ದೆಹಲಿಯಲ್ಲಿ ಪ್ರತಿಭಟನೆ ನೆಪದಲ್ಲಿ ಹಿಂದೂ ಹಬ್ಬಗಳಿಗೆ ಅಡ್ಡಿ:ವಿಶ್ವ ಹಿಂದೂ ಪರಿಷತ್
ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ನೆಪದಲ್ಲಿ ವ್ಯಾಪಾರಕ್ಕೆ ಅಡ್ಡಿಪಡಿಸುವ, ಕಾರ್ಮಿಕರ ದಿನಗೂಲಿ ಕಸಿಯುವ ಮತ್ತು ಬೀದಿ ವ್ಯಾಪಾರಿಗಳು, ಆಟೊ ಚಾಲಕರು ಸೇರಿದಂತೆ ವಿವಿಧ ವರ್ಗದ ಜನರ ಜೀವನೋಪಾಯಕ್ಕೆ ಧಕ್ಕೆ ತರುವ ಸಂಚು ನಡೆಯುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಶನಿವಾರ ಆರೋಪಿಸಿದೆ.ರಾಷ್ಟ್ರೀಯ ಸ್ವಯಂಸೇವಕ ಸ
ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ನೆಪದಲ್ಲಿ ವ್ಯಾಪಾರಕ್ಕೆ ಅಡ್ಡಿಪಡಿಸುವ, ಕಾರ್ಮಿಕರ ದಿನಗೂಲಿ ಕಸಿಯುವ ಮತ್ತು ಬೀದಿ ವ್ಯಾಪಾರಿಗಳು, ಆಟೊ ಚಾಲಕರು ಸೇರಿದಂತೆ ವಿವಿಧ ವರ್ಗದ ಜನರ ಜೀವನೋಪಾಯಕ್ಕೆ ಧಕ್ಕೆ ತರುವ ಸಂಚು ನಡೆಯುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಶನಿವಾರ ಆರೋಪಿಸಿದೆ.ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಂಗಸಂಸ್ಥೆಯಾಗಿರುವ ವಿಎಚ್ಪಿ, ಪ್ರತಿಭಟನಾಕಾರರು ಒಂದು ಸಂಸ್ಥೆಯ ವಿರುದ್ಧ ಹೋರಾಡುವ ನೆಪದಲ್ಲಿ ಇತರರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಹೇಳಿದೆ. ಹಬ್ಬದ ಋತುವಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ ವ್ಯಾಪಾರಿಗಳು ಮತ್ತು ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದಿದೆ.ನೇಹಾ ಬೋರಾ ಬಿಡುಗಡೆ: ದೀಪ್ಕೆ ಬಂಧನ ಖಚಿತಪಡಿಸಿದ ದೆಹಲಿ ಪೊಲೀಸ್ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಳೆದ ಹಲವು ದಿನಗಳಿಂದ ದೆಹಲಿಯ ಕೇಂದ್ರ ಭಾಗದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಹಿಂದೂ ಹಬ್ಬಗಳ ಮೇಲೆ ಅಘೋಷಿತ ನಿಷೇಧ ಹೇರಲು ದೆಹಲಿಯಲ್ಲಿ‘ದುರುದ್ದೇಶಪೂರಿತ ಪ್ರಯತ್ನಗಳು ನಡೆಯುತ್ತಿವೆ ಎಂದು ವಿಎಚ್ಪಿಯ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ಅವು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಆರ್ಥಿಕ ಸಮೃದ್ಧಿಗೆ ಕೊಡುಗೆ ನೀಡುವುದರ ಜತೆಗೆ ಸೌಹಾರ್ದ, ಸಹೋದರತ್ವ ಮತ್ತು ಪ್ರೀತಿಯನ್ನು ಬೆಳೆಸುತ್ತವೆ ಎಂದು ಬನ್ಸಾಲ್ ಹೇಳಿದ್ದಾರೆ.ಆದರೆ, ಹಿಂದೂ ಹಬ್ಬಗಳು ಪದೇಪದೇ ‘ಬೌದ್ಧಿಕ ಮಾಲಿನ್ಯ’, ವಾಣಿಜ್ಯ ಹಿತಾಸಕ್ತಿಗಳು ಮತ್ತು ವಿದೇಶಿ ಶಕ್ತಿಗಳಿಂದ ಬಲಿಯಾಗುತ್ತಿವೆ. ಹಿಂದೂಗಳು ಸೇರಿದಂತೆ ಇತರ ವ್ಯಾಪಾರಿಗಳ ಜೀವನೋಪಾಯದ ಜತೆಗೆ ಹಬ್ಬಗಳನ್ನು ಆಚರಿಸುವ ಸಂತೋಷವನ್ನೂ ಕಸಿದುಕೊಳ್ಳಲಾಗುತ್ತಿದೆ ಎಂದು ಬನ್ಸಾಲ್ ಹೇಳಿದ್ದಾರೆ.ಸಿಜೆಪಿ ಮುಖಂಡರ ಬಂಧನ, ಪೊಲೀಸ್ ದೌರ್ಜನ್ಯ ಖಂಡಿಸಿ ಮೈಸೂರಿನಲ್ಲಿ ಬೃಹತ್ ಜಾಥಾಕನ್ನಾಟ್ ಪ್ಲೇಸ್, ಕರೋಲ್ ಬಾಗ್ ಮತ್ತು ಸದರ್ ಬಜಾರ್ ಸೇರಿದಂತೆ ದೆಹಲಿಯ ಪ್ರಮುಖ ವಾಣಿಜ್ಯ ಪ್ರದೇಶಗಗಳಿ ದೇಶಾದ್ಯಂತದ ವ್ಯಾಪಾರಿಗಳು ಮತ್ತು ಖರೀದಿದಾರರಿಗೆ ಪ್ರಮುಖ ಕೇಂದ್ರಗಳಾಗಿವೆ. ವರ್ಷದ ಈ ಅವಧಿಯಲ್ಲಿ ಜನರಿಂದ ತುಂಬಿರುತ್ತಿದ್ದ ಮಾರುಕಟ್ಟೆಗಳು ಈಗ ಬಿಕೋ ಎನ್ನುತ್ತಿವೆ. ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದರೂ ವ್ಯಾಪಾರ ಚಟುವಟಿಕೆಗಳು ಕುಂಠಿತವಾಗಿವೆ ಎಂದು ಅವರು ಆರೋಪಿಸಿದ್ದಾರೆ.‘ಈ ಇಡೀ ಪ್ರದೇಶವನ್ನು ದಿನದಿಂದ ದಿನಕ್ಕೆ ಒತ್ತೆಯಾಳಾಗಿ ಇರಿಸಿಕೊಳ್ಳುವ ದುರುದ್ದೇಶಪೂರಿತ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ದೇಶದ ಆರ್ಥಿಕತೆಗೆ ಹೊಡೆತ ಬೀಳುತ್ತಿದೆ. ಚುನಾವಣಾ ಆಯೋಗದ ವಿರುದ್ಧದ ಹೋರಾಟದ ಹೆಸರಿನಲ್ಲಿ ಸರ್ಕಾರ, ಆಡಳಿತ, ಭದ್ರತಾ ಪಡೆಗಳು ಮತ್ತು ಸುಪ್ರೀಂ ಕೋರ್ಟ್ ಕೂಡ ಗುರಿಯಾಗುತ್ತಿವೆ’ ಎಂದು ಬನ್ಸಾಲ್ ಹೇಳಿದ್ದಾರೆ.ಮೊಹರಂ, ಈದ್, ಕ್ರಿಸ್ಮಸ್ ಅಥವಾ ಇತರ ಹಿಂದೂಯೇತರ ಹಬ್ಬಗಳ ಸಂದರ್ಭದಲ್ಲಿ ಇಂತಹ ಪ್ರತಿಭಟನೆಗಳು ಏಕೆ ನಡೆಯುವುದಿಲ್ಲ? ಹಿಂದೂ ಹಬ್ಬಗಳು ಸಮೀಪಿಸಿದಾಗಲೆಲ್ಲ ‘ಹಿಂದೂ ವಿರೋಧಿ ಶಕ್ತಿಗಳು’ ಸಕ್ರಿಯವಾಗುತ್ತವೆ ಎಂದೂ ಅವರು ಆರೋಪಿಸಿದ್ದಾರೆ.‘ಈ ಪ್ರವೃತ್ತಿ ಈಗಲೇ ನಿಲ್ಲಬೇಕು’ ಎಂದು ಹೇಳಿರುವ ಅವರು, ಜನರನ್ನು ಹತ್ತಿಕ್ಕುವ ಮೂಲಕ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗಳನ್ನು ದೀರ್ಘಕಾಲ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.ಸಿಜೆಪಿ ಪ್ರತಿಭಟನೆ ಬೆನ್ನಲ್ಲೇ ಗಾಂಧಿ ಮರಿಮೊಮ್ಮಗ ತುಷಾರ್ರಿಂದ ಸತ್ಯಾಗ್ರಹ