾಪ್ಗಳು, ಎರಡು ಮೊಬೈಲ್ ಫೋನ್ಗಳು, ಒಂದು ಹಗ್ಗ, ಒಂದು ಡೈರಿ, ಒಂದು ಕತ್ತರಿ ಮತ್ತು ಒಂದು ಪೆನ್ ಡ್ರೈವ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಪತಿಯನ್ನು ಕೊಂದು ಮೈಮೇಲೆ ಹಲ್ಲಿಲ್ಲದ ಹಾವು ಬಿಟ್ಟಿದ್ದ ಪತ್ನಿ, ಪ್ರಿಯಕರನಿಗೆ ಮರಣದಂಡನೆ! ಪ್ರಾಥಮಿಕ ತನಿಖಾ ಅಂಶಗಳ ಆಧಾರದ ಮೇಲೆ, ಅಸ್ಲಾಂ ಫರ್ಹಾನಾಳನ್ನು ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 103(1)ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.