ಪತಂಗ ಉತ್ಸವ ಚಾಲನೆ: ಗಾಳಿಪಟ ಹಾರಿಸಿ ಸಂಭ್ರಮಿಸಿದ ಜನ
ಬೀದರ್: ಆಕಾಶದಲ್ಲಿ ಗಾಳಿಪಟ ಮುಗಿಲೆತ್ತರಕ್ಕೆ ಹಾರುತ್ತಿದ್ದಂತೆ ಮುಖದಲ್ಲಿ ಏನೋ ಸಾಧಿಸಿದ ಸಂಭ್ರಮ, ಖುಷಿ. ಚಿಣ್ಣರಿಂದ ಹಿರಿಯರ ವರೆಗೆ ಎಲ್ಲಾ ವಯೋಮಾನದವರು ಬಗೆಬಗೆಯ ಗಾಳಿಪಟಗಳನ್ನು ಹಾರಿಸಿ, ‘ಪೇಂಚ್’ ಆಡಿ ಖುಷಿಪಟ್ಟರು. ಹಿರಿಯರು ತಮ್ಮ ಯೌವ್ವನದ ದಿನಗಳನ್ನು ಮೆಲುಕು ಹಾಕಿದರು. ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ

ಬೀದರ್: ಆಕಾಶದಲ್ಲಿ ಗಾಳಿಪಟ ಮುಗಿಲೆತ್ತರಕ್ಕೆ ಹಾರುತ್ತಿದ್ದಂತೆ ಮುಖದಲ್ಲಿ ಏನೋ ಸಾಧಿಸಿದ ಸಂಭ್ರಮ, ಖುಷಿ. ಚಿಣ್ಣರಿಂದ ಹಿರಿಯರ ವರೆಗೆ ಎಲ್ಲಾ ವಯೋಮಾನದವರು ಬಗೆಬಗೆಯ ಗಾಳಿಪಟಗಳನ್ನು ಹಾರಿಸಿ, ‘ಪೇಂಚ್’ ಆಡಿ ಖುಷಿಪಟ್ಟರು. ಹಿರಿಯರು ತಮ್ಮ ಯೌವ್ವನದ ದಿನಗಳನ್ನು ಮೆಲುಕು ಹಾಕಿದರು. ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಪತಂಗ ಉತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು. ಇಡೀ ಕಾಲೇಜಿನ ಆವರಣದಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ಎಲ್ಲೆಲ್ಲೂ ಗಾಳಿಪಟಗಳು ಕಂಡು ಬಂದವು. ಅದನ್ನು ಹಾರಿಸುತ ಕೇಕೆ ಹಾಕಿ, ಶಿಳ್ಳೆ ಹೊಡೆದು ಯುವಜನರು ಸಂಭ್ರಮಿಸಿದರು. ಚಿಣ್ಣರಿಗೆ ಹಿರಿಯರು ಗಾಳಿಪಟದ ಸೂತ್ರ ಕೊಟ್ಟು ಮಾರ್ಗದರ್ಶನ ಮಾಡಿದರು. ಬೀದರ್ ಪತಂಗ್ ಉತ್ಸವ ಸಮಿತಿ ಏರ್ಪಡಿಸಿದ್ದ ಉತ್ಸವದಲ್ಲಿ ಹೈದರಾಬಾದ್ನ ಕೋಹಿನೂರ್ ಕೈಟ್ ಕ್ಲಬ್ ಹಾಗೂ ಇಂಡಿಯನ್ ಕೈಟ್ ಫ್ಲೈಯರ್ ಕ್ಲಬ್ಗಳ ಬಗೆಬಗೆಯ ಗಾಳಿಪಟಗಳು ಎಲ್ಲರ ಗಮನ ಸೆಳೆದವು. ಸ್ಥಳದಲ್ಲೇ ಪತಂಗ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿತ್ತು.ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಗಾಳಿಪಟ ಹಾರಿಸಿ, ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಉಳಿಸುವ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನಾರ್ಹ ಕೆಲಸ. ಇದೊಂದು ನಾಡಿಗೆ ಹೆಮ್ಮೆಯ ಸಂಗತಿ. ವಿಜಯದ ಸಂಕೇತವಾದ ದಸರಾ ಹಬ್ಬದಲ್ಲಿ ವಿಶಿಷ್ಟವಾಗಿ ನಮ್ಮ ಪೂರ್ವಜರು ಪತಂಗ ಹಾರಿಸುತ್ತಿದ್ದರು. ಆ ಸಂಸ್ಕೃತಿಯನ್ನು ನಾವು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.ಪತಂಗದೊಂದಿಗೆ ಚಿಣ್ಣರ ಸಂಭ್ರಮವಿಜ್ಞಾನ ಎಷ್ಟೇ ಮುಂದುವರಿದರೂ ನಮ್ಮತನ ಎನ್ನುವುದು ಮನುಷ್ಯನಿಗೆ ಬೇಕು. ಇಲ್ಲದಿದ್ದರೆ ಮನುಷ್ಯ ಯಂತ್ರದಂತೆ ಬದುಕಬೇಕಾಗುತ್ತದೆ. ನಮ್ಮತನಕ್ಕೆ ತಾಜಾ ಉದಾಹರಣೆ ಈ ಪತಂಗ ಉತ್ಸವ ಎಂದು ತಿಳಿಸಿದರು.ವಿವಿಧ ಪ್ರಕಾರದ ಗಾಳಿಪಟಗಳು ಆಕಾಶದಲ್ಲಿ ಹಾರುತ್ತಿರುವುದು ನೋಡಿದರೆ ಮನಸ್ಸಿಗೆ ಬಹಳ ಖುಷಿಯಾಗುತ್ತದೆ. ಈ ರೀತಿಯ ಕಾರ್ಯಕ್ರಮಗಳಿಂದ ಚಿಣ್ಣರು, ಯುವಜನರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತದೆ ಎಂದರು.ಶಾಸಕ ರಹೀಂ ಖಾನ್ ಮಾತನಾಡಿ, ‘ಈ ಕಾರ್ಯಕ್ರಮ ನೋಡಿದ ಮೇಲೆ ನನಗೆ ನನ್ನ ಬಾಲ್ಯದ ದಿನಗಳು ನೆನಪಾಗಿವೆ. ಒತ್ತಡದ ಜೀವನದಲ್ಲಿ ಮನುಷ್ಯನಿಗೆ ಖುಷಿ ಕೊಡುವ ಚಟುವಟಿಕೆಗಳು ಹೆಚ್ಚಾಗಿ ನಡೆಯಬೇಕು. ಉತ್ಸವ ಸಮಿತಿ ನಿಜಕ್ಕೂ ಉತ್ತಮ ಕೆಲಸ ಮಾಡಿದೆ’ ಎಂದು ಹೇಳಿದರು.ಉತ್ಸವ ಸಮಿತಿಯ ಆಯೋಜಕ ಬಾಬು ವಾಲಿ, ಪ್ರಧಾನ ಕಾರ್ಯದರ್ಶಿ ರವಿ ಮೂಲಗೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಪ್ರಮುಖರಾದ ಸೋಮಶೇಖರ ಪಾಟೀಲ ಗಾದಗಿ, ದೀಪಕ್ ವಾಲಿ, ಡಾ. ರಜನೀಶ್ ವಾಲಿ, ಕರ್ನಲ್ ಶರಣಪ್ಪ ಸಿಕೇನಪುರ, ಪ್ರಕಾಶ ಟೊಣ್ಣೆ, ಡಾ. ರಾಜಶೇಖರ ಕೌಜಲಗಿ, ಜೈರಾಜ್ ಖಂಡ್ರೆ, ದಿಗಂಬರ್ ಮಡಿವಾಳ, ವಿಜಯಕುಮಾರ ಪಾಟೀಲ ಯರನಳ್ಳಿ, ಹಣಮಂತ, ಧನರಾಜ್ ಹಂಗರಗಿ, ರಮೇಶ್ ಬಿರಾದಾರ ಚಿಟ್ಟಾ, ಪ್ರಭು ಮಡಿವಾಳ, ಸಂತೋಷ ಬಾಲೋಡೆ, ದೀಪಾ ಬಾಲೋಡೆ, ಸುನೀಲ್ ದಳವೆ, ಚೇತನ್ ಬಾವಿ, ಬಾಬು ದಾನಿ ಉಪಸ್ಥಿತರಿದ್ದರು. ಗಾಳಿಪಟ ಹಾರಿಸಿ ಸಂಭ್ರಮಿಸಿದ ಪುಟಾಣಿಗಳು– ರತ್ನಾ, ಸ್ಥಳೀಯ ನಿವಾಸಿಗಾಳಿಪಟ ಉತ್ಸವ ನೋಡಿ ನಿಜಕ್ಕೂ ಬಹಳ ಖುಷಿಯಾಗಿದೆ. ಇದರಲ್ಲಿ ಭಾಗವಹಿಸಿ ನಮ್ಮ ಮಕ್ಕಳು ಖುಷಿಪಟ್ಟಿದ್ದಾರೆ. ಒಂದು ವಾರ ಇದ್ದಿದ್ದರೆ ಚೆನ್ನಾಗಿತ್ತು – ರಾಜೇಶ್ ಸ್ಥಳೀಯ ನಿವಾಸಿಈಗ ಹಬ್ಬದ ರಜೆ. ಮಕ್ಕಳು ಮನೆಯಲ್ಲಿ ಮೊಬೈಲ್ ಟಿವಿ ಮುಂದೆ ಕಳೆಯುತ್ತಾರೆ. ಗಾಳಿಪಟ ಉತ್ಸವದಿಂದ ಅವರು ಹೊರಗೆ ಬರುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಶಾಸಕ ರಹೀಂ ಖಾನ್ ಅವರು ಗಾಳಿಪಟ ಹಾರಿಸಿ ಪತಂಗ ಉತ್ಸವಕ್ಕೆ ಚಾಲನೆ ನೀಡಿದರು