ಟಾಸ್ಕ್ ಎರಡನೇ ಬಾರಿ ರದ್ದು – ಬಿಗ್ಬಾಸ್ ಸ್ಪರ್ಧಿಗಳ ಆಟಕ್ಕೆ ಕಿಚ್ಚ ಸುದೀಪ್ ಗರಂ
BBK 13: ಇಂದಿನ ವೀಕೆಂಡ್ ಎಪಿಸೋಡ್ನಲ್ಲಿ ಸ್ಪರ್ಧಿಗಳ ಆಟಕ್ಕೆ ಕಿಚ್ಚ ಸುದೀಪ್ ( kiccha sudeep) ಮತ್ತೆ ಗರಂ ಆಗಿದ್ದಾರೆ. ಕ್ಯಾಪ್ಟನ್ಸಿ ಆಯ್ಕೆಗಾಗಿ ನಡೆದ ಫಜಲ್ ಟಾಸ್ಕ್ನಲ್ಲಿ ಕಾವ್ಯ ಮತ್ತು ಗಾನವಿ ಮಾಡಿದ ಎಡವಟ್ಟಿನಿಂದಾಗಿ ಇಡೀ ಟಾಸ್ಕ್ ರದ್ದಾಗಿದೆ. ಈ ಸೀಸನ್ನಲ್ಲಿ ಎರಡನೇ ಬಾರಿಗೆ ಟಾಸ್ಕ್ ರದ್ದಾಗಿದ್ದು, ಸ್ಪರ್ಧಿಗಳ ತಪ್ಪಿಗೆ ಸುದೀಪ್ ತೀವ್ರ ಅಸಮಾಧಾ

BBK 13: ಇಂದಿನ ವೀಕೆಂಡ್ ಎಪಿಸೋಡ್ನಲ್ಲಿ ಸ್ಪರ್ಧಿಗಳ ಆಟಕ್ಕೆ ಕಿಚ್ಚ ಸುದೀಪ್ ( kiccha sudeep) ಮತ್ತೆ ಗರಂ ಆಗಿದ್ದಾರೆ. ಕ್ಯಾಪ್ಟನ್ಸಿ ಆಯ್ಕೆಗಾಗಿ ನಡೆದ ಫಜಲ್ ಟಾಸ್ಕ್ನಲ್ಲಿ ಕಾವ್ಯ ಮತ್ತು ಗಾನವಿ ಮಾಡಿದ ಎಡವಟ್ಟಿನಿಂದಾಗಿ ಇಡೀ ಟಾಸ್ಕ್ ರದ್ದಾಗಿದೆ. ಈ ಸೀಸನ್ನಲ್ಲಿ ಎರಡನೇ ಬಾರಿಗೆ ಟಾಸ್ಕ್ ರದ್ದಾಗಿದ್ದು, ಸ್ಪರ್ಧಿಗಳ ತಪ್ಪಿಗೆ ಸುದೀಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಯಾಪ್ಟನ್ಸಿ ಆಯ್ಕೆಗಾಗಿ ನಡೆದ ಟಾಸ್ಕ್ನಲ್ಲಿ ಕಾವ್ಯ ಮತ್ತು ಗಾನವಿ ಮಾಡಿದ ತಪ್ಪಿನಿಂದಾಗಿ ಆಟವೇ ರದ್ದಾಗಿದೆ. ಆಟವಾಡುವ ಭರದಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸೀಸನ್ನಲ್ಲಿ ಎರಡನೇ ಬಾರಿಗೆ ಟಾಸ್ಕ್ ರದ್ದಾಗಿರುವುದು ಮನೆಯೊಳಗಿನ ಸ್ಪರ್ಧಿಗಳ ಆಟದ ಬಗ್ಗೆ ಪ್ರಶ್ನೆ ಮೂಡಿಸಿದೆ. ಟಾಸ್ಕ್ ರದ್ದಾದ ಬಳಿಕ ಕ್ಯಾಪ್ಟನ್ಸಿ ಟಾಸ್ಕ್ನಿಂದ ಇಬ್ಬರು ಸ್ಪರ್ಧಿಗಳನ್ನು ಹೊರಗಿಡುವಂತೆ ಮನೆಯವರಿಗೆ ಸೂಚಿಸಲಾಗುತ್ತದೆ. ಆದರೆ, ಟಾಸ್ಕ್ ರದ್ದಾಗಲು ಕಾರಣರಾದವರನ್ನು ಹೊರಗಿಡುವ ಬದಲು ಪ್ರಶಾಂತ್ ಮತ್ತು ಆಸಿಯಾರನ್ನು ಸ್ಪರ್ಧೆಯಿಂದ ಹೊರಗಿಡುತ್ತಾರೆ. ಈ ನಿರ್ಧಾರವೇ ಇದೀಗ ಚರ್ಚೆಗೆ ಕಾರಣವಾಗಿದೆ. ವೀಕೆಂಡ್ ಎಪಿಸೋಡ್ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಕಿಚ್ಚ ಸುದೀಪ್, ಸ್ಪರ್ಧಿಗಳ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬರಿಗೆ ಬುದ್ಧಿ ಇಲ್ಲದಿದ್ದರೆ ಪರವಾಗಿಲ್ಲ, ಆದರೆ ಮನೆಯಲ್ಲಿರುವ ಎಲ್ಲರಿಗೂ ಬುದ್ಧಿ ಇಲ್ಲವೇ ಎಂಬರ್ಥದಲ್ಲಿ ಪ್ರಶ್ನಿಸಿ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಹ್ಲಾದ್ ಜೋಶಿ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದ ರೈತರಿಗೆ ಬಿಗ್ ಶಾಕ್ ಒಟ್ಟಿನಲ್ಲಿ, ಆಟದ ನಿಯಮಗಳನ್ನು ಪಾಲಿಸದಿರುವುದು ಮತ್ತು ತಪ್ಪು ಮಾಡಿದವರ ಬದಲಿಗೆ ಬೇರೆ ಸ್ಪರ್ಧಿಗಳನ್ನು ಹೊರಗಿಟ್ಟಿರುವ ವಿಚಾರಕ್ಕೆ ಕಿಚ್ಚ ಸುದೀಪ್ ಗರಂ ಆಗಿದ್ದು, ಇಂದಿನ ವೀಕೆಂಡ್ ಎಪಿಸೋಡ್ನಲ್ಲಿ ಈ ವಿಷಯ ಪ್ರಮುಖವಾಗಿ ಗಮನ ಸೆಳೆಯಲಿದೆ.ಇದನ್ನೂ ಓದಿ: ಗುರುಗ್ರಾಮ್ನಲ್ಲಿ ಟೆಕ್ಕಿ ದಂಪತಿ ನಿಗೂಢ ಸಾವು