ರಷ್ಯಾದಿಂದ ತೈಲ ಖರೀದಿ: ನಿರ್ಬಂಧಗಳಿಗೆ ವಿನಾಯಿತಿ ಘೋಷಿಸಿದ ಟ್ರಂಪ್
ವಾಷಿಂಗ್ಟನ್: ತೈಲ ಹಾಗೂ ಅನಿಲ ಖರೀದಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರಷ್ಯಾದ ಮೇಲೆ ವಿಧಿಸಿದ್ದ ಕಠಿಣ ನಿರ್ಬಂಧಗಳಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿನಾಯಿತಿ ಘೋಷಿಸಿದ್ದಾರೆ. 'ಲಿಂಡ್ಸೆ ಒ ಗ್ರಹಾಂ’ ಕಾನೂನಿನ ಅಡಿಯಲ್ಲಿ ವಿಧಿಸಲಾಗಿದ್ದ ಕಠಿಣ ನಿರ್ಬಂಧ, ನಿಯಮ ಹಾಗೂ ಸುಂಕಗಳಿಂದ ವಿನಾಯಿತಿ ನೀಡುವುದಾಗಿ ಟ್ರಂಪ

ವಾಷಿಂಗ್ಟನ್: ತೈಲ ಹಾಗೂ ಅನಿಲ ಖರೀದಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರಷ್ಯಾದ ಮೇಲೆ ವಿಧಿಸಿದ್ದ ಕಠಿಣ ನಿರ್ಬಂಧಗಳಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿನಾಯಿತಿ ಘೋಷಿಸಿದ್ದಾರೆ. 'ಲಿಂಡ್ಸೆ ಒ ಗ್ರಹಾಂ’ ಕಾನೂನಿನ ಅಡಿಯಲ್ಲಿ ವಿಧಿಸಲಾಗಿದ್ದ ಕಠಿಣ ನಿರ್ಬಂಧ, ನಿಯಮ ಹಾಗೂ ಸುಂಕಗಳಿಂದ ವಿನಾಯಿತಿ ನೀಡುವುದಾಗಿ ಟ್ರಂಪ್ ಪ್ರಕಟಿಸಿದ್ದಾರೆ. ಈ ಸಂಬಂಧ ಶುಕ್ರವಾರ ಸಂಜೆ ವಿಶೇಷ ಕಾರ್ಯಾಂಗ ಆದೇಶ ಹೊರಡಿಸಿದ್ದಾರೆ. 'ಗ್ರಾಹಂ ಕಾನೂನಿನ ಅಡಿಯಲ್ಲಿ ವಿಧಿಸಲಾಗಿದ್ದ ನಿರ್ಬಂಧ ಹಾಗೂ ಸುಂಕಗಳಿಂದ ನಾನು ಅಧಿಕೃತವಾಗಿ ವಿನಾಯಿತಿ ನೀಡುತ್ತಿದ್ದೇನೆ' ಎಂದು ತಿಳಿಸಿದ್ದಾರೆ. ಈ ಹಂತದಲ್ಲಿ ವಿನಾಯಿತಿ ನೀಡುವುದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಅತ್ಯಗತ್ಯವಾಗಿದೆ ಎಂದು ಉಲ್ಲೇಖಿಸಿರುವ ಪ್ರಮಾಣಪತ್ರವನ್ನು ಅಮೆರಿಕದ ಸಂಸತ್ಗೆ ಸಲ್ಲಿಸಿರುವುದಾಗಿ ಟ್ರಂಪ್ ಮಾಹಿತಿ ನೀಡಿದ್ದಾರೆ. 'ಲಿಂಡ್ಸೆ ಒ ಗ್ರಾಹಂ ರಷ್ಯಾ ಮತ್ತು ಇರಾನ್ ನಿರ್ಬಂಧ ಕಾಯ್ದೆ'ಯು ರಷ್ಯಾದ ಮೇಲೆ ವ್ಯಾಪಕ ನಿರ್ಬಂಧವನ್ನು ಹೇರಲು ಮತ್ತು ಭಾರತ, ಚೀನಾ ಸೇರಿದಂತೆ ರಷ್ಯಾದಿಂದ ತೈಲ ಖರೀದಿ ಮಾಡುವ ರಾಷ್ಟ್ರಗಳ ಮೇಲೆ ವ್ಯಾಪಕ ಸುಂಕ ಹಾಗೂ ನಿರ್ಬಂಧ ವಿಧಿಸಲು ಟ್ರಂಪ್ ಅವರಿಗೆ ಅಧಿಕಾರ ನೀಡಿತ್ತು.ರಷ್ಯಾ ದಾಳಿ: 15 ಮಂದಿಗೆ ಗಾಯರಷ್ಯಾ ಜೊತೆ ಡೀಸೆಲ್ ಒಪ್ಪಂದ ನಮಗಾಗಿ ಅಲ್ಲ, ಜಗತ್ತಿಗೆ: ಟ್ರಂಪ್ ಸಮರ್ಥನೆ