ಡೀಪ್ಫೇಕ್ ವಿಡಿಯೊ ವಿರುದ್ಧ ಬಾಲಿವುಡ್ ನಟಿ ನೇಹಾ ಶರ್ಮಾ ಗರಂ
ನವದೆಹಲಿ: ತಮ್ಮ ಡೀಪ್ಫೇಕ್ ವಿಡಿಯೊ ಮತ್ತು ಪೋಸ್ಟ್ಗಳನ್ನು ಹಂಚಿಕೊಳ್ಳುವವರ ವಿರುದ್ಧ ಬಾಲಿವುಡ್ ನಟಿ ನೇಹಾ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನನ್ನ ಫೋಟೊ ಬಳಸಿ ಎಐ ದೃಶ್ಯಾವಳಿಗಳನ್ನು ಸೃಷ್ಟಿಸುವುದು ಸರಿಯಲ್ಲ. ತಕ್ಷಣವೇ ಇಂತಹ ಪೋಸ್ಟ್ಗಳನ್ನು ಡಿಲೀಟ್ ಮಾಡಿ. ಇಲ್ಲದಿದ್ದರೆ ಪೋಸ್ಟ್

ನವದೆಹಲಿ: ತಮ್ಮ ಡೀಪ್ಫೇಕ್ ವಿಡಿಯೊ ಮತ್ತು ಪೋಸ್ಟ್ಗಳನ್ನು ಹಂಚಿಕೊಳ್ಳುವವರ ವಿರುದ್ಧ ಬಾಲಿವುಡ್ ನಟಿ ನೇಹಾ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನನ್ನ ಫೋಟೊ ಬಳಸಿ ಎಐ ದೃಶ್ಯಾವಳಿಗಳನ್ನು ಸೃಷ್ಟಿಸುವುದು ಸರಿಯಲ್ಲ. ತಕ್ಷಣವೇ ಇಂತಹ ಪೋಸ್ಟ್ಗಳನ್ನು ಡಿಲೀಟ್ ಮಾಡಿ. ಇಲ್ಲದಿದ್ದರೆ ಪೋಸ್ಟ್ ಹಂಚಿಕೊಂಡವರ ವಿರುದ್ಧ ಕ್ರಮಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ರಣಬಾಲಿ ವೀಕ್ಷಿಸಿದ ಸಂದೀಪ್ ರೆಡ್ಡಿ ವಂಗಾ: ವಿಜಯ್ ದೇವರಕೊಂಡ ಬಗ್ಗೆ ಹೇಳಿದ್ದಿಷ್ಟುದೆಹಲಿಯಲ್ಲಿ ಪ್ರತಿಭಟನೆ ನೆಪದಲ್ಲಿ ಹಿಂದೂ ಹಬ್ಬಗಳಿಗೆ ಅಡ್ಡಿ:ವಿಶ್ವ ಹಿಂದೂ ಪರಿಷತ್ ‘ನನ್ನ ಹೆಸರಿಗೆ ಕಳಂಕ ತರಲು ಅಥವಾ ನನ್ನನ್ನು ತಪ್ಪಾಗಿ ಬಿಂಬಿಸಲು ಈ ರೀತಿ ಮಾಡುವುದು ಸರಿಯಲ್ಲ. ನನ್ನ ಫೋಟೊಗಳ ಅನಧಿಕೃತ ಬಳಕೆಗೆ ನಾನು ಸಮ್ಮತಿ ನೀಡುವುದಿಲ್ಲ‘ ಎಂದು ಹೇಳಿದ್ದಾರೆ.'ಇದು ನನ್ನ ಕಡೆಯಿಂದ ನೀಡುತಿರುವ ಅಧಿಕೃತ ಮುನ್ನೆಚ್ಚರಿಕೆ. ಇಂತಹ ಕೃತ್ಯದಲ್ಲಿ ತೊಡಗಿರುವ, ಪೋಸ್ಟ್ ಮಾಡುವ ಅಥವಾ ಹಂಚಿಕೊಳ್ಳುವ ಪ್ರತಿಯೊಬ್ಬರ ವಿರುದ್ಧವೂ ನಾನು ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ಫೇಕ್ ಅಕೌಂಟ್ ಹಿಂದೆ ಅಡಗಿ ಕುಳಿತು ತಪ್ಪಿಸಿಕೊಳ್ಳಬಹುದು ಎಂದು ಯಾರು ಭಾವಿಸಬೇಡಿ' ಎಂದಿದ್ದಾರೆ.ಹೆಚ್ಚುತ್ತಿರುವ ಡೀಪ್ಫೇಕ್ ಆತಂಕಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ಪ್ರಮುಖ ನಟ-ನಟಿಯರ ಡೀಪ್ಫೇಕ್ ವಿಡಿಯೊಗಳು ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಆತಂಕಕಾರಿ ವಿಷಯವಾಗಿದೆ. ನೇಹಾ ಶರ್ಮಾ ಅವರಿಗೂ ಮುನ್ನ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ರಣ್ವೀರ್ ಸಿಂಗ್ ಹಾಗೂ ಆಲಿಯಾ ಭಟ್ ಸೇರಿದಂತೆ ಹಲವು ತಾರೆಯರು ಡೀಪ್ಫೇಕ್ ತಂತ್ರಜ್ಞಾನದ ದುರ್ಬಳಕೆಗೆ ಒಳಗಾಗಿದ್ದರು.ಭಾರತ ತೊರೆಯಿರಿ..: ಪೊಲೀಸ್ ನೋಟಿಸ್ ಪ್ರಶ್ನಿಸಿ ಬಾಂಬೆ HC ಮೆಟ್ಟಿಲೇರಿದ ಇಮ್ರಾನ್ಟೆಸ್ಲಾದ ಹಾರುವ ಕಾರು: ತಂತ್ರಜ್ಞಾನದ ಕಸರತ್ತೋ, ಹೊಸ ಕ್ರಾಂತಿಯೋ?