ಬಿಗ್ ಬಾಸ್ ಮನೆಯಿಂದ ಕಾವ್ಯ ಔಟ್
ಬಿಗ್ ಬಾಸ್ ಸೀಸನ್ 13ರ ಮನೆಯಿಂದ ಕಾವ್ಯ ಔಟ್ ಆಗಿದ್ದಾರೆ. ಆರಂಭದಿಂದಲೂ ಸೇಫ್ ಗೇಮ್ ಮೂಲಕವೇ ಸೇವ್ ಆಗಿದ್ದಾರೆಂಬ ಆರೋಪ ಹೊತ್ತಿದ್ದ ಕಾವ್ಯ ಆಟಕ್ಕೆ ದೊಡ್ಮನೆ ಬ್ರೇಕ್ ಹಾಕಿದೆ. ಅಂತಿಮ ಹಂತದ ನಾಮಿನೇಷನ್ ಪ್ರಕ್ರಿಯೆಯಲ್ಲಿ ತಾಂಡವ್, ಸೋನಿಕಾ, ಕಾವ್ಯ ಅದೃಷ್ಟ ಪರೀಕ್ಷೆಗಿಳಿದಿದ್ದರು. ಕಿಚ್ಚ ಸುದೀಪ್ ಒಂದು ಚಟುವಟಿಕೆ ಮೂಲಕ ಎವಿಕ್ಷನ್ ಪ್ರಕ್ರಿಯೆ ನಡೆಸಿದರು

ಬಿಗ್ ಬಾಸ್ ಸೀಸನ್ 13ರ ಮನೆಯಿಂದ ಕಾವ್ಯ ಔಟ್ ಆಗಿದ್ದಾರೆ. ಆರಂಭದಿಂದಲೂ ಸೇಫ್ ಗೇಮ್ ಮೂಲಕವೇ ಸೇವ್ ಆಗಿದ್ದಾರೆಂಬ ಆರೋಪ ಹೊತ್ತಿದ್ದ ಕಾವ್ಯ ಆಟಕ್ಕೆ ದೊಡ್ಮನೆ ಬ್ರೇಕ್ ಹಾಕಿದೆ. ಅಂತಿಮ ಹಂತದ ನಾಮಿನೇಷನ್ ಪ್ರಕ್ರಿಯೆಯಲ್ಲಿ ತಾಂಡವ್, ಸೋನಿಕಾ, ಕಾವ್ಯ ಅದೃಷ್ಟ ಪರೀಕ್ಷೆಗಿಳಿದಿದ್ದರು. ಕಿಚ್ಚ ಸುದೀಪ್ ಒಂದು ಚಟುವಟಿಕೆ ಮೂಲಕ ಎವಿಕ್ಷನ್ ಪ್ರಕ್ರಿಯೆ ನಡೆಸಿದರು. ಈ ಮೂವರು ಸ್ಪರ್ಧಿಗಳನ್ನು ಆಕ್ಟಿವಿಟಿ ರೂಮ್ಗೆ ಸುದೀಪ್ ಕಳುಹಿಸಿದರು. ರೂಮ್ನಲ್ಲಿ ಮೂವರನ್ನೂ ಒಂದೊಂದು ಸೂಟ್ಕೇಸ್ ಬಳಿ ನಿಲ್ಲಿಸಲಾಯಿತು. ಸೂಟ್ಕೇಸ್ ತೆರೆದು ನೋಡುವಂತೆ ಕಿಚ್ಚ ಹೇಳಿದರು. ಯಾರ ಸೂಟ್ಕೇಸ್ನಲ್ಲಿ ಸೇಫ್ ಅಂತ ಬೋರ್ಡ್ ಇರುತ್ತೋ ಅವರು ಮನೆಯಲ್ಲಿ ಆಟ ಮುಂದುವರಿಸುತ್ತಾರೆ. ಎವಿಕ್ಷನ್ ಅಂತ ಬೋರ್ಡ್ ಇರುವವರು ದೊಡ್ಮನೆಯಲ್ಲಿ ಆಟ ಕೊನೆಗೊಳಿಸುತ್ತಾರೆ ಅಂತ ತಿಳಿಸಿದರು. ಕೊನೆಗೆ ಸೂಟ್ಕೇಸ್ ತೆರೆದಾಗ ಸೋನಿಕಾ ಮತ್ತು ತಾಂಡವ್ ಸೇಫ್ ಬೋರ್ಡ್ ಪಡೆದು ಉಳಿದುಕೊಂಡರು. ಆದರೆ, ಕಾವ್ಯ ಅವರ ಸೂಟ್ಕೇಸ್ನಲ್ಲಿ EVICTED ಅಂತ ಬೋರ್ಡ್ ಇತ್ತು. ಕೊನೆಗೆ ಕಾವ್ಯ ಮನೆಯಿಂದ ಹೊರಹೋಗಬೇಕಾಯಿತು.
Read the complete story at Public TV Kannada