ಚಿಕ್ಕಬಳ್ಳಾಪುರ: ಪದವೀಧರ ಕ್ಷೇತ್ರಕ್ಕೆ ಅ.23ರಂದು ಮತದಾನ
ಡಿ.ಎಂ.ಕುರ್ಕೆ ಪ್ರಶಾಂತಚಿಕ್ಕಬಳ್ಳಾಪುರ: ವಿಧಾನ ಪರಿಷತ್ನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಅ.23ರಂದು ಮತದಾನ ನಡೆಯಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 36 ಮತಗಟ್ಟೆ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 26,262 ಮತದಾರರು ಇದ್ದು, ಈ ಪೈಕಿ ಪುರುಷ ಪದವೀಧರ ಮತದಾರರೇ ಹೆಚ್ಚು.ಜಿಲ್ಲೆಯಲ್ಲಿ ಸಾಮಾನ್ಯ ಮತದಾರರ ಪಟ್ಟಿಯಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ

ಡಿ.ಎಂ.ಕುರ್ಕೆ ಪ್ರಶಾಂತಚಿಕ್ಕಬಳ್ಳಾಪುರ: ವಿಧಾನ ಪರಿಷತ್ನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಅ.23ರಂದು ಮತದಾನ ನಡೆಯಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 36 ಮತಗಟ್ಟೆ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 26,262 ಮತದಾರರು ಇದ್ದು, ಈ ಪೈಕಿ ಪುರುಷ ಪದವೀಧರ ಮತದಾರರೇ ಹೆಚ್ಚು.ಜಿಲ್ಲೆಯಲ್ಲಿ ಸಾಮಾನ್ಯ ಮತದಾರರ ಪಟ್ಟಿಯಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಅಧಿಕ. ಆದರೆ ಪದವೀಧರ ಕ್ಷೇತ್ರದಲ್ಲಿ ಇದಕ್ಕೆ ವಿರುದ್ಧವಾದ ಸ್ಥಿತಿ ಇದೆ. ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ಪುರುಷ ಪದವೀಧರ ಮತದಾರರೇ ಹೆಚ್ಚಿದ್ದಾರೆ. 14,984 ಪುರುಷ ಮತ್ತು 11,278 ಮಹಿಳಾ ಮತದಾರರು ಇದ್ದಾರೆ.ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ನ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಜಿಲ್ಲೆಯಲ್ಲಿ ಪ್ರಚಾರ ನಡೆಸಿದ್ದಾರೆ. ಅವರ ಪರವಾಗಿ ಜಿಲ್ಲೆಯಲ್ಲಿನ ಕಾಂಗ್ರೆಸ್ ಮುಖಂಡರು ಸಹ ಮತಯಾಚಿಸಿದ್ದಾರೆ. ಪ್ರಚಾರ ಸಭೆಗಳನ್ನು ಆಯೋಜಿಸುವ ವಿಚಾರದಲ್ಲಿ ಕಾಂಗ್ರೆಸ್ಗಿಂತ ಬಿಜೆಪಿಯೇ ಮುಂದಿದೆ.ಎನ್ಡಿಎ ಮುಖಂಡರು ವಿಧಾನಸಭಾ ಕ್ಷೇತ್ರವಾರು ಸಮಾವೇಶ ನಡೆಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ನ ರಾಜ್ಯ ಮಟ್ಟದ ನಾಯಕರು ಈ ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದಾರೆ. ಆದರೆ ಕಾಂಗ್ರೆಸ್ನಲ್ಲಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿ ಇದೆ.ಎಲ್ಲೆಲ್ಲಿ ಮತಗಟ್ಟೆ: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ಜಿಲ್ಲೆಯಲ್ಲಿ ಒಟ್ಟು 36 ಮತಗಟ್ಟೆ ಸ್ಥಾಪಿಸಲಾಗಿದೆ. ಈ ಪೈಕಿ 24 ಮತಗಟ್ಟೆ ನಗರ ಪ್ರದೇಶದಲ್ಲಿ ಮತ್ತು 12 ಮತಗಟ್ಟೆ ಗ್ರಾಮೀಣ ಪ್ರದೇಶಗಳಲ್ಲಿವೆ.ಗೌರಿಬಿದನೂರು ತಾಲ್ಲೂಕು ಕಚೇರಿಯಲ್ಲಿ ಸ್ಥಾಪಿಸಿರುವ ಮತಗಟ್ಟೆ 1,3,4 ಮತ್ತು 5ರಲ್ಲಿ ಕಸಬಾ, ನಗರಗೆರೆ ಮತ್ತು ಹೊಸೂರು ಹೋಬಳಿಯ ವ್ಯಾಪ್ತಿಯ ಪದವೀಧರ ಮತದಾರರು, ತಾಲ್ಲೂಕು ಕಚೇರಿಯ ಮತಗಟ್ಟೆ ಎರಡರಲ್ಲಿ ಡಿ.ಪಾಳ್ಯ ಮತ್ತು ತೊಂಡೇಬಾವಿ ಹೋಬಳಿಯ ಮತದಾರರು ಹಕ್ಕು ಚಲಾಯಿಸಬೇಕು. ಹೀಗೆ ಗೌರಿಬಿದನೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಐದು ಮತಗಟ್ಟೆ ಸ್ಥಾಪಿಸಲಾಗಿದೆ.ಮಂಚೇನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಈ ತಾಲ್ಲೂಕಿನ ಪದವೀಧರ ಮತದಾರರು ಹಕ್ಕು ಚಲಾಯಿಸಬಹುದು. ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿಯಲ್ಲಿ ಐದು ಮತಗಟ್ಟೆ ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ ನಂದಿ, ಕಸಬಾ ಹೋಬಳಿ ಮತದಾರರು ಮತ ಚಲಾಯಿಸಬೇಕು. ಪೆರೇಸಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಮಂಡಿಕಲ್ಲು ಹೋಬಳಿಯ ಪದವೀಧರ ಮತದಾರರು ಹಕ್ಕು ಚಲಾಯಿಸಬೇಕು.ಗುಡಿಬಂಡೆ ತಾಲ್ಲೂಕು ಕಚೇರಿಯಲ್ಲಿ ಎರಡು ಮತಗಟ್ಟೆ ಸ್ಥಾಪಿಸಿದ್ದು ಈ ತಾಲ್ಲೂಕಿನ ಎಲ್ಲ ಮತದಾರರು ಇಲ್ಲಿ ಹಕ್ಕು ಚಲಾಯಿಸಬೇಕು. ಬಾಗೇಪಲ್ಲಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮೂರು ಮತಗಟ್ಟೆ ಸ್ಥಾಪಿಸಿದ್ದು ಇಲ್ಲಿ ಗೂಳೂರು, ಕಸಬಾ ಮತ್ತು ಮಿಟ್ಟೇಮರಿ ಹೋಬಳಿಯ ಪದವೀಧರ ಮತದಾರರು ಹಕ್ಕು ಚಲಾಯಿಸಬೇಕು. ಪಾತಪಾಳ್ಯದ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಪಾತಪಾಳ್ಯ ಹೋಬಳಿ ಮತ್ತು ಚೇಳೂರು ತಾಲ್ಲೂಕು ಕಚೇರಿಯಲ್ಲಿ ಸ್ಥಾಪಿಸಿರುವ ಎರಡು ಮತಗಟ್ಟೆಗಳಲ್ಲಿ ಈ ತಾಲ್ಲೂಕು ವ್ಯಾಪ್ತಿಯ ಮತದಾರರು ಹಕ್ಕು ಚಲಾಯಿಸಬೇಕು.ಶಿಡ್ಲಘಟ್ಟ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಲ್ಕು ಮತಗಟ್ಟೆ ಸ್ಥಾಪಿಸಲಾಗಿದೆ. ಇಲ್ಲಿ ಜಂಗಮಕೋಟೆ ಮತ್ತು ಕಸಬಾ ಹೋಬಳಿಯ ಮತದಾರರು, ದಿಬ್ಬೂರಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಬಾಶೆಟ್ಟಿಹಳ್ಳಿ ಮತ್ತು ಸಾದಲಿ ಹೋಬಳಿಯ ಪದವೀಧರ ಮತದಾರರು ಹಕ್ಕು ಚಲಾಯಿಸಬೇಕು. ಚಿಂತಾಮಣಿ ತಾಲ್ಲೂಕಿನ ಮುಂಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎರಡು ಮತಗಟ್ಟೆಗಳಲ್ಲಿ ಈ ಹೋಬಳಿ, ಉಪ್ಪಾರಪೇಟೆಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಎರಡು ಮತಗಟ್ಟೆಯಲ್ಲಿ ಅಂಬಾಜಿದುರ್ಗ ಹೋಬಳಿಯ, ಕೈವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಥಾಪಿಸಿರುವ ಎರಡು ಮತಗಟ್ಟೆಯಲ್ಲಿ ಕೈವಾರ ಹೋಬಳಿ ವ್ಯಾಪ್ತಿಯ ಪದವೀಧರ ಮತದಾರರು ಹಕ್ಕು ಚಲಾಯಿಸಬೇಕು.ಚಿಂತಾಮಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಲ್ಲಿ ಐದು ಮತಗಟ್ಟೆ ಸ್ಥಾಪಿಸಲಾಗಿದೆ. ಇಲ್ಲಿ ಕಸಬಾ ಹೋಬಳಿ ಮತದಾರರು ಹಕ್ಕು ಚಲಾಯಿಸಬೇಕು.ಪ್ರತಿ ಮತಗಟ್ಟೆಯಲ್ಲಿ ಇಂತಿಷ್ಟು ಪ್ರಮಾಣದ ಮತದಾರರು ಹಕ್ಕು ಚಲಾಯಿಸಬೇಕು ಎಂದು ಸಂಖ್ಯಾವಾರು ಹಂಚಿಕೆ ಮಾಡಲಾಗಿದೆ.ಚಿಂತಾಮಣಿ ತಾಲ್ಲೂಕಿನಲ್ಲಿ 7,654 ಪದವೀಧರ ಮತದಾರರು ಇದ್ದಾರೆ. ಇದು ಜಿಲ್ಲೆಯಲ್ಲಿ ಗರಿಷ್ಠ ಪದವೀಧರ ಮತದಾರರನ್ನು ಹೊಂದಿರುವ ತಾಲ್ಲೂಕು ಎನಿಸಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿ 590 ಮತದಾರರ ಮೂಲಕ ಕಡಿಮೆ ಮತದಾರರನ್ನು ಹೊಂದಿರುವ ತಾಲ್ಲೂಕು ಎನಿಸಿದೆ.ಪ್ರಚಾರಕ್ಕೆ ಇನ್ನೂ ಬಾರದ ಸಚಿವ ಬೈರತಿ ಸುರೇಶ್ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಅವರ ಪರವಾಗಿ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಂದೂ ಪ್ರಚಾರ ಸಭೆ ನಡೆಸಿಲ್ಲ. ಜಿಲ್ಲಾ ಕೇಂದ್ರದಲ್ಲಿಯೇ ಮತದಾರರು, ಮುಖಂಡರು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿ ಒಂದೇ ಒಂದು ಸಭೆಯನ್ನೂ ಕಾಂಗ್ರೆಸ್ ನಡೆಸಿಲ್ಲ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ.ಜಿಲ್ಲೆಯ ಶಿಡ್ಲಘಟ್ಟ, ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ನೊಳಗೆ ಬಣ ರಾಜಕೀಯ ತೀವ್ರವಾಗಿದೆ. ಈ ಬಣ ರಾಜಕೀವನ್ನೆಲ್ಲ ಬದಿಗಿಟ್ಟು ಸಂಘಟನೆಗೆ ಒತ್ತು ನೀಡಬೇಕಾದ ಉಸ್ತುವಾರಿ ಸಚಿವರ ಗೈರು ಕಾಂಗ್ರೆಸ್ ಪಾಳಯದಲ್ಲಿ ಎದ್ದು ಕಾಣುತ್ತಿದೆ.261017-16-1577038794